
ಸಿಮ್ ಆ್ಯಕ್ಟಿವ್ ಇಡಲು ಜಿಯೋದಿಂದ ಆಕರ್ಷಕ ವ್ಯಾಲಿಡಿಟಿ ಪ್ಲಾನ್‌ಗಳು – ಇಲ್ಲಿದೆ ಸಂಪೂರ್ಣ ಮಾಹಿತಿ
- ಟೆಕ್ ನ್ಯೂಸ್
- December 10, 2022
- No Comment
- 208
ನ್ಯೂಸ್ ಆ್ಯರೋ : ದೇಶದ ಟೆಲಿಕಾಂ ಲೋಕದಲ್ಲಿ ಮುಂಚೂಣಿಯಲ್ಲಿರುವ ಜಿಯೋ ತಮ್ಮ ಬಳಕೆದಾರರಿಗೆ ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ಡ್ಯುಯಲ್ ಸಿಮ್ ಬಳಕೆ ಮಾಡುವ ಚಂದಾದಾರರಿಗೆ ಸಿಮ್ ಆಕ್ಟಿವ್ ಇಡಲು ಆಕರ್ಷಕ ವ್ಯಾಲಿಡಿಟಿ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.
ಡ್ಯುಯಲ್ ಸಿಮ್ ಬಳಕೆದಾರರಿಗೆ ಜಿಯೋ ಟೆಲಿಕಾಂ ಸಂಸ್ಥೆಯು ಕೆಲವೊಂದು ರೀಚಾರ್ಜ್ ಆಯ್ಕೆಗಳನ್ನು ಸಹ ನೀಡಿದೆ.
ಜಿಯೋ ಟೆಲಿಕಾಂ 155ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು:
ಇದರಲ್ಲಿ ದಿನಕ್ಕೆ 2GB ಡೇಟಾ ಪ್ರಯೋಜನ ಲಭ್ಯವಿದೆ. ಒಟ್ಟು 300 ಎಸ್‌ಎಮ್‌ಎಸ್ ಸೌಲಭ್ಯವನ್ನು ಹೊಂದಿದ್ದು, ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಪಡೆದಿದೆ. ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.
ಜಿಯೋ ಟೆಲಿಕಾಂ 395ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಈ ಪ್ರೀಪೇಯ್ಡ್ ಪ್ಲಾನ್‌ನಲ್ಲಿ ಒಟ್ಟು 6GB ಡೇಟಾ ಪ್ರಯೋಜನ ಲಭ್ಯವಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಒಳಗೊಂಡಿದ್ದು, ಈ ಯೋಜನೆಯು ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.
ಜಿಯೋ ಟೆಲಿಕಾಂ 1559ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಒಟ್ಟು 24 GB ಡೇಟಾ ಪ್ರಯೋಜನ ಲಭ್ಯವಿದೆ. ಇದರೊಂದಿಗೆ ಒಟ್ಟು 3600 ಎಸ್‌ಎಮ್‌ಎಸ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯು ಸಹ ಸಂಪೂರ್ಣ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.
ಜಿಯೋ ಟೆಲಿಕಾಂ 2999ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು:
ಈ ಯೋಜನೆಯು ವಾರ್ಷಿಕ ಅವಧಿಯಾಗಿದ್ದು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯ್ಸ್ ಕರೆಗಳ ಸೌಲಭ್ಯವಿದೆ. ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯವಾಗಲಿದೆ.