Mangalore : ಪ್ರತಿಷ್ಠಿತ “ರೋಹನ್ ಸಿಟಿ” ಬಿಜೈ ಹೂಡಿಕೆಯ ಮೇಲೆ 7.5% ಖಚಿತ ಪ್ರತಿಫಲ – ಈ ಸ್ಕೀಮ್ ನ ಪ್ರಯೋಜನ ಪಡೆಯೋದು ಸುಲಭ : ವಿವರ ಇಲ್ಲಿದೆ..

Mangalore : ಪ್ರತಿಷ್ಠಿತ “ರೋಹನ್ ಸಿಟಿ” ಬಿಜೈ ಹೂಡಿಕೆಯ ಮೇಲೆ 7.5% ಖಚಿತ ಪ್ರತಿಫಲ – ಈ ಸ್ಕೀಮ್ ನ ಪ್ರಯೋಜನ ಪಡೆಯೋದು ಸುಲಭ : ವಿವರ ಇಲ್ಲಿದೆ..

ನ್ಯೂಸ್ ಆ್ಯರೋ‌ : ಮಂಗಳೂರಿನ ಪ್ರತಿಷ್ಠಿತ ರೋಹನ್ ಕಾರ್ಪೋರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತಿ ದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾದ ‘ರೋಹನ್‌ ಸಿಟಿ’ ಬಿಜೈ ಬೃಹತ್‌ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.

ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಬರುವ ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಜೈ ಮುಖ್ಯ ರಸ್ತೆಯಲ್ಲಿನ ‘ರೋಹನ್ ಸಿಟಿ’ ವಾಣಿಜ್ಯ ಮಳಿಗೆಗಳ ಹೂಡಿಕೆದಾರರಿಗೆ ಖಚಿತ 7.50% ಪ್ರತಿಫಲ ನೀಡುವ ಸ್ತ್ರೀಮನ್ನು ಎರಡು ತಿಂಗಳ ಅವಧಿಗೆ ಹಮ್ಮಿಕೊಳ್ಳಲಾಗಿದೆ. ಈ ಎರಡು ತಿಂಗಳುಗಳಲ್ಲಿ ವಿಶೇಷ ದರ ಕಡಿತದೊಂದಿಗೆ ವಾಣಿಜ್ಯ ಮಳಿಗೆಗಳನ್ನು ಮಾರಾಟ ಮಾಡಲಾಗುವುದು, ಬ್ಯಾಂಕ್ ಹಾಗೂ ಇನ್ನಿತರ ವಿತ್ತೀಯ ಸಂಸ್ಥೆಗಳಲ್ಲಿ ನಿರಖು ಠೇವಣಿಗಳ ಮೇಲಿನ ಬಡ್ಡಿ ದರವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಖಚಿತ 7.50% ಪ್ರತಿಫಲ ನೀಡುವ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ. ಮಾತ್ರವಲ್ಲದೆ, ವಾಣಿಜ್ಯ ಮಳಿಗೆಗಳ ಮೌಲ್ಯವು ವರ್ಷಗಳು ಕಳೆದಂತೆ ಏರಿಕೆಯಾಗುತ್ತಾ ಸಾಗುತ್ತಿವೆ.

‘ರೋಹನ್‌ ಸಿಟಿ’ ರೋಹನ್ ಕಾರ್ಪೊರೇಷನ್ ಇದರ ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾಗಿದೆ. 284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಈ ಯೋಜನೆಯು 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್, 6 ಬಿಹೆಚ್ಕೆ,. 4 ಬಿಎಚ್‌ಕೆ, 1405 ರಿಂದ 1900 ಚದರ ಅಡಿ 3 ಬಿಎಚ್ಕೆ, 1075 ರಿಂದ 1135 ಚದರ ಅಡಿ 2 ಬಿಎಚ್‌ಕೆ ಮತ್ತು 700 ರಿಂದ 815 ಚದರ ಅಡಿ 1ಬಿಎಚ್‌ಕೆ ಫ್ಲ್ಯಾಟುಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ. ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ ಆಧುನಿಕ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ, ರೋಹನ್ ಸಿಟಿ ನಿವಾಸಿಗಳಿಗೆ ಉತ್ಕೃಷ್ಟ ಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರ ಕೇಂದ್ರವಾಗಿದೆ.

ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು :

2 ಹಂತಗಳಲ್ಲಿ 35000 ಚದರ ಅಡಿ ಹೈಪರ್ ಮಾರುಕಟ್ಟೆ • ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ • ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ • ಮಂಗಳೂರಿನ ಹೃದಯಭಾಗದಲ್ಲಿ ಅತೀ ಸಮಂಜಸ ಬೆಲೆಗಳಲ್ಲಿ ಲಕ್ಷುರಿ ಸೌಲಭ್ಯಗಳು • ಪ್ರಮುಖ ನ್ಯಾಶನಲ್ ಬ್ಯಾಂಕ್‌ಗಳಿಂದ ಪ್ರಾಜೆಕ್ಟ್ ಅಂಗಿಕೃತ – ತ್ವರಿತ ಸಾಲ ಸೌಲಭ್ಯ ಸೇವೆ • ಡೀಸೆಲ್ ಜನರೇಟರ್‌ಗಳೊಂದಿಗೆ 100% ಪವರ್ ಬ್ಯಾಕಪ್ • ಸ್ವಯಂಚಾಲಿತ ಪಪರ್ ಚೇಂಚ್ ಓವರ್ ವ್ಯವಸ್ಥೆ • ಅತ್ಯಾಧುನಿಕ ಭದ್ರತಾ ವ್ಯವಸ್ಥೆ • ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ • ಹಸಿರುವನ, ಉದ್ಯಾನವನ • ಘನ ತ್ಯಾಜ್ಯ ಸಂಸ್ಕರಣಾ ಘಟಕ • ಸೌರ ಶಕ್ತಿ ಸಂಗ್ರಹ ಘಟಕ – ಲೈಟಿಂಗ್ ಆಟೊಮೇಷನ್ (ಮಂಗಳೂರಿನಲ್ಲಿ ಮೊದಲ ಬಾರಿಗೆ)

ಅಂತರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್‌ ನ ವಿಶೇಷತೆಗಳು :

• ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ • ಫ್ಯಾಮಿಲಿ ರೆಸ್ಟೋರೆಂಟ್ • ಕಾಫಿ ಶಾಪ್ • ಒಳಾಂಗಣ ಕ್ರೀಡೆ • ಬಾಸ್ಕೆಟ್ ಬಾಲ್ ಕೋರ್ಟ್ • ಬಾಡ್ಮಿಂಟನ್ ಕೋರ್ಟ್ ವಿಡಿಯೋ ಗೇಮ್ಸ್ ವಲಯ • ಸುಸಜ್ಜಿತ ಜಿಮ್ • ಸ್ಪಾ, ಯುನಿಸೆಕ್ಸ್ ಸಲೂನ್ • ಆರ್ಯುವೇದಿಕ್ ವೆಲ್‌ಸ್ ಸೆಂಟರ್ • 3ಡಿ ಥಿಯೇಟರ್ • ಮಲ್ಟಿ-ಪರ್ಪಸ್ ಹಾಲ್ • ಸ್ವಿಮ್ಮಿಂಗ್ ಫೂಲ್ ಜಾಗಿಂಗ್ ಟ್ರ್ಯಾಕ್ • ಸೀನಿಯರ್ ಸಿಟಿಜನ್ ಪಾರ್ಕ್ • ಚಿಣ್ಣರ ಆಟದ ವಲಯ • ಸುಸಜ್ಜಿತ ಗಂಥಾಲಯ • ವಿದ್ಯಾರ್ಥಿ ಕಲಿಕಾ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.

ರೋಹನ್ ಮೊಂತೇರೊ – ಯಶಸ್ಸಿನ ರೂವಾರಿ :

ರೋಹನ್ ಮೊಂತೇರೊ ಯುವ ಪ್ರಾಯದಲ್ಲೇ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಜ್ಜೆಯನ್ನು ಇಟ್ಟಿದ್ದು, ಇಂದು ‘ರೋಹನ್ ಕಾರ್ಪೊರೇಷನ್’ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬೆಳೆದಿದ್ದಾರೆ. ವೃತ್ತಿಯಲ್ಲಿ ಅವರ ಬದ್ಧತೆ ಮತ್ತು ಪರಿಶ್ರಮದಿಂದ ವಿಸ್ತಾರವಾದ ರಿಯಲ್ ಎಸ್ಟೇಟ್ ಉದ್ಯಮದ ಸಂಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಿದೆ. ರೋಹನ್ ಮೊಂತೆರೊ ನಿರ್ಮಾಪಕರಾಗಿ ಎಲ್ಲಾ ಕೆಲಸಗಳಲ್ಲೂ ಸೂಕ್ಷ್ಮತೆ, ಅಚ್ಚುಕಟ್ಟು ಮತ್ತು ಪೂರ್ಣತೆಯನ್ನು ಹೊಂದಿದ್ದು, ಗ್ರಾಹಕರ ಅಭಿಮಾನವನ್ನು ಗಳಿಸಿದ್ದಾರೆ.

ರೋಹನ್ ಮೊಂತೇರೊ ಇವರ ನಾಯಕತ್ವದಲ್ಲಿ, ಅವರ ನಿರ್ಮಾಣ ಸಂಸ್ಥೆಯು ಮಂಗಳೂರು ನಗರದಲ್ಲಿ ಬೃಹತ್‌ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಜನಮನಗಳಲ್ಲಿ ನೆಲೆಸಿ, ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಪಕ್ಷಿಕೆರೆಯಲ್ಲಿ ಮತ್ತು ಕುಲಶೇಖರದಲ್ಲಿ ರೋಹನ್ ಎಸ್ಟೇಟ್, ಸುರತ್ಕಲ್‌ನಲ್ಲಿ ರೋಹನ್ ಎನ್‌ಕ್ಲೇವ್ ಮತ್ತು ರೋಹನ್ ಅವೆನ್ಯೂ ಸಂಪೂರ್ಣಗೊಂಡಿದ್ದು, ಪಂಪ್‌ವೆಲ್ ಬಳಿಯ ಕಪಿತಾನಿಯೊದಲ್ಲಿನ ರೋಹನ್ ಸ್ಕ್ವೇರ್ ನಿರ್ಮಾಣದ ಕೊನೆಯ ಹಂತದಲ್ಲಿದೆ.

‘ರೋಹನ್‌ ಸಿಟಿ’ ಹೆಚ್ಚು ಅನುಕೂಲಕರ ಹೂಡಿಕೆ ತಾಣವಾಗಿ, ಹೂಡಿಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಅದರ ಹೇರಳವಾದ ವಾಣಿಜ್ಯ ಘಟಕಗಳೊಂದಿಗೆ, ನಗರವು ವಾಣಿಜ್ಯೋದ್ಯಮಿಗಳು, ಸ್ಟಾರ್ಟ್ ಅಪ್ಸ್ ಗಳು ಮತ್ತು ಸ್ಥಾಪಿತ ವ್ಯವಹಾರಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತದೆ.

ವೈವಿಧ್ಯಮಯ ವಾಣಿಜ್ಯ ಸ್ಥಳಗಳ ಲಭ್ಯತೆಯು ಉದ್ಯಮಿಗಳು ತಮ್ಮ ಉದ್ಯಮಗಳನ್ನು ಪಾರಂಭಿಸಲು ಪ್ರಶಸ್ತವಾದ ಸ್ಥಳವಾಗಿದೆ. ಹಾಗೆಯೇ ಅಸ್ತಿತ್ವದಲ್ಲಿರುವ ವ್ಯವಹಾರಗಳ ವಿಸ್ತರಣೆಯ ಅಗತ್ಯಗಳನ್ನು ಪೂರೈಸುತ್ತದೆ. ಇದಲ್ಲದೆ, ಹೂಡಿಕೆದಾರರು ವಾಣಿಜ್ಯ ಆಸ್ತಿಗಳನ್ನು ಖರೀದಿಸುವ ಅವಕಾಶವನ್ನು ಬಳಸಿ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಪರಿಸರದ ಲಾಭವನ್ನು ಪಡೆಯಬಹುದು.

‘ರೋಹನ್ ಸಿಟಿ’ಯ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡಿ, ಬಾಡಿಗೆ ಮಾರುಕಟ್ಟೆಯಿಂದ ಲಾಭ ಪಡೆದು, ಸ್ಥಿರವಾದ ಆದಾಯವನ್ನು ಖಾತ್ರಿಪಡಿಸಿಕೊಳ್ಳಬಹುದು. ಹೀಗಾಗಿ ದೃಢವಾದ ಮಾರುಕಟ್ಟೆ ಸಾಕಷ್ಟು ಅವಕಾಶಗಳು ಮತ್ತು ಅನುಕೂಲಕರ ವ್ಯಾಪಾರ, ಪರಿಸರ ವ್ಯವಸ್ಥೆಯೊಂದಿಗೆ “ರೋಹನ್ ಸಿಟಿ” ಉತ್ತಮ ಹೂಡಿಕೆಗಳನ್ನು ಮಾಡಲು ಮತ್ತು ಸಮಗ್ರ ನಗರ ಕೇಂದ್ರದ ಪ್ರತಿಫಲವನ್ನು ಪಡೆಯಲು ಬಯಸುವವರಿಗೆ ಆಕರ್ಷಕ ಆಯ್ಕೆಯಾಗಿದೆ.

ಹೆಚ್ಚಿನ ವಿವರಗಳಿಗಾಗಿ ರೋಹನ್ ಸಿಟಿ, ಬಿಜೈ ಮುಖ್ಯರಸ್ತೆಯ ಕಛೇರಿ ಅಥವಾ ದೂರವಾಣಿ 9845490100 / 9845607725 / 9845607724 / 9036392627 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rohancity.in ಅಧಿಕೃತ ವೆಬ್ ಸೈಟ್ ಭೇಟಿ ನೀಡಬಹುದಾಗಿದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *