ಅಗತ್ಯ ದಾಖಲೆ, ಮೊಬೈಲ್ ಕಳೆದು ಹೋದರೆ ಪೋಲಿಸ್ ಠಾಣೆಗೆ ಹೋಗಬೇಕಿಲ್ಲ – ಮನೆಯಲ್ಲೇ ಕುಳಿತು ದೂರು ನೀಡಬಹುದು : ಮಾಹಿತಿ ಇಲ್ಲಿದೆ..

ಅಗತ್ಯ ದಾಖಲೆ, ಮೊಬೈಲ್ ಕಳೆದು ಹೋದರೆ ಪೋಲಿಸ್ ಠಾಣೆಗೆ ಹೋಗಬೇಕಿಲ್ಲ – ಮನೆಯಲ್ಲೇ ಕುಳಿತು ದೂರು ನೀಡಬಹುದು : ಮಾಹಿತಿ ಇಲ್ಲಿದೆ..

ನ್ಯೂಸ್ ಆ್ಯರೋ‌ : ಕೆಲವೊಂದು ಬಾರಿ ಅಗತ್ಯ ದಾಖಲೆಗಳು, ಮೊಬೈಲ್ ಫೋನ್ ಕಳೆದು ಹೋಗುತ್ತವೆ. ಹಿಂದೆಲ್ಲ ಈ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನಿಡಬೇಕಾಗಿತ್ತು. ಆದರೆ ಈಗ ಅದರ ಆವಶ್ಯಕತೆ ಇಲ್ಲ. ಕುಳಿತಲ್ಲಿಂದಲೇ ದೂರು ನೀಡಬಹುದು. ಅದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.

ಹೀಗೆ ಮಾಡಿ

ರಾಜ್ಯ ಪೊಲೀಸ್ ಇಲಾಖೆಯ ವೆಬ್ ಸೈಟ್ https://ksp.karnataka.gov.in/ಗೆ ಭೇಟಿ ನೀಡಿದಾಗ ಇ-ಲಾಸ್ಟ್(E-Lost)ಎನ್ನುವ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಕಳೆದು ಹೋದ ವಸ್ತುವಿನ ಬಗ್ಗೆ ಅಲ್ಲಿ ಉಲ್ಲೇಖಿಸಬಹುದು.

ಮಾತ್ರವಲ್ಲ ಗೂಗಲ್ ಪ್ಲೇ ಸ್ಟೋರ್ ನಲ್ಲಿ KSP APP ಡೌನ್ ಲೋಡ್ ಮಾಡಿ, ಇ-ಲಾಸ್ಟ್ ಎಂಬ ಮೆನು ಆಯ್ಕೆ ಮಾಡಿಕೊಂಡು ಫೋನ್ ನಂಬರ್ ನಮೂದಿಸಿ ಕಳೆದುಕೊಂಡ ವಸ್ತುವಿನ ಬಗ್ಗೆ ದೂರು ನೀಡಿ, ರಶೀದಿ ಪಡೆದುಕೊಳ್ಳಬಹುದು.

ಯಾವೆಲ್ಲ ದಾಖಲೆ ಕಳೆದು ಹೋದರೆ ದೂರು ನೀಡಬಹುದು?

ಕ್ರೆಡಿಟ್, ಡೆಬಿಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಚೆಕ್, ಡಿಡಿ, ವೋಟರ್ ಐಡಿ, ಟ್ಯಾಬ್, ಐ ಪ್ಯಾಡ್, ಲ್ಯಾಪ್ ಟಾಪ್, ಮೊಬೈಲ್ ಫೋನ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಮಾರ್ಕ್ಸ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *