
ಮೆಜೆಸ್ಟಿಕ್ ನ ಅಂಡರ್ ಪಾಸ್ ನಲ್ಲಿ ವೇಶ್ಯಾವಾಟಿಕೆ ದಂಧೆಯ ವಿಡಿಯೋ ರೆಕಾರ್ಡ್ – ಮಾನಿನಿಯರ ಕೈಗೆ ಸಿಕ್ಕಿಬಿದ್ದ ಯೂಟ್ಯೂಬರ್ ಕಥೆ ಏನಾಯ್ತು ಗೊತ್ತೇ?
- ಕರ್ನಾಟಕ
- November 2, 2023
- No Comment
- 211
ನ್ಯೂಸ್ ಆ್ಯರೋ : ವೇಶ್ಯಾವಾಟಿಕೆ ಮುಂಬಯಿಯಲ್ಲಿ ಮಾತ್ರ ಹೆಚ್ಚು ನಡೆಯುತ್ತಿದೆ ಎಂದು ಎಲ್ಲರೂ ಅಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಯಾಕೆಂದರೆ ವೇಶ್ಯಾವಾಟಿಕೆ ಎನ್ನುವುದು ಪ್ರತಿಯೊಂದು ನಗರದಲ್ಲೂ ಇದೆ. ಬಹುಶ ಇದು ನಮ್ಮ ನಿಮ್ಮ ಅರಿವಿಗೆ ಬಂದಿರಲಿಕ್ಕಿಲ್ಲ.
ಬೆಂಗಳೂರು ನಗರದಲ್ಲಿ ಈ ಬಗ್ಗೆ ತಿಳಿದ ಯೂಟ್ಯೂಬರ್ ವಿಕಾಸ್‌ಗೌಡ ಇತ್ತೀಚೆಗೆ ಈ ದಂಧೆಯ ಕುರಿತು ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಬೆಂಗಳೂರಿನ ಹೃದಯಭಾಗ ಮತ್ತು ಅತ್ಯಂತ ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ ರಾಜರೋಷವಾಗಿಯೇ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ. ಈ ಕುರಿತು ವಿಡಿಯೋ ಮಾಡುವಾಗ ವಿಕಾಸ್ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇಲ್ಲಿ ನಿತ್ಯವೂ ಸಾವಿರಾರು ಜನರು ಓಡಾಡುತ್ತಾರೆ. ಹೊರಗಿನಿಂದ ಬಂದವರು ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರೆ, ಬೆಂಗಳೂರಿಗರಿಗೆ ಇದು ಸಾಮಾನ್ಯದ ಸಂಗತಿ ಎಂಬಂತೆ ನೋಡಿಯೂ ನೋಡದಂತೆ ಓಡಾಡುತ್ತಾರೆ.
ಇದರ ಬಗ್ಗೆ ಮಾಧ್ಯಮಗಳು ವರದಿ ಮಾಡಿದಾಗ ಪೊಲೀಸರು ಒಂದು ವಾರ ಸಿಬ್ಬಂದಿ ನಿಯೋಜನೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಕೆಲವು ದಿನಗಳ ಬಳಿಕ ಮತ್ತೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಪುರುಷರನ್ನು ಅಡ್ಡಗಟ್ಟಿ ತಮ್ಮ ದಂಧೆ ಪ್ರಾರಂಭಿಸುತ್ತಾರೆ. ಹೀಗೆ ಒಮ್ಮೆ ಇವರ ವಿಡಿಯೋ ಮಾಡಲು ಹೋಗಿ ಅವರ ಕೈಗೆ ಸಿಕ್ಕಿಬಿದ್ದ ವಿಕಾಸ್‌ಗೌಡ ಅವರಿಗೆ ಅವರು ಸಾಕಷ್ಟು ಕಿರುಕುಳವನ್ನು ಕೊಟ್ಟಿದ್ದಾರೆ.
ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ಯೂಟ್ಯೂಬರ್ ವಿಕಾಸ್‌ಗೌಡ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ನಾಲ್ವರು ವಿಡಿಯೋವನ್ನು ಡಿಲೀಟ್ ಮಾಡಿಸಿದರು. ಬಳಿಕ ಪಕ್ಕದಲ್ಲಿದ್ದ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನನ್ನು ನಿಲ್ಲಿಸಿ ವ್ಯವಹಾರ ಕುದುರಿಸುತ್ತಿದ್ದರು. ಅವರ ಮೊಬೈಲ್‌ನಲ್ಲಿ ಸೆರೆಯಾಗಿದ್ದ ಎಲ್ಲಾ ವಿಡಿಯೋ ಡಿಲೀಟ್ ಮಾಡಿಸಿದ ಬಳಿಕ ಮಹಿಳೆಯೊಬ್ಬಳು ಯ್ಯೂಟೂಬರ್‌ನನ್ನು ದಂಧೆಗೆ ಪುಸಲಾಯಿಸಿದ್ದಳು.
ಕಾಲೇಜು ಹುಡುಗರು, ಜನಸಾಮಾನ್ಯರನ್ನು ವೇಶ್ಯಾವಾಟಿಕೆ ದಂಧೆಗೆ ಕರೆಯುವ ಇವರು ಎಲ್ಲರಿಗೂ ಮುಜುಗರ ಉಂಟುಮಾಡುತ್ತಿದ್ದಾರೆ. ಇದಕ್ಕೆ ಕ್ರಮ ಕೈಗೊಳ್ಳಲೇಬೇಕು ಎಂದು ಯ್ಯೂಟೂಬರ್ ಬ್ಲಾಗರ್ ವಿಕಾಸ್ ಮನವಿ ಮಾಡಿದ್ದಾರೆ.