ನಿಮ್ಮ‌ ಸಂಗಾತಿ ಜೊತೆ ಬಾಂಧವ್ಯ ಹೊಂದಾಣಿಕೆ ಆಗುತ್ತಿಲ್ಲವೇ? – ಈ ಟಿಪ್ಸ್ ಬಳಸಿ, ನಿಮ್ಮ ಸಂಗಾತಿಯ ಸಂಪೂರ್ಣ ಪ್ರೀತಿ ಗಳಿಸಿ..

ನಿಮ್ಮ‌ ಸಂಗಾತಿ ಜೊತೆ ಬಾಂಧವ್ಯ ಹೊಂದಾಣಿಕೆ ಆಗುತ್ತಿಲ್ಲವೇ? – ಈ ಟಿಪ್ಸ್ ಬಳಸಿ, ನಿಮ್ಮ ಸಂಗಾತಿಯ ಸಂಪೂರ್ಣ ಪ್ರೀತಿ ಗಳಿಸಿ..

ನ್ಯೂಸ್ ಆ್ಯರೋ : ಸಂಗಾತಿಗಳ ಮಧ್ಯೆ ಆವಾಗವಾಗ ಮುನಿಸು, ಜಗಳ ಹಾಗೂ ಕೋಪ ಆಗುವುದು ಸಾಮಾನ್ಯ. ಆದರೆ ಆ ಮುನಿಸು ವಿಪರೀತಕ್ಕೆ ಹೋಗಬಾರದು. ಆ ದಿವಸಕ್ಕೆ ಮರೆತುಬಿಡುವ ಹಾಗೇ ಇರಬೇಕು. ಉತ್ತಮ ಸಂಬಂಧವು ವ್ಯಕ್ತಿಯ ವಿಕಾಸಕ್ಕೆ ನೇರವಾಗಿ ಪರಿಣಾಮಬೀರುತ್ತದೆ. ಸಂಗಾತಿಯ ಪ್ರೋತ್ಸಾಹದ ಮಾತುಗಳು ಜೀವನದಲ್ಲಿ ಹೊಸ ಉಲ್ಲಾಸವನ್ನು ತರುತ್ತದೆ. ಅದಲ್ಲದೆ ಆತ್ಮವಿಶ್ವಾಸ ಮತ್ತು ತೃಪ್ತಿಯನ್ನು ನೀಡುತ್ತದೆ.

ಸಂಗಾಂತಿಗಳ ನಡುವಿನ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನವಿರಬೇಕು. ಜೀವನದಲ್ಲಿ ಕೆಲವೊಮ್ಮೆ ಸಂಬಂಧಗಳಲ್ಲಿ ಕಠಿಣ ಪರಿಸ್ಥಿತಿಗಳು, ಪ್ರತಿಕೂಲ ಪರಿಸ್ಥಿತಿಗಳು ಎದುರಾಗುವ ಸಾಧ್ಯತೆಗಳಿವೆ. ಆ ಸಂದರ್ಭಗಳಲ್ಲಿ ಸಂಬಂಧವನ್ನು ಹೇಗೆ ಕಾಪಾಡುವುದರ ಬಗ್ಗೆ ಇಲ್ಲಿದೆ ಸಲಹೆಗಳು.

ಒಟ್ಟಿಗೆ ಗುಣಮಟ್ಟದ ಸಮಯ ಕಳೆಯಿರಿ:

ಆಧುನಿಕ ಜಗತ್ತಿನಲ್ಲಿ ಎಲ್ಲರೂ ಬ್ಯುಸಿಯಾಗಿರುವುದು ಸಾಮಾನ್ಯ. ಆದರೆ ಆ ಬ್ಯುಸಿ ಸಮಯದಲ್ಲೂ ನೀವು ಕೆಲ ಹೊತ್ತು ಜತೆಗೆ ಕಳೆಯಿರಿ. ಪರಸ್ಪರ ಪ್ರೀತಿ ಹಂಚಿ. ಕಳೆದ ಪ್ರೀತಿಯ ಕ್ಷಣಗಳನ್ನು ನೆನಪಿಸಿಕೊಳ್ಳಿ. ಒಟ್ಟಿಗೆ ಸಮಯ ಕಳೆಯುವುದು ನಿಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ.

ಭಾವನೆಗಳಿಗೆ ಬೆಲೆ ಕೊಡಿ:

ನಿಮ್ಮ ನಡುವೆ ಏರ್ಪಡುವ ಸಂಘರ್ಷವನ್ನು ಪರಿಹರಿಸಿ ಮತ್ತು ಪರಸ್ಪರ ಭಾವನೆಗಳನ್ನು ಗೌರವಿಸಿ. ಅದರಲ್ಲೂ ಕಷ್ಟದ ಸಮಯದಲ್ಲಿ, ನಿಮ್ಮ ಸಂಗಾತಿಯ ದುಃಖ, ಆತಂಕವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿ. ಪರಸ್ಪರ ನೋವು, ದುಃಖಗಳಿಗೆ ಹೆಗಲು ಕೊಡಿ. ಯಾವುದೇ ಸಮಸ್ಯೆ ಬಂದರೂ ಒಟ್ಟಿಗೆ ಪರಿಹರಿಸಲು ಪ್ರಯತ್ನಿಸಿ.

ಗೆಲುವನ್ನು ಒಟ್ಟಾಗಿ ಸಂಭ್ರಮಿಸಿ :

ಇನ್ನೂ ದುಃಖಗಳಿಗೆ ಹೇಗೆ ಹೆಗಲು ಕೊಡುತ್ತೇವೋ ಹಾಗೆಯೇ ಖುಷಿಯನ್ನು ಒಟ್ಟಿಗೆ ಆಚರಿಸಿ. ವಿಜಯಗಳನ್ನು ಆಚರಿಸುವುದು ನಿಮ್ಮ ಬಾಂಧವ್ಯವನ್ನು ಹೆಚ್ಚಿಸಬಹುದು. ನಿಮ್ಮ ಸಂಗಾತಿ ನಿಮ್ಮೊಂದಿಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಾಗ, ನಿಜವಾದ ಸಂತೋಷ, ಉತ್ಸಾಹ ಮತ್ತು ಆಸಕ್ತಿಯೊಂದಿಗೆ ಪ್ರತಿಕ್ರಿಯಿಸುವುದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವಗಳನ್ನೂ ಆಚರಿಸುವುದು :

ಚಿಕ್ಕ ಪುಟ್ಟ ವಿಷಯಗಳನ್ನು ಸಂಭ್ರಮದೊಂದಿಗೆ ಆಚರಿಸುವುದು ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಸಂತೋಷದಿಂದ ಒಬ್ಬರಿಗೊಬ್ಬರು ಸಹಾಯ ಮಾಡುವುದು, ಅದರಲ್ಲೂ ಹೇಳದೆಯೇ ಸಹಾಯ ಮಾಡುವುದು ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ. ಇದು ಸಂಗಾತಿಗಳಿಬ್ಬರೂ ಹೆಚ್ಚು ಪ್ರೀತಿಸಲು ಕಾರಣವಾಗುತ್ತದೆ.

ವೈಯಕ್ತಿಕ ವಿಷಯಗಳನ್ನು ಗೌರವಿಸಿ:

ಯಾವುದೇ ಆರೋಗ್ಯಕರ ಸಂಬಂಧದಲ್ಲಿ ಭಾವನಾತ್ಮಕ ಬೆಳವಣಿಗೆಗೆ ವೈಯಕ್ತಿಕ ಗಡಿಗಳನ್ನು ಗೌರವಿಸಿ. ನಿಮ್ಮ ಸಂಗಾತಿಯನ್ನು ವೈಯಕ್ತಿಕ ಅಪರಾಧವೆಂದು ಪರಿಗಣಿಸದೆ ಅಥವಾ ಅವರ ಉದ್ದೇಶಗಳನ್ನು ಪ್ರಶ್ನಿಸದೆ ಅವರಿಗೆ ಅಗತ್ಯವಿರುವ ಸಮಯ ನೀಡಿ. ಸಮಸ್ಯೆಗಳು ಉದ್ಭವಿಸಿದಾಗ, ಮುಕ್ತವಾಗಿ ಹಂಚಿಕೊಳ್ಳುವುದರಿಂದ ಇನ್ನಷ್ಟು ಸಂಬಂಧ ಗಟ್ಟಿಗೊಳ್ಳುತ್ತದೆ.

ಆದಷ್ಟು ಜತೆಗಿದ್ದಾಗ ಅನ್ಯೋನ್ಯವಾಗಿರಲು ಪ್ರಯತ್ನಿಸಿ:

ಅಂದರೆ ಒಟ್ಟಿಗೆ ಕಳೆಯುವ ಸಮಯದಲ್ಲಿ ಒಬ್ಬರನೊಬ್ಬರು ಕೈಯನ್ನು ಹಿಡಿದುಕೊಳ್ಳುವುದು, ಚುಂಬಿಸುವುದು, ಹಗ್ ಮಾಡುವುದು, ಕಣ್ಣೋಟದಲ್ಲೇ ಮಾತನಾಡುವುದನ್ನು ಮಾಡಿ. ಇಂತಹ ಸನ್ನೆಗಳು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *