ವಯಾಗ್ರ ನಿಷೇಧದ ಬಳಿಕ ಪಾಕಿಸ್ತಾನದಲ್ಲಿ ಹಲ್ಲಿಗಳ ಮಾರಣಹೋಮ – ಲೈಂಗಿಕ ಶಕ್ತಿಗಾಗಿ ಹಲ್ಲಿ ತೈಲಕ್ಕೆ ಮುಗಿಬೀಳುತ್ತಿರುವ ಪುರುಷರು..!!

ವಯಾಗ್ರ ನಿಷೇಧದ ಬಳಿಕ ಪಾಕಿಸ್ತಾನದಲ್ಲಿ ಹಲ್ಲಿಗಳ ಮಾರಣಹೋಮ – ಲೈಂಗಿಕ ಶಕ್ತಿಗಾಗಿ ಹಲ್ಲಿ ತೈಲಕ್ಕೆ ಮುಗಿಬೀಳುತ್ತಿರುವ ಪುರುಷರು..!!

ನ್ಯೂಸ್ ಆ್ಯರೋ : ಕೆಲ ದಿನಗಳ‌ ಹಿಂದಷ್ಟೇ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಶವಗಳನ್ನು ಅತ್ಯಾಚಾರ ಮಾಡುತ್ತಿರುವ ಆತಂಕಕಾರಿ ವಿಚಾರ ಬಯಲಾಗಿತ್ತು. ಬಳಿಕ ಅದು ‌ನಕಲಿ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.‌ ಇದೀಗ, ಮತ್ತೆ ಪಾಕಿಸ್ತಾನ ಮತ್ತೊಂದು ಕರಾಳ ಮುಖ ಬಯಲಾಗಿದೆ.

ಪಾಕಿಸ್ತಾನದಲ್ಲಿ ವಯಾಗ್ರ ನಿಷೇಧದ ಬಳಿಕ ಹಲ್ಲಿಗಳಿಂದ ತಯಾರಿಸಿದ ಕಾಮೋತ್ತೇಜಕ ಉತ್ಪನ್ನಗಳಿಗಾಗಿ ಅಲ್ಲಿನ‌ ಪುರುಷರು ಮುಗಿಬೀಳುತ್ತಿದ್ದಾರೆ. ಹಾಸಿಗೆ ಮೇಲಿನ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕಾಗಿ ರಾವಲ್ಪಿಂಡಿಯಲ್ಲಿ ಪುರುಷರು ಹಲ್ಲಿಗಳ ಮಾರಣ ಹೋಮ ನಡೆಸುತ್ತಿದ್ದಾರೆ.

ಎ.ಎಪ್.ಪಿ ವರದಿಯ‌ ಪ್ರಕಾರ, ರಾವಲ್ಪಿಂಡಿಯ ರಾಜಾ ಬಜಾರ್ ನಲ್ಲಿ ‘ತಮ್ಮ ಬಿಸಿ ರಕ್ತದ ದಾಹ ತೀರಿಸಿಕೊಳ್ಳಲು‌ ಪುರುಷರು ತಂಪು ಮದ್ದಿನ ಮೊರೆ‌ ಹೋಗುತ್ತಿದ್ದಾರಂತೆ ‘. ಹಲ್ಲಿಯ ಕೊಬ್ಬಿನಿಂದ ಹೊರ ತೆಗೆದ ಅಂಶವನ್ನು ಚೇಳಿನ ತೈಲದಲ್ಲಿ ಬೆರೆಸಲಾಗುತ್ತದೆ. ಅನಂತರ ಅದನ್ನು ಖಾರವಾದ ಕೆಂಪು‌ ಮೆಣಸು ಸೇರಿಸುವ ಮೂಲಕ ಕಾಮೋದ್ರೇಕ ಹೆಚ್ಚಿಸುವ ಸಂಡಾ ತೈಲ ತಯಾರಿಸುತ್ತಿದ್ದಾರೆ.

ಪಾಕಿಸ್ತಾನಿ ಜನರ ನಂಬಿಕೆಯ ಪ್ರಕಾರ, ಉದ್ದ ಬಾಲದ ಹಲ್ಲಿಯ ರಕ್ತದಲ್ಲಿ ಕಾಮ ಶಕ್ತಿ ಹೆಚ್ಚಿಸುವ ಶಕ್ತಿಯಿದೆಯಂತೆ. ಈ‌ ಕಾರಣದಿಂದ ಅಲ್ಲಿನ‌ ಕಪ್ಪು ಮಾರುಕಟ್ಟೆಯಲ್ಲಿ‌ ಹಲ್ಲಿ ತೈಲಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಇದಕ್ಕೆ ವೈಜ್ಞಾನಿಕ ದಾಖಲೆಗಳಿಲ್ಲದಿದ್ದರೂ, ಈ ತೈಲದಿಂದಾಗಿ ಗಂಟೆಗಟ್ಟಲೆ ಲೈಂಗಿಕ ಕ್ರಿಯೆ ನಡೆಸಬಹದು ಮತ್ತು ಕಾಮಾಸಕ್ತಿ ಸಂಪೂರ್ಣ ತಣಿಯುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಅಲ್ಲಿ ಪ್ರತಿದಿನ ಸಾವಿರಾರು ಹಲ್ಲಿಗಳ ಮಾರಣ ಹೋಮ ನಡೆಯುತ್ತಿದೆ.

ಹಲ್ಲಿ ತೈಲ ಮಾರಾಟಗಾರರು ಏನೆನ್ನುತ್ತಾರೆ?

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಹಲ್ಲಿ ತೈಲ ಮಾರಾಟಗಾರನಾದ ಯಾಸಿರ್‌ ಅಲಿ, ‘ನೀವು ಆ ಜಾಗಕ್ಕೆ ಕೇವಲ ಐದು ಹನಿ ಹಚ್ಚಿ, ಮಸಾಜ್ ಮಾಡಿದರೆ ಸಾಕು. ಲೈಂಗಿಕ ಸಾಮರ್ಥ್ಯದಲ್ಲಿ ಪವಾಡವೇ ಸೃಷ್ಟಿಯಾಗುತ್ತದೆ’ ಎನ್ನುತ್ತಾನೆ.

ಹಲ್ಲಿಗಳನ್ನು‌ ಹೇಗೆ ಹಿಡಿಯುತ್ತಾರೆ?

ರಾಜಸ್ಥಾನಿಗಳಿಂದ ‘ಸಂಡಾ’ ಎಂದು ಕರೆಯಲ್ಪಡುವ ಈ ಹಲ್ಲಿಗಳನ್ನು ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ವ್ಯಾಪಕವಾಗಿ ಭೇಟೆಯಾಡಲಾಗುತ್ತದೆ. ಹಲವು ತಲೆ ಮಾರುಗಳಿಂದ ಇದನ್ನೇ ವೃತ್ತಿ ಮಾಡಿಕೊಂಡಿರುವ ಹಲ್ಲಿ ಬೇಟೆಗಾರರು ಮೀನು ಹಿಡಿಯುವ ಬಲೆ ಬಳಸಿ ಹಲ್ಲಿಗಳನ್ನು‌ ಹಿಡಿಯುತ್ತಾರೆ. ಈ ಹಲ್ಲಿಗಳು ಸಿಕ್ಕ ಕೂಡಲೆ ಅವುಗಳ ಬೆನ್ನು ಮೂಳೆ ಮುರಿಯುತ್ತಾರೆ.

ಈ ಬಗ್ಗೆ ಮಾತನಾಡುವ, ಇಸ್ಲಮಾಬಾದ್ ಹಲ್ಲಿ‌ ಬೇಟೆಗಾರರು, ‘ಹಲ್ಲಿಗಳು ರಾಕೆಟ್ ನಂತೆ ಕ್ಷಣ ಮಾತ್ರದಲ್ಲಿ ಓಡುತ್ತವೆ. ಆದ್ದರಿಂದ ಅವುಗಳನ್ನು‌ ಹಿಡಿದ ಕೂಡಲೆ ಬೆನ್ನು ಮುರಿಯುತ್ತೇವೆ. ಈ ರೀತಿ ಹಲ್ಲಿಗಳನ್ನು ಕೊಲ್ಲುವುದು ಅವುಗಳ ಬದುಕಿನ ಹಕ್ಕು ಕಸಿದುಕೊಂಡಂತೆ ಎಂಬ ಬೇಸರ ಕಾಡುತ್ತದೆ. ಆದರೆ ನಮಗೆ ಜೀವನಕ್ಕೆ ಬೇರೆ ದಾರಿ ಇಲ್ಲ’ ಎನ್ನುತ್ತಾರೆ.

ಪಾಕಿಸ್ತಾನ ಸಂಪ್ರಾದಾಯವಾದಿ ದೇಶ ಅಲ್ಲಿನ‌ ದಂಪತಿಗಳಿಗೆ ದೊಡ್ಡ‌ ಕುಟುಂಬ ರಚಿಸುವ, ಹೆಚ್ಚು ಮಕ್ಕಳನ್ನು‌ ಪಡೆಯುವ ಸಾಮಾಜಿಕ‌‌ ಒತ್ತಡಗಳಿವೆ.‌ ಒಂದು ವೇಳೆ ಮಕ್ಕಳಾಗದೇ ಹೋದರೆ ಸಾಮಾಜಿಕವಾಗಿ ಸಾಕಷ್ಟು ಅವಮಾನಗಳನ್ನು ಅವರು ಎದುರಿಸಬೇಕಾಗುತ್ತದೆ. ಈ ಎಲ್ಲಾ ಕಾರಣದಿಂದಾಗಿ ನಪುಂಸಕತೆಯನ್ನು‌ ಹೋಗಲಾಡಿಸಿ ಮಕ್ಕಳನ್ನು‌ ಪಡೆಯಲು ಹಲ್ಲಿ ತೈಲದ ಮೊರೆ‌ ಹೋಗುತ್ತಿದ್ದಾರೆ.‌ ಇದರೊಂದಿಗೆ ಅಲ್ಲಿ ವಯಾಗ್ರಾಕ್ಕೆ ನಿಷೇಧವಿರುವ ಕಾರಣ ಅವರಿಗೆ ಬೇರೆ ದಾರಿ ಇಲ್ಲದಂತಾಗಿದೆ. ಆದರೂ ಪ್ರತಿದಿನ‌ ಲಕ್ಷಾಂತರ ಮೂಕ ಹಲ್ಲಿಗಳ ಮಾರಣ ಹೋಮ ನಡೆಯುತ್ತಿರುವುದು ಅತ್ಯಂತ ನೋವಿನ‌ ಸಂಗತಿಯೇ ಸರಿ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *