
ಲಾಭದಲ್ಲಿ ಮುನ್ನಡೆಯುತ್ತಿದೆ ಐಟಿ ದಿಗ್ಗಜ ಇನ್ಫೋಸಿಸ್ – ಅವಧಿಗೂ ಮುನ್ನಾ ಉದ್ಯೋಗಿಗಳ ವೇತನ ದಿಢೀರ್ ಹೆಚ್ಚಳ
- ವಾಣಿಜ್ಯ ಸುದ್ದಿ
- November 2, 2023
- No Comment
- 121
ನ್ಯೂಸ್ ಆ್ಯರೋ : ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳ ವೇತನದಲ್ಲಿ ಹೆಚ್ಚಳ ಮಾಡಿದೆ ಎಂದು ಘೋಷಣೆಯನ್ನು ಮಾಡಿದೆ. ಕಂಪೆನಿ ಲಾಭದಲ್ಲಿ ಮುನ್ನಡೆಯುತ್ತಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿದೆ.
ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ವೇತನವನ್ನು ಹೆಚ್ಚು ಮಾಡಲಾಗುತ್ತದೆ. ಅದು ಏಪ್ರಿಲ್‌ನಲ್ಲಿ ನಂತರ ಅನ್ವಯವಾಗುತಿತ್ತು. ಆದರೆ ಇನ್ಫೋಸಿಸ್ ನವೆಂಬರ್‌ನಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಿದೆ.
ಇನ್ನೊಂದೆಡೆ, ಟಾಟಾ ಕನ್ಸೆಲ್ಟೆನ್ಸಿ ಸರ್ವೀಸಸ್ ಈ ವರ್ಷದ ಮೊದಲ ತ್ರೈಮಾಸಿಕದಲ್ಲೇ ವೇತನ ಹೆಚ್ಚಳದ ಘೋಷಣೆ ಮಾಡಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಉದ್ಯೋಗಿಗಳಿಗೆ ಶೇ.12ರಿಂದ 15ರಷ್ಟು ವೇತನ ಹೆಚ್ಚಳ ಮಾಡಿತು. ಇನ್ನೂ ವಿಪ್ರೋ ಡಿ.1ರಂದು ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಸರ್ವೆಯೊಂದರ ಪ್ರಕಾರ, ಮನೆಯಿಂದ ಕೆಲಸ ಮಾಡಲು ಅನುಮತಿಸಿದರೆ ಮಾತ್ರ ತಮ್ಮ ಇ-ಮೇಲ್, ಚಾಟ್ ಮೆಸೇಜ್ ಹಾಗೂ ವರ್ಚುಯಲ್ ಸಭೆಯ ಮಾಹಿತಿಯನ್ನು ಟ್ರ್ಯಾಕ್ ಮಾಡಲು ತಮ್ಮ ಉದ್ಯೋಗದಾತ ಕಂಪನಿಗಳಿಗೆ ಅನುಮತಿಸಲಾಗುವುದು ಎಂದು ಅರೆಕಾಲಿಕವಾಗಿ ಉದ್ಯೋಗ ಮಾಡುತ್ತಿರುವ ಶೇ.62ರಷ್ಟು ಐಟಿ ಉದ್ಯೋಗಿಗಳು ತಿಳಿಸಿದ್ದಾರೆ.
ಸಾಫ್ಟ್ವೇರ್ ಕಂಪನಿ ಕ್ವಾಲಿಂಕ್ಸ್ ಇತ್ತೀಚಿಗೆ ಸರ್ವೆಯೊಂದನ್ನು ನಡೆಸಿತು. ಜುಲೈನಲ್ಲಿ 32 ದೇಶಗಳ 32,000 ಉದ್ಯೋಗಿಗಳಿಂದ ಪ್ರತಿಕ್ರಿಯೆಗಳನ್ನು ಕಲೆಹಾಕಿತು. ಕಚೇರಿಗೆ ಹೋಗುವ ಪೂರ್ಣಾವಧಿ ಉದ್ಯೋಗಿಗಳು ಮತ್ತು ಮನೆಯಲ್ಲಿ ಕೆಲಸ ಮಾಡುವ ಅರೆಕಾಲಿಕ ಉದ್ಯೋಗಿಗಳಿಂದ ಪ್ರತಿಕ್ರಿಯೆ ಪಡೆಯಲಾಗಿದೆ. ಸರ್ವೆ ಪ್ರಕಾರ, ಕಚೇರಿಗೆ ಹೋಗುವ ಶೇ.49ರಷ್ಟು ಉದ್ಯೋಗಿಗಳು ಮಾತ್ರ ಕಂಪನಿಗಳಿಂದ ಡಿಜಿಟಲ್ ಕಣ್ಗಾವಲಿಗೆ ಸಮ್ಮತಿ ಸೂಚಿಸಿದ್ದಾರೆ. ಅದೇ ರೀತಿ ಮನೆಯಿಂದಲೇ ಪೂರ್ಣವಧಿ ಕೆಲಸ ಮಾಡುವ ಶೇ.57ರಷ್ಟು ಉದ್ಯೋಗಿಗಳು ಕಣ್ಗಾವಲಿಗೆ ಅನುಮತಿ ಸೂಚಿಸಿದ್ದಾರೆ.
ಉದ್ಯೋಗಿಗಳಿಗೆ ಷೇರು ಹಂಚಿದ ಒರಾಕಲ್
ಒರಾಕಲ್ ಫೈನಾನ್ಶಿಯಲ್ ಸರ್ವೀಸಸ್ ಸಾಫ್ಟ್‌ವೇರ್ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ತನ್ನ 10,736 ಈಕ್ವಿಟಿ ಷೇರುಗಳನ್ನು ಹಂಚಿದೆ. ಪ್ರತಿ ಈಕ್ವಿಟಿ ಷೇರಿನ ಮುಖ ಬೆಲೆ ₹5 ಇದೆ. 2014ರ ಒರಾಕಲ್ ಫೈನಾನ್ಶಿಯಲ್ ಸರ್ವೀಸಸ್ ಸಾಫ್ಟವೇರ್ ಸ್ಟಾಕ್ ಯೋಜನೆಯ ಪ್ರಕಾರ, ಅರ್ಹ ಉದ್ಯೋಗಿಗಳಿಗೆ ಷೇರುಗಳನ್ನು ಹಂಚಿರುವುದಾಗಿ ಕಂಪನಿ ಗುರುವಾರ ಘೋಷಿಸಿದೆ. ಈ ಹಂಚಿಕೆಯ ಮೂಲಕ ಒರಾಕಲ್ ಫೈನಾನ್ಶಿಯಲ್ ಸರ್ವೀಸಸ್ ಸಾಫ್ಟವೇರ್ ಲಿಮಿಟೆಡ್‌ನ ಪಾವತಿಸಿದ ಬಂಡವಾಳವು ₹43,30,67,855 ಏರಿಕೆಯಾಗಿದೆ. ಆದರೆ, ಕಂಪನಿಯ ನಿರ್ದೇಶಕರಿಗೆ ಯಾವುದೇ ಷೇರುಗಳನ್ನು ಹಂಚಿಕೆ ಮಾಡಿಲ್ಲ.
ಮಾರುಕಟ್ಟೆಯಲ್ಲಿ ತಗ್ಗಿದ ಹೂಡಿಕೆ: ವೇತನ ಹೆಚ್ಚಳದಲ್ಲಿ ಕಡಿತ
ಐಟಿ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆ ತಗ್ಗಿರುವ ಹಿನ್ನೆಲೆ ಈ ವರ್ಷ ಟೆಕಿಗಳ ವೇತನ ಹೆಚ್ಚಳದಲ್ಲೂ ಪರಿಣಾಮ ಬೀಳಲಿದೆ. ಕಳೆದ ಹಣಕಾಸು ವರ್ಷದಲ್ಲಿ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ವೇತನವನ್ನು ಶೇ.12ರಿಂದ ಶೇ.18ರವರೆಗೆ ಏರಿಕೆ ಮಾಡಿದ್ದವು. ಆದರೆ ಈ ಹಣಕಾಸು ವರ್ಷದಲ್ಲಿ ಕೇವಲ ಶೇ.6ರಿಂದ ಶೇ.10ರವರೆಗೆ ಮಾತ್ರ ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ.
ಇತ್ತೀಚಿಗೆ ಟಿಸಿಎಸ್ ವೇತನ ಹೆಚ್ಚಳದ ಘೋಷಣೆ ಮಾಡಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸಿದ ಉದ್ಯೋಗಿಗಳಿಗೆ ಶೇ.6ರಿಂದ ಶೇ.9ರವರೆಗೆ ಮಾತ್ರ ವೇತನ ಹೆಚ್ಚಳ ಮಾಡಿತ್ತು. ಹಲವು ಐಟಿ ಕಂಪನಿಗಳು ಕೂಡ ಇದೇ ಹಾದಿ ಹಿಡಿಯಬಹುದು ಎಂದು ತಜ್ಞರು ಅಭಿಪ್ರಾಯ.