ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಕಳ್ಳತನ ಪ್ರಕರಣ – ಕಚೇರಿ ಸಿಬ್ಬಂದಿಗಳೇ ಕಳ್ಳರು, 80 ಲಕ್ಷ ನಗದು ಜಪ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಕಳ್ಳತನ ಪ್ರಕರಣ – ಕಚೇರಿ ಸಿಬ್ಬಂದಿಗಳೇ ಕಳ್ಳರು, 80 ಲಕ್ಷ ನಗದು ಜಪ್ತಿ

ನ್ಯೂಸ್ ಆ್ಯರೋ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ರಾಯಪುರ ಕಚೇರಿಯಲ್ಲಿ ಅಕ್ಟೋಬರ್​ 24ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ಆರೋಪಿಗಳು ಟ್ರಸ್ಟ್‌ನ ಕೆಲಸವರಾಗಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಹುಬ್ಬಳ್ಳಿ -ಧಾರವಾಡ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್​ ಅವರು ಮಾಧ್ಯಮದವರೊಂದಿಗೆ ಮಾತನಾಡಿ, “ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಘಟನಾ ಸ್ಥಳ ಪರಿಶೀಲನೆ ಮಾಡಿದಾಗ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಯಾವುದೇ ಕುರುಹುಗಳನ್ನು ಆರೋಪಿಗಳು ಪೊಲೀಸರಿಗೆ ಬಿಟ್ಟುಕೊಟ್ಟಿರಲಿಲ್ಲ.

ಪ್ರಕರಣ ಸಂಬಂಧ ವಿದ್ಯಾನಗರ ಸಬ್​ ಇನ್ಸ್​ಪೆಕ್ಟರ್​ ಸಂಗಮೇಶ್​ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ತಂಡವು ಯಾವುದೇ ಕುರುಹುಗಳಿಲ್ಲದ ಈ ಪ್ರಕರಣವನ್ನು ವೈಜ್ಞಾನಿಕವಾಗಿ ತನಿಖೆ ನಡೆಸಿ, ಎಲ್ಲ ಪೊಲೀಸರ ಸಹಯೋಗದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ಬಂಧಿಸಿ ₹79,89,870 ಲಕ್ಷ ನಗದು ಮತ್ತು ಅಪರಾಧಕ್ಕಾಗಿ ಬಳಸಿದ್ದ ಕಾರು, ಮೊಬೈಲ್​ ಸೇರಿ ₹85,89,770 ಲಕ್ಷ ಸೊತ್ತನ್ನು ವಶಪಡಿಕೊಂಡಿದ್ದೇವೆ. ಬಂಧಿತ ಆರೋಪಿಗಳಲ್ಲಿ ಮೂವರು ಆ ಟ್ರಸ್ಟ್​ನಲ್ಲಿಯೇ ಕೆಲಸ ಮಾಡುತ್ತಿದ್ದರು” ಎಂದು ತಿಳಿಸಿದರು.

“ಕುಶಾಲ್​ ಕುಮಾರ್​, ಬಸವರಾಜ್​, ಮಹಾಂತೇಶ್ ಟ್ರಸ್ಟ್​ನ​ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಾಥಮಿಕವಾಗಿ ಇವರು ಕಳ್ಳತನಕ್ಕೆ ಯೋಜನೆಯನ್ನು ಮಾಡಿಕೊಂಡು ಇತರೆ 7 ಮಂದಿ ಆರೋಪಿಗಳನ್ನು ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ. ಜಿಲಾನಿ, ಪರಶುರಾಮ, ರಂಗಪ್ಪ, ಮಂಜುನಾಥ, ಕಿರಣ, ರಜಾಕ್ ಮತ್ತು ವೀರೇಶ ಇನ್ನುಳಿದ ಆರೋಪಿಗಳಾಗಿದ್ದಾರೆ” ಎಂದು ಮಾಹಿತಿ ನೀಡಿದರು.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *