ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಂ ಬಳಿಕ ವಾಟ್ಸಾಪ್‌ಗೆ ಲಗ್ಗೆಯಿಟ್ಟ ಅವತಾರ್ – ಈ ಫೀಚರ್‌ನ ವಿಶೇಷತೆ ಏನ್‌ ಗೊತ್ತಾ?

ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಂ ಬಳಿಕ ವಾಟ್ಸಾಪ್‌ಗೆ ಲಗ್ಗೆಯಿಟ್ಟ ಅವತಾರ್ – ಈ ಫೀಚರ್‌ನ ವಿಶೇಷತೆ ಏನ್‌ ಗೊತ್ತಾ?

ನ್ಯೂಸ್‌ ಆ್ಯರೋ : ಇದುವರೆಗೆ ಸ್ನ್ಯಾಪ್​​ಚಾಟ್​, ಇನ್‌ಸ್ಟಾಗ್ರಾಂನಲ್ಲಿದ್ದ ಅವತಾರ್​ ಫೀಚರ್​ ಇನ್ನು ಮುಂದಿನ ದಿನಗಳಲ್ಲಿ ವಾಟ್ಸಾಪ್​ ಬಳಕೆದಾರರಿಗೂ ಲಭ್ಯವಾಗುತ್ತದೆ ಎಂದು ಮೆಟಾ ಕಂಪನಿ ತಿಳಿಸಿದೆ.

ಈ ಮೂಲಕ ಅವತಾರ್ ಫೀಚರ್​​ ಬಳಸಿಕೊಂಡು ಬಳಕೆದಾರರು 36 ಕಸ್ಟಮ್ ಸ್ಟಿಕ್ಕರ್​ಗಳನ್ನು ರಚಿಸಬಹುದಾಗಿದೆ. ಈ ರೀತಿ ರಚಿಸಿದ ಸ್ಟಿಕ್ಕರ್​​ಗಳನ್ನು ಪ್ರೊಫೈಲ್ ಚಿತ್ರವನ್ನಾಗಿ ಕೂಡ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಶೀಘ್ರದಲ್ಲೇ ಐಒಎಸ್ ಮತ್ತು ಆಯಂಡ್ರಾಯ್ಡ್ ಡಿವೈಸ್​ಗಳ ಬೀಟಾ ವರ್ಷನ್​​ನಲ್ಲಿ ಅವತಾರ್ ಫೀಚರ್ ಸಿಗಲಿದೆ. ನಂತರ ಎಲ್ಲ ಸ್ಮಾರ್ಟ್​ಫೋನ್​ ಬಳಕೆದಾರರಿಗೂ ಅವತಾರ್ ಫೀಚರ್ ದೊರೆಯಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್​ನಲ್ಲಿ ಮೆಸೇಜ್ ಮಾಡಲು ಅವತಾರ್ ಉತ್ತಮ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ವಾಟ್ಸಾಪ್​ನಲ್ಲಿ ಪ್ರಾರಂಭವಾಗಲಿದೆ. ಆರಂಭದಲ್ಲಿ ಕೆಲವು ದೋಷಗಳು ಎದುರಾಗಬಹುದು ಎಂದು ವಾಬೀಟಾ ಇನ್ಫೋದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಫೀಚರ್ಸ್‌ನಲ್ಲಿ ಏನೆಲ್ಲ ವಿಶೇಷತೆಯಿದೆ?

ಇನ್ನು ಈ ಫೀಚರ್​​ನಲ್ಲಿ ಲೈಟಿಂಗ್, ಹೇರ್​ ಡಿಸೈನ್, ಇತರ ಡಿಸೈನ್​ಗಳು, ಶೇಡಿಂಗ್ ಮತ್ತು ಇತರ ಹಲವು ಆಯ್ಕೆಗಳು ‘ಅವತಾರ್’ನಲ್ಲಿ ಲಭ್ಯವಿದ್ದು, ಎಡಿಟ್ ಮಾಡಬಹುದಾಗಿದೆ.

ಐಒಎಸ್​​ನಲ್ಲಿ ವಾಟ್ಸಾಪ್​​ ಚಾಟ್ ಓಪನ್ ಮಾಡಿ ಸ್ಟಿಕ್ಕರ್ಸ್ ಆಯ್ಕೆಯನ್ನು ಓಪನ್ ಮಾಡಬೇಕು. ಆಂಡ್ರಾಯ್ಡ್​​ ಮೊಬೈಲ್​ನಲ್ಲಾದ್ರೆ ಇಮೋಜಿ ಸಿಂಬಲ್​ ಅನ್ನು ಟ್ಯಾಪ್ ಮಾಡಿದಾಗ ಅಲ್ಲಿ ಜಿಫ್ ಆಯ್ಕೆಯ ನಂತರದಲ್ಲಿ ಸ್ಟಿಕ್ಕರ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್​ನಲ್ಲಿರುವಂತಹ ‘ಅವತಾರ್’ ಆಯ್ಕೆಯಲ್ಲಿ ಕಾಣಿಸುತ್ತದೆ..

ಅಲ್ಲಿ ನಿಮಗೆ ಬೇಕಾದ ಒಂದು ‘ಅವತಾರ್’ ಅನ್ನು ಸೆಲೆಕ್ಟ್​ ಮಾಡಬೇಕು. ಆಗ ಹೊಸ ಪುಟ ಓಪನ್ ಆಗುತ್ತದೆ. ಅಲ್ಲಿ ‘ಗೆಟ್ ಸ್ಟಾರ್ಟೆಡ್’ ಆಯ್ಕೆ ಮಾಡುವ ಮೂಲಕ ‘ಅವತಾರ್’ ಸ್ಟಿಕ್ಕರ್ ರಚಿಸಬಹುದು. ಒಮ್ಮೆ ಸ್ಟಿಕ್ಕರ್ ರಚಿಸಿದ ನಂತರ ಅದನ್ನು ಸೇವ್ ಮಾಡಿ. ಅದನ್ನು ವಾಟ್ಸಪ್​ನಲ್ಲಿ ಉಳಿಸಿಕೊಳ್ಳಬೇಕು. ನಂತರ ನಿಮ್ಮ ವಾಟ್ಸಾಪ್​ ಅಕೌಂಟ್ ಅನ್ನು ಹೊಸದಾಗಿ ಕಾಣುವಂತೆ ಮಾಡಬಹುದು.

ಸ್ನ್ಯಾಪ್‌ಚಾಟ್‌ನಲ್ಲಿ ಆರಂಭವಾದ ಅವತಾರ್ ಫೀಚರ್ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಬಂತು. ಇದೀಗ ಈ ಫೀಚರ್​ ವಾಟ್ಸಪ್​ನಲ್ಲಿ ಬರುತ್ತಿದ್ದು, ಚಾಟಿಂಗ್ ಇನ್ನಷ್ಟು ಕುತೂಹಲಕಾರಿಯಾಗಲಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *