ಆರ್ಗ್ಯಾನಿಕ್ ಚೀಲದ ನೆಪದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ – ಬೆಳ್ತಂಗಡಿ ಮೂಲದ ಅಶ್ವತ್ಥ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

ಆರ್ಗ್ಯಾನಿಕ್ ಚೀಲದ ನೆಪದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ – ಬೆಳ್ತಂಗಡಿ ಮೂಲದ ಅಶ್ವತ್ಥ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

ನ್ಯೂಸ್ ಆ್ಯರೋ‌ : ಆರ್ಗ್ಯಾನಿಕ್​ ಚೀಲದ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಎನ್ವಿ ಗ್ರೀನ್ ಬಯೋಟೆಕ್ (EnviGreen Biotech) ಮಾಲೀಕ ಅಶ್ವತ್ಥ್​ ಹೆಗ್ಡೆ ವಿರುದ್ಧ ಉದ್ಯಮಿ ನೀಲಿಮಾ ಎಂಬವರ ನೀಡಿದ ದೂರಿನಂತೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಪ್ಲಾಸ್ಟಿಕ್ ಬದಲು ಆರ್ಗ್ಯಾನಿಕ್ ಬ್ಯಾಗ್ ಕಂಡು ಹಿಡಿದಿದ್ದಾಗಿ ನಂಬಿಸಿದ್ದ ಅಶ್ವತ್ಥ್​ ಹೆಗ್ಡೆ, ಬಿಸಿ ನೀರಿನಲ್ಲಿ ಕರಗುವ ಕೈಚೀಲ ಮಾಡುವುದಾಗಿ ಭರವಸೆ ನೀಡಿದ್ದರು. ಯಂತ್ರ ಹಾಗೂ ಕಾರ್ಮಿಕರನ್ನು ಕೊಡುವುದಾಗಿ ಹೇಳಿದ್ದರು. 1.26 ಕೋಟಿ ರೂಪಾಯಿ ಮೌಲ್ಯದ ಯಂತ್ರ ಕೊಡುವುದಾಗಿ ಹೇಳಿದ್ದರು ಎಂಬುದಾಗಿ ನೀಲಿಮಾ ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕಾಗಿ ಅಶ್ವತ್ಥ್ ಹೆಗ್ಡೆಗೆ 74 ಲಕ್ಷ ರೂಪಾಯಿ ಹಣವನ್ನು ದೂರುದಾರೆ ನೀಲಿಮಾ ನೀಡಿದ್ದರು. ಆದರೆ, 5 ಲಕ್ಷ ರೂಪಾಯಿ ಮೌಲ್ಯದ ಯಂತ್ರ ಕೊಟ್ಟು ಅಶ್ವತ್ಥ್ ಹೆಗ್ಡೆ ಮೋಸ ಮಾಡಿದ್ದಾರೆ. ತಯಾರಿಕಾ‌ ಜ್ಞಾನವೇ ಇಲ್ಲದ ಕಾರ್ಮಿಕರನ್ನು ನೀಡಿದ್ದಾರೆ. ಆರ್ಗ್ಯಾನಿಕ್ ಬ್ಯಾಗ್ ತಯಾರಿಕೆಗೆ ಕಚ್ಚಾ ವಸ್ತು ಸಹ ನೀಡಲಿಲ್ಲ ಎಂದು ಆರೋಪಿಸಲಾಗಿದೆ.

ವಂಚನೆ ವಿಚಾರವಾಗಿ ಪ್ರಶ್ನೆ ಮಾಡಿದಾಗ ಹೊಸ ಯಂತ್ರ ಕೊಡಿಸುವುದಾಗಿ ನಂಬಿಸಿದ್ದರು. ಆ್ರ ನಂತರ ಯಂತ್ರ ಕೊಡದೇ, ಹಣವನ್ನೂ ವಾಪಸ್ ಕೊಡದೆ ವಂಚನೆ ಎಸಗಿದ್ದಾರೆ ಎಂದು ನಿಲೀಮಾ ದೂರು ನೀಡಿದ್ದರು.

ಸದ್ಯ ಅಶ್ವತ್ಥ್ ಹೆಗ್ಡೆ ವಿರುದ್ಧ ಐಪಿಸಿ ಸೆಕ್ಷನ್ 406, 420ರಡಿ ಪ್ರಕರಣ ದಾಖಲಿಸಲಾಗಿದೆ. ಚೀಲದ ಹೆಸರಲ್ಲಿ ಕೋಟಿಗಟ್ಟಲೇ ಫಂಡ್ ಕಲೆಕ್ಷನ್ ಆರೋಪ ಹಿನ್ನೆಲೆಯಲ್ಲಿ ನಾಗ್ಪುರ, ಛತ್ತೀಸ್​ಗಢ, ಹೈದರಾಬಾದ್​ನಲ್ಲೂ ಅಶ್ವತ್ಥ್ ವಿರುದ್ಧ ಕೇಸ್​​ ದಾಖಲಾಗಿದೆ.

Related post

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ…

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…

Leave a Reply

Your email address will not be published. Required fields are marked *