Jio Recharge : ಕೇವಲ 397 ರೂ ರೀಚಾರ್ಜ್ ಮಾಡಿದ್ರೆ 5 ತಿಂಗಳ ಅನ್ ಲಿಮಿಟೆಡ್ ಬಂಪರ್ – ದಿನಕ್ಕೆ 2GB‌ ಫ್ರೀ..! ಇದ್ರಲ್ಲಿ ಇನ್ನೇನಿದೆ ಆಫರ್ ಗೊತ್ತಾ?

Jio Recharge : ಕೇವಲ 397 ರೂ ರೀಚಾರ್ಜ್ ಮಾಡಿದ್ರೆ 5 ತಿಂಗಳ ಅನ್ ಲಿಮಿಟೆಡ್ ಬಂಪರ್ – ದಿನಕ್ಕೆ 2GB‌ ಫ್ರೀ..! ಇದ್ರಲ್ಲಿ ಇನ್ನೇನಿದೆ ಆಫರ್ ಗೊತ್ತಾ?

ನ್ಯೂಸ್ ಆ್ಯರೋ : ಈಗಂತೂ ದೇಶದೆಲ್ಲೆಡೆ IPL ಹವಾ ತುಸು‌ ಜೋರಾಗಿಯೇ ಬೀಸುತ್ತಿದೆ. ಟಿವಿ ಗಿಂತ ಹೆಚ್ಚಾಗಿ ಜನರು ಜಿಯೋ ಸಿನಿಮಾ‌ ಮೂಲಕ ಮೊಬೈಲ್ ನಲ್ಲೇ‌ ಐಪಿಎಲ್ ವೀಕ್ಷಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಪಂದ್ಯಾಟ ವೀಕ್ಷಿಸುತ್ತಿದಂತೆಯೇ ಡೇಟಾ ಖಾಲಿ ಆಗುತ್ತಿರಬಹುದು. ಇಂತಹ‌ ಸಮಸ್ಯೆಗಳಿಂದ ಜನರನ್ನು‌ ಪಾರು ಮಾಡಲು ಜಿಯೋ ಇದೀಗ ಕ್ರಿಕೆಟ್ ಪ್ರೇಮಿಗಳಿಗಾಗಿ ಬಂಪರ್ ರೀಚಾರ್ಜ್ ಪ್ಯಾಕ್ ಜಾರಿಗೊಳಿಸಿದೆ ಈ ಬಗೆಗಿನ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ.

ಇತ್ತೀಚೆಗಷ್ಟೇ ಜಿಯೋ ಕ್ರಿಕೆಟ್ ಪ್ರಿಯರಿಗಾಗಿ 84 ದಿನಗಳಿಗೆ ಅನ್ವಯವಾಗುವಂತ 999ರೂ.ಗಳ ರೀಚಾರ್ಜ್ ಪ್ಲಾನ್ ತಂದಿದೆ. ಈ ಯೋಜನೆಯಡಿ ದಿನಕ್ಕೆ 3GB ಡೇಟಾ ಬಳಸಬಹುದು. ದಿನಕ್ಕೆ 3GB ದರದಲ್ಲಿ 84 ದಿನಕ್ಕೆ 252GB ಡೇಟಾ ಲಭ್ಯವಿದೆ. ಹೆಚ್ಚುವರಿಯಾಗಿ, ಈ ಯೋಜನೆಯಲ್ಲಿ 40GB ಡೇಟಾ ಲಭ್ಯವಿದೆ. ಒಟ್ಟು 292GB ಡೇಟಾವನ್ನು 84 ದಿನಗಳಲ್ಲಿ ಬಳಸಬಹುದು. ಅನಿಯಮಿತ ಕರೆಗಳು, ಪ್ರತಿದಿನ 100 ಎಸ್​ಎಮ್​ಎಸ್​ ಲಭ್ಯವಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಅಪ್ಲಿಕೇಶನ್‌ಗಳ ಚಂದಾದಾರಿಕೆ ಉಚಿತವಾಗಿದೆ. 5G ನೆಟ್‌ವರ್ಕ್ ಹೊಂದಿರುವವರಿಗೆ ಅನಿಯಮಿತ 5G ಡೇಟಾ ಈ ಯೋಜನೆ ಮೂಲಕ ಸಿಗುತ್ತದೆ.

ಇದರೊಂದಿಗೆ ಜಿಯೋ ಹೊರತಂದಿರುವ 399 ರೀಚಾರ್ಜ್ ಪ್ಲಾನ್ ಮೂಲಕ 28 ದಿನಗಳ‌ ಕಾಲ ದಿನವೊಂದಕ್ಕೆ 3GB ಡೇಟಾ ಲಭ್ಯವಿದೆ. ದಿನಕ್ಕೆ 3GB ದರದಲ್ಲಿ 84GB ಡೇಟಾ ಲಭ್ಯವಿದೆ. ಹೆಚ್ಚುವರಿಯಾಗಿ, 6GB ಡೇಟಾ ಲಭ್ಯವಿದೆ. ಒಟ್ಟು 90GB ಡೇಟಾವನ್ನು 28 ದಿನಗಳಲ್ಲಿ ಬಳಸಬಹುದು. ಅನಿಯಮಿತ ಕರೆಗಳು ಉಚಿತ.

ಪ್ರತಿದಿನ 100 ಎಸ್.ಎಮ್.ಎಸ್ ಕೂಡ ಪಡೆಯವಹುದಾಗಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಅಪ್ಲಿಕೇಶನ್‌ಗಳ ಚಂದಾದಾರಿಕೆ ಉಚಿತವಾಗಿದೆ. ಜೊತೆಗೆ 5G ನೆಟ್‌ವರ್ಕ್ ಲಭ್ಯತೆ ಹೊಂದಿರುವವರಿಗೆ ಅನಿಯಮಿತ 5G ಡೇಟಾ ಕೂಡ ದೊರೆಯಲಿದೆ.

ಇನ್ನು‌ ಜಿಯೋದ 219 ರೀಚಾರ್ಜ್ ಪ್ಲಾನ್ ಅನ್ವಯ 14 ದಿನಗಳ‌ ಕಾಲ ದಿನವೊಂದಕ್ಕೆ 3GB ಡೇಟಾ ಲಭ್ಯವಿದೆ. ದಿನಕ್ಕೆ 3GB ದರದಲ್ಲಿ 42GB ಡೇಟಾ ಸಿಗಲಿದೆ. ಹೆಚ್ಚುವರಿಯಾಗಿ ಈ ಪ್ಲ್ಯಾನ್​ನಲ್ಲಿ 2GB ಡೇಟಾ ಲಭ್ಯವಿದೆ. ಒಟ್ಟು 44GB ಡೇಟಾವನ್ನು 28 ದಿನಗಳಲ್ಲಿ ಬಳಸಬಹುದು. ಜೊತೆಗೆ ಅನಿಯಮಿತ ಕರೆಗಳು ಉಚಿತ. ಪ್ರತಿದಿನ 100 ಎಸ್​ಎಮ್​ಎಸ್​ ಮಾಡುವ ಸೌಲಭ್ಯ ಲಭ್ಯವಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಅಪ್ಲಿಕೇಶನ್‌ಗಳ ಚಂದಾದಾರಿಕೆ ಉಚಿತವಾಗಿದೆ. 5G ನೆಟ್‌ವರ್ಕ್ ಲಭ್ಯತೆ ಹೊಂದಿರುವವರಿಗೆ ಅನಿಯಮಿತ 5G ಡೇಟಾ ದೊರೆಯಲಿದೆ.

ಡೇಟಾ ಆ್ಯಡ್​ ಆನ್ ಯೋಜನೆಗಳು ಇನ್ನು ಕೆಲವು ಪ್ಲ್ಯಾನ್​​ಗಳೊಂದಿಗೆ ಲಭ್ಯವಿದ್ದು, ಅದಕ್ಕಾಗಿ ರೂ.667 ರೀಚಾರ್ಜ್ ಮಾಡಿ ಮತ್ತು 90 ದಿನಗಳ ವ್ಯಾಲಿಡಿಟಿ ಪಡೆಯಬಹುದು. ಈ ಪ್ಲ್ಯಾನ್​​ನಲ್ಲಿ 150GB ಡೇಟಾವನ್ನು ಬಳಸಬಹುದಾಗಿದೆ. ಹಾಗೆಯೇ ರೂ.444 ರೀಚಾರ್ಜ್ ಮಾಡಿ ಮತ್ತು 60 ದಿನಗಳ ವ್ಯಾಲಿಡಿಟಿ ಪಡೆಯಿರಿ. ಇದರಲ್ಲಿ 100GB ಡೇಟಾವನ್ನು ಬಳಸಬಹುದು. ಈ ಎಲ್ಲಾ ಯೋಜನೆಗಳು ಕೂಡ ಕ್ರಿಕೆಟ್ ಪ್ರಿಯರಿಗೆ ಹೆಚ್ಚು ಅನುಕೂಲವಾಗಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *