ಸರ್ಕಾರಿ ಸಂಸ್ಥೆಗಳಿಂದಲೇ ಸಾವಿರಾರು ಕೋಟಿ ಕರೆಂಟ್ ಬಿಲ್ ಬಾಕಿ – ಬಿಬಿಎಂಪಿ ಮೇಲೆ ಗರಂ ಆದ ಬೆಸ್ಕಾಂ..! ಬಿಬಿಎಂಪಿ ಬಾಕಿ ಎಷ್ಟಿದೆ ಗೊತ್ತಾ?

ಸರ್ಕಾರಿ ಸಂಸ್ಥೆಗಳಿಂದಲೇ ಸಾವಿರಾರು ಕೋಟಿ ಕರೆಂಟ್ ಬಿಲ್ ಬಾಕಿ – ಬಿಬಿಎಂಪಿ ಮೇಲೆ ಗರಂ ಆದ ಬೆಸ್ಕಾಂ..! ಬಿಬಿಎಂಪಿ ಬಾಕಿ ಎಷ್ಟಿದೆ ಗೊತ್ತಾ?

ನ್ಯೂಸ್ ಆ್ಯರೋ : ಕೆಲವೊಮ್ಮೆ ಅನೇಕ ವಿಚಾರಗಳಲ್ಲಿ ಅರಿವಿದ್ದರೂ ಕೂಡಾ ಸರ್ಕಾರಿ ಸಿಬ್ಬಂದಿಗಳು ಅಥವಾ ಸರ್ಕಾರಿ ಸಂಸ್ಥೆಗಳು ಎಡವುತ್ತಲೇ ಇರುತ್ತದೆ. ಬೆಸ್ಕಾಂ ಪಾಡಂತೂ ಈಗ ಹೇಳತೀರದು. ಗೃಹಜ್ಯೋತಿ ಯೋಜನೆ ಬಂದ ಮೇಲೆ ಜನಸಾಮಾನ್ಯರು ಕರೆಂಟ್ ಬಿಲ್ ಕಟ್ಟುತ್ತಿಲ್ಲ. ಇದೀಗ ಸರ್ಕಾರಿ ಸಂಸ್ಥೆಗಳಿಂದಲೂ ಕರೆಂಟ್ ಬಿಲ್ ಕಟ್ಟದೆ ಬಾಕಿಯಾಗಿದೆ.

ಇತ್ತ BBMP ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳೂ ಸಾವಿರಾರು ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿವೆ. ಜನರಿಗೆಲ್ಲಾ ಬುದ್ಧಿ ಹೇಳೋ ಬಿಬಿಎಂಪಿಯೇ 800 ಕೋಟಿಗೂ ರೂ.ಗಿಂತ ಅಧಿಕ ಬಿಲ್ ಬಾಕಿ ಉಳಿಸಿಕೊಂಡಿದೆ.

ಗೃಹಜ್ಯೋತಿ ಜಾರಿಯಾದ ಮೇಲೆ ಮತ್ತಷ್ಟು ಸಮಸ್ಯೆಗಳ ಸುಳಿಗೆ ಬೆಸ್ಕಾಂ ಸಿಲುಕಿಕೊಂಡಂತಿದೆ. ಒಂದುಕಡೆ ಜನರು ಕರೆಂಟ್ ಬಿಲ್ ಕಟ್ಟೋಕೆ ಮೀನಮೀಷ ಎಣಿಸಿದ್ರೆ, ಇತ್ತ ಸರ್ಕಾರಿ ಸಂಸ್ಥೆಗಳೂ ಕರೆಂಟ್ ಬಿಲ್ ಕಟ್ಟದೇ ಕಳ್ಳಾಟ ಆಡ್ತಿದೆ. ಅದರಲ್ಲೂ ತೆರಿಗೆ, ದಂಡ, ಶುಲ್ಕ ಅಂತ ಜನರ ಪ್ರಾಣ ತೆಗೆಯೋ ಬಿಬಿಎಂಪಿಯೇ ನೂರಾರು ಕೋಟಿ ರೂಪಾಯಿ ಬೆಸ್ಕಾಂಗೆ ಕರೆಂಟ್ ಬಾಕಿ ಉಳಿಸಿಕೊಂಡಿದೆ ಎಂದರೆ ನೀವು ನಂಬಲೇಬೇಕು.

ಹೌದು, ಬಿಬಿಎಂಪಿ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಸಂಸ್ಥೆಗಳು ಕೆಲವು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಿಲ್ಲ. ಇದರಿಂದ ಬೆಸ್ಕಾಂಗೆ 6,374 ಕೋಟಿ ರೂಪಾಯಿ ಬಿಲ್ ಬರುವುದು ಬಾಕಿ ಇದೆ.

ಬೆಸ್ಕಾಂಗೆ ಸರ್ಕಾರಿ ಸಂಸ್ಥೆಗಳೇ ಹೊರೆ:

ಬೆಸ್ಕಾಂಗೆ ಸರ್ಕಾರಿ ಸಂಸ್ಥೆಗಳೇ ಹೆಚ್ಚಿನ ಹೊರೆಯಾಗಿದೆ. ಪ್ರತಿಷ್ಠಿತ ಸಂಸ್ಥೆಗಳೇ ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿ, ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ, ಸಣ್ಣ ಮತ್ತು ದೊಡ್ಡ ನೀರಾವರಿ ಇಲಾಖೆ, ಇತರೆ ಸರ್ಕಾರಿ ಸಂಸ್ಥೆಗಳಿಂದ ಒಟ್ಟು 6,000 ಕೋಟಿ ರೂ. ಗಿಂತ ಅಧಿಕ ಬಿಲ್ ಬಾಕಿ ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ಸಂಸ್ಥೆ – ಎಷ್ಟು ಬಾಕಿ ಗೊತ್ತಾ..?

ಬಿಬಿಎಂಪಿ : 820 ಕೋಟಿ ರೂ.
ಜಲಮಂಡಳಿ : 495 ಕೋಟಿ ರೂ.
ನಗರಾಭಿವೃದ್ಧಿ ಇಲಾಖೆ : 113 ಕೋಟಿ ರೂ.
ಸಣ್ಣ & ದೊಡ್ಡ ನೀರಾವರಿ ಇಲಾಖೆ : 51 ಕೋಟಿ ರೂ.
ಇತರೆ ಸರ್ಕಾರಿ ಸಂಸ್ಥೆಗಳು : 4,885 ಕೋಟಿ ರೂ.
ಒಟ್ಟು : 6,374 ಕೋಟಿ

ಬೆಸ್ಕಾಂಗೆ ಬಿಬಿಎಂಪಿ 820 ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಇಟ್ಟಿದೆ. ಬಿಬಿಎಂಪಿಗೆ ಹಲವು ಬಾರಿ ನೋಟೀಸ್ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೇಲಿನ ಹೊರೆ ತಪ್ಪಿಸಲು ನಾವು ಅನಿವಾರ್ಯವಾಗಿ ವಸೂಲಿ ಮಾಡಲೇಬೇಕಾದ ಸ್ಥಿತಿಗೆ ಬಂದಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಬೆಸ್ಕಾಂ ಇಲಾಖೆ ಕರೆಂಟ್ ಬಿಲ್ ಕಟ್ಟದ ಇಲಾಖೆಗೆ ಫುಲ್ ಕ್ಲಾಸ್ ತೆಗೆದುಕೊಂಡಿದೆ.

Related post

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಬಳ

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ…

ನ್ಯೂಸ್ ಆರೋ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು…
ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ನ್ಯೂಸ್ ಆ್ಯರೋ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿ ಇಂದು…
ಆರೋಗ್ಯ ಸಮಸ್ಯೆ; 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದ ನ್ಯಾಯಾಲಯ

ಆರೋಗ್ಯ ಸಮಸ್ಯೆ; 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದ…

ನ್ಯೂಸ್ ಆ್ಯರೋ : ಅತ್ಯಾಚಾರ, ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಗೆ ಮೈಸೂರಿನ ಆರನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಬಂಧಿತನಾಗಿ…

Leave a Reply

Your email address will not be published. Required fields are marked *