
ಮೊಬೈಲ್‌ನಲ್ಲಿ ಇಂಟರ್‌ನೆಟ್ ಸ್ಪೀಡ್ ಕಡಿಮೆಯಿದೆಯೇ? – ಇಂಟರ್‌ನೆಟ್ ಸ್ಪೀಡ್ ಆಗ್ಬೇಕಾದ್ರೆ ಹೀಗೆ ಮಾಡಿ ಸಾಕು..!!
- ಟೆಕ್ ನ್ಯೂಸ್
- November 2, 2023
- No Comment
- 86
ನ್ಯೂಸ್ ಆ್ಯರೋ : ಸ್ಮಾರ್ಟ್‌ಫೋನ್ ಇರುವವರಿಗೆ ಇಂಟರ್‌ನೆಟ್ ತುಂಬಾನೇ ಮುಖ್ಯವಾಗಿದೆ. ಕೆಲವೊಮ್ಮೆ ಇಂಟರ್‌ನೆಟ್ ಸ್ಪೀಡ್ ಇಲ್ಲದಿದ್ದರೆ ಕಿರಿಕಿರಿ ಆಗುವುದುಂಟು. ಇದರಿಂದ ಕೆಲಸದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಲೇಖನದಲ್ಲಿ ಸುಲಭವಾದ ಹಂತದಲ್ಲಿ ಇಂಟರ್‌ನೆಟ್ ಸ್ಪೀಡ್ ಅನ್ನು ಯಾವ ರೀತಿ ಹೆಚ್ಚಿಸಬಹುದು ಎಂಬುದರ ಬಗ್ಗೆ ಮಾಹಿತಿಯಿದೆ.
ಕ್ಯಾಚೆ ಫುಲ್ ಆದರೆ ಆಂಡ್ರಾಯ್ಡ್ ಫೋನ್ ಸ್ಪೀಡ್ ಕಡಿಮೆಯಾಗುತ್ತದೆ. ಇದು ಇಂಟರ್ನೆಟ್ ವೇಗದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕಾಲಕಾಲಕ್ಕೆ ಕ್ಯಾಚೆ ಕ್ಲಿಯರ್ ಮಾಡಿಕೊಳ್ಳಿ. ಇದು ನಿಮ್ಮ ಮೊಬೈಲ್‌ನ ಇಂಟರ್ನೆಟ್ ವೇಗವನ್ನು ಹೆಚ್ಚಿಸುತ್ತದೆ.
ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನೆಟ್‌ವರ್ಕ್ ಸೆಟ್ಟಿಂಗ್ ಆಯ್ಕೆಯಲ್ಲಿ ಆದ್ಯತೆಯ ನೆಟ್‌ವರ್ಕ್ ಪ್ರಕಾರದಲ್ಲಿ 4G ಅಥವಾ LTE ಇದೆಯೇ ಎಂದು ನೋಡಿ. ಇಲ್ಲದಿದ್ದರೆ, ಅಲ್ಲಿ ಲಭ್ಯವಿರುವ ಆಯ್ಕೆಯನ್ನು ಆರಿಸಿ. ಫೋನ್ ಅನ್ನು ರೀಸ್ಟಾರ್ಟ್ ಮಾಡಿಕೊಳ್ಳಿ. ಹೀಗೆ ಮಾಡಿದಾಗ ಅದು ಮತ್ತೆ ಮೊಬೈಲ್ ನೆಟ್‌ವರ್ಕ್ ಅನ್ನು ಹುಡುಕುತ್ತದೆ. ಅದು ಡೇಟಾ ವೇಗವನ್ನು ಹೆಚ್ಚಿಸುತ್ತದೆ.
ಅನೇಕ ಬಾರಿ ಬಳಕೆದಾರರು ಆಕಸ್ಮಿಕವಾಗಿ ಸ್ಮಾರ್ಟ್‌ಫೋನ್‌ನಲ್ಲಿ ಆಟೋ ಡೌನ್‌ಲೋಡ್ ವೈಶಿಷ್ಟ್ಯವನ್ನು ಆನ್ ಆಗಿರುತ್ತದೆ. ಇದರಿಂದಾಗಿ ಅಪ್ಲಿಕೇಶನ್‌ಗಳು ಅಪ್ಡೇಟ್ ಆಗುತ್ತಲೇ ಇರುತ್ತವೆ. ಇದರಿಂದ ಇಂಟರ್‌ನೆಟ್ ಬಳಕೆಯಾಗುತ್ತಲೇ ಇರುತ್ತದೆ. ಹೀಗಾದಾಗ ಡೇಟಾ ತ್ವರಿತವಾಗಿ ಕೊನೆಗೊಳ್ಳುತ್ತದೆ. ಇಂಟರ್ನೆಟ್ ನಿಧಾನವಾಗುತ್ತದೆ. ಬೇಕಾದ ಸಮಯದಲ್ಲಿ ಅಷ್ಟೇ ಇಂಟರ್‌ನೆಟ್ ಅನ್ನು ಆನ್ ಇರಿಸಿ.
ಇಂಟರ್‌ನೆಟ್ ನಿಧಾನವಾಗಿರುವಾಗ ನಿಮ್ಮ ಮೊಬೈಲ್‌ನಲ್ಲಿರುವ ಏರ್‌ಪ್ಲೇನ್ ಮೋಡ್ ಅನ್ನು ಅನೆಬಲ್ ಮತ್ತು ಡಿಸೇಬಲ್ ಮಾಡಿ. ಇದರಿಂದ ನಿಮ್ಮ ಮೊಬೈಲ್ ನೆಟ್‌ವರ್ಕ್‌ನ ವೇಗ ಹೆಚ್ಚುತ್ತದೆ. ಅದಲ್ಲದೆ
ಬೇಡವಾಗಿರುವ ಆಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಏಕೆಂದರೆ ಅವೆಲ್ಲವೂ ನಿಮ್ಮ ಮೊಬೈಲ್‌ನ ಡೇಟಾವನ್ನು ವ್ಯರ್ಥ ಮಾಡುತ್ತಿರುತ್ತವೆ.