ಕ್ರಿಕೆಟ್ ದೇವರ ಪ್ರತಿಮೆ ಲೋಕಾರ್ಪಣೆಯ ಅದ್ಧೂರಿ ಕಾರ್ಯಕ್ರಮ – ಪ್ರತಿಮೆ ನಿರ್ಮಿಸಿದ್ದೆಲ್ಲಿ? ಯಾಕಾಗಿ ನಿರ್ಮಾಣ ಗೊತ್ತಾ?

ಕ್ರಿಕೆಟ್ ದೇವರ ಪ್ರತಿಮೆ ಲೋಕಾರ್ಪಣೆಯ ಅದ್ಧೂರಿ ಕಾರ್ಯಕ್ರಮ – ಪ್ರತಿಮೆ ನಿರ್ಮಿಸಿದ್ದೆಲ್ಲಿ? ಯಾಕಾಗಿ ನಿರ್ಮಾಣ ಗೊತ್ತಾ?

ನ್ಯೂಸ್ ಆ್ಯರೋ : ಭಾರತ ಕಂಡ ಅದ್ಭುತ ಆಟಗಾರ, ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಎಂದರೆ ಯಾರಿಗಿಷ್ಟವಿಲ್ಲ. ಒಮ್ಮೆಯಾದರೂ ಅವರನ್ನು ನೋಡಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ.

ಕ್ರಿಕೆಟ್ ಕ್ರೇತ್ರದಲ್ಲಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿರುವ ಸಚಿನ್ ಕ್ರಿಕೆಟ್​ಗೆ ವಿದಾಯ ಹೇಳಿ ಹಲವು ವರ್ಷಗಳೇ ಕಳೆದರೂ ಅವರ ಮೇಲೆ ಭಾರತೀಯರೆಲ್ಲರ ಅಭಿಮಾನ, ಪ್ರೀತಿ ಇನ್ನೂ ಹಾಗೆಯೇ ಇದೆ.

ಹೀಗಾಗಿಯೇ ಈ ಕ್ರಿಕೆಟ್​ ದೇವರ ಪ್ರತಿಮೆಯನ್ನು ವಾಣಿಜ್ಯ ನಗರಿ ಮುಂಬಯಿನ ಐತಿಹಾಸಿಕ ವಾಂಖೆಡೆ ಕ್ರಿಕೆಟ್‌ ಮೈದಾನದಲ್ಲಿ ನಿರ್ಮಿಸಲಾಗಿದೆ. ವಾಂಖೆಡೆ ಕ್ರೀಡಾಂಗಣ ತೆಂಡೂಲ್ಕರ್ ಅವರ ತವರು ಮೈದಾನ ಮಾತ್ರವಲ್ಲ ಅವರು ತಮ್ಮ ಅಂತಿಮ 200ನೇ ಟೆಸ್ಟ್ ಪಂದ್ಯವನ್ನು 2013ರ ನವೆಂಬರ್‌ನಲ್ಲಿ ಇಲ್ಲೇ ಆಡಿದ್ದರು. ಹೀಗಾಗಿಯೇ ಅವರಿಗೆ ಗೌರವಾರ್ಥವಾಗಿ ಎಂಸಿಸಿಯು ಇಲ್ಲೇ ಪ್ರತಿಮೆ ನಿರ್ಮಾಣ ಮಾಡಿ ಗೌರವ ಸಲ್ಲಿಸಿದೆ.

ತೆಂಡೂಲ್ಕರ್​ ಅವರ 50 ವರ್ಷಗಳ ಸವಿ ನೆನಪಿಗಾಗಿ ಮುಂಬಯಿನ ಕ್ರಿಕೆಟ್ ಅಸೋಸಿಯೇಷನ್ ಈ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿದ್ದು, ಅದ್ದೂರಿ ಕಾರ್ಯಕ್ರಮದ ಮೂಲಕ ಬುಧವಾರ ಅನಾವರಣಗೊಳಿಸಿದೆ.

200 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಸಚಿನ್ ಅವರದೇ ಗಾತ್ರದ ಪ್ರತಿಮೆಯನ್ನು ವಾಂಖೆಡೆ ಸ್ಟೇಡಿಯಂನಲ್ಲಿಯೇ ಸಚಿನ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರಿಂದ ಅಲ್ಲಿ ಅವರ ಹೆಸರಿನ ಸ್ಟ್ಯಾಂಡ್ ಇದೆ. ಈ ಸ್ಟ್ಯಾಂಡ್ ಬಳಿಯೇ ಸಚಿನ್ ಪ್ರತಿಮೆ ಈಗ ನಿರ್ಮಿಸಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಚಿನ್ ಅವರ 50 ವರ್ಷಗಳ ಅರ್ಥಪೂರ್ಣ ಬದುಕಿಗೆ ಇದನ್ನು ಸಮರ್ಪಿಸಲಾಗಿದೆ.

ಕ್ರಿಕೆಟ್‌ನಲ್ಲಿ ತೆಂಡೂಲ್ಕರ್‌ ಮಾಡಿರುವ ಹಲವು ದಾಖಲೆಗಳು ಯಾರೂ ಮಾಡಿಲ್ಲ. ಮುಖ್ಯವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬರೋಬ್ಬರಿ 15,921 ರನ್‌ಗಳು ಹಾಗೂ ಏಕದಿನ ಸ್ವರೂಪದಲ್ಲಿ 18,426 ರನ್‌ಗಳನ್ನು ಸಿಡಿಸಿರುವ ಸಚಿನ್ ದಾಖಲೆಗಳನ್ನು ಇನ್ನೂ ಯಾರೂ ಮುರಿಯಲು ಸಾಧ್ಯವಾಗಿಲ್ಲ.

ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಎನ್​ಸಿಎ ಮುಖ್ಯಸ್ಥ ಶರದ್ ಪವಾರ್, ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಎಂಸಿಎ ಪ್ರೆಸಿಡೆಂಟ್ ಅಮೋಲ್ ಕಾಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *