ಬೆಂಗಳೂರು ಕಂಬಳ ಅದ್ಧೂರಿ ಯಶಸ್ವಿ – ಇಲ್ಲಿದೆ ಕೂಟದ ಫೈನಲ್ ರಿಸಲ್ಟ್..

ಬೆಂಗಳೂರು ಕಂಬಳ ಅದ್ಧೂರಿ ಯಶಸ್ವಿ – ಇಲ್ಲಿದೆ ಕೂಟದ ಫೈನಲ್ ರಿಸಲ್ಟ್..

ನ್ಯೂಸ್ ಆ್ಯರೋ : ಈ ಸೀಸನ್ ನಲ್ಲಿ ಕೇವಲ ಕರಾವಳಿಯಲ್ಲಷ್ಟೇ ಕೇಳುತ್ತಿದ್ದ ‘ಅಲೇ ಬುಡ್ತೆರ್’ ಎನ್ನುವ ಮಾತಿನ ಸೊಗಡು ಈ ಬಾರಿ ಸಿಲಿಕಾನ್ ಸಿಟಿಯಲ್ಲೂ ಕೇಳಿಬಂದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಕಂಬಳ-2023 ಭಾನುವಾರ ಸಂಪನ್ನಗೊಂಡಿತು. ಈ ಕೂಟವನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಜನ ರಾಜಕಾರಣಿಗಳು, ಸಿನಿಮಾ ತಾರೆಯರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಕೂಟದ ಅಂತಿಮ ಫಲಿತಾಂಶವೂ ಹೊರಬಿದ್ದಿದೆ. ತುಳುಕೂಟದ ವತಿಯಿಂದ ಹಮ್ಮಿಕೊಂಡಿದ್ದ ಈ ಕಂಬಳ ಕಾರ್ಯಕ್ರಮಕ್ಕೆ ನಟ ರಕ್ಷಿತ್ ಶೆಟ್ಟಿ, ಉಪೇಂದ್ರ, ರಮೇಶ್ ಅರವಿಂದ್ ಹಾಗೂ ನಟಿ ಪೂಜಾ ಹೆಗ್ಡೆ ಸೇರಿದಂತೆ ಅನೇಕರು ಆಗಮಿಸಿದ್ದರು.

ಸಿನಿಮಾ ನಟ- ನಟಿಯರು ಕಂಬಳದ ಬಗ್ಗೆ ಹೇಳಿದ್ದೇನು..?

ಈ ಸಂದರ್ಭ ನಟ ರಮೇಶ್ ಅರವಿಂದ್ ಮಾತನಾಡಿ ‘ ನಮ್ಮತನ ಎನ್ನುವುದು ನಮ್ಮ ಕಲೆ, ಕ್ರೀಡೆ, ಸಂಸ್ಕೃತಿಗಳಲ್ಲಿ ಅಡಗಿದೆ. ಕ್ರಿಕೆಟ್ ನಂತೆ ನಮ್ಮ ಸಾಂಪ್ರದಾಯಿಕ ಮಣ್ಣಿನ ಕ್ರೀಡೆಯಾದ ಕಂಬಳವನ್ನು ಜನಪ್ರಿಯಗೊಳಿಸುವ ಅಗತ್ಯವಿದೆ’ ಎಂದು ಹೇಳಿದರು. ಇನ್ನು ನಮ್ಮವರೇ ಆದ ನಟ ರಕ್ಷಿತ್ ಶೆಟ್ಟಿ ಮಾತನಾಡಿ ‘ ಕರಾವಳಿ ಕಂಬಳವನ್ನು ನಾನು ನೋಡುತ್ತಿರುತ್ತೇನೆ. ನಮಗೂ ಅದಕ್ಕೂ ವಿಶೇಷ ನಂಟಿದೆ. ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಿರುವುದು ತುಂಬಾ ಖುಷಿಯಾಗಿದೆ’ ಎಂದು ಹೇಳಿದರು.

ನಟ ಉಪೇಂದ್ರ ಮಾತನಾಡುತ್ತಾ ‘ ಕರಾವಳಿ ಭಾಗದ ಸ್ನೇಹಿತರು ತುಂಬಾ ಜನ ಸಿನಿಮಾರಂಗದಲ್ಲೇ ಪರಿಚಯವಾಗಿದ್ದರು. ಹಾಗೆಯೇ ಕರಾವಳಿ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಎಲ್ಲರನ್ನು ಒಟ್ಟಿಗೆ ನೋಡಿ ನಿಜಕ್ಕೂ ಖುಷಿಯಾಯಿತು’ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

ಇನ್ನು ನಟಿ ಪೂಜಾ ಹೆಗ್ಡೆ ಮಾತನಾಡಿ ‘ ನಮ್ಮ ಕಂಬಳ ನಮ್ಮ ಹೆಮ್ಮೆ. ಇದು ಕರ್ನಾಟಕ ಮಾತ್ರವಲ್ಲ ಜಗದಗಲ ಪಸರಿಸಬೇಕು. ಮುಂದಿನ ವರ್ಷ ಬೆಂಗಳೂರಿನಲ್ಲಿ ಮತ್ತಷ್ಟು ಅದ್ಧೂರಿಯಾಗಿ ಕಂಬಳ ನಡೆಯಲಿ’ ಎಂದು ಹಾರೈಸಿದರು.

ಕಂಬಳ ಫಲಿತಾಂಶ:

ಬೆಂಗಳೂರು ‘ರಾಜ- ಮಹಾರಾಜ’ ಜೋಡುಕೆರೆ ಕಂಬಳ ಕೂಟದ ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ನೇಗಿಲು ಕಿರಿಯ ವಿಭಾಗದಲ್ಲಿ ಒಟ್ಟು 159ಕೋಣಗಳ ಜೊತೆ ಸ್ಪರ್ಧಿಸಿದ್ದವು.

ಕಂಬಳದಲ್ಲಿ ಗೆದ್ದ ಜೋಡಿಗೆ ಮೊದಲ ಬಹುಮಾನವಾಗಿ 16ಗ್ರಾಂ ಚಿನ್ನದ ಪದಕ ಹಾಗೂ ಒಂದು ಲಕ್ಷ ನಗದು, ಎರಡನೇ ಸ್ಥಾನಕ್ಕೆ 8ಗ್ರಾಂ ಚಿನ್ನದ ಪದಕ, 50ಸಾವಿರ ನಗದು, ಮೂರನೇ ಸ್ಥಾನಕ್ಕೆ 4ಗ್ರಾಂ ಚಿನ್ನ ಮತ್ತು 25ಸಾವಿರ ಹಣ ನೀಡಲಾಯಿತು.

ಫಲಿತಾಂಶ ಹೀಗಿದೆ…

ಹಗ್ಗ ಹಿರಿಯ:

ಪ್ರಥಮ- ನಂದಳಿಕೆ ಶ್ರೀಕಾಂತ್ ಭಟ್ ‘ಸಿ’
ಓಡಿಸಿದವರು- ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ

ಓಡಿಸಿದವರು- ಭಟ್ಕಳ ಶಂಕರ್ ನಾಯ್ಕ್

ಹಗ್ಗ ಕಿರಿಯ:

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ

ಓಡಿಸಿದವರು- ಮಾಸ್ತಿಕಟ್ಟೆ ಸ್ವರೂಪ್

ದ್ವಿತೀಯ- ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ‘ಎ’
ಓಡಿಸಿದವರು- ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ:

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ

ಓಡಿಸಿದವರು- ಸರಪಾಡಿ ಧನಂಜಯ ಗೌಡ
ದ್ವಿತೀಯ- ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ

ಓಡಿಸಿದವರು- ಪಟ್ಟೆ ಗುರುಚರಣ್

ನೇಗಿಲು ಕಿರಿಯ:

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ

ಓಡಿಸಿದವರು- ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ಅಡ್ಡಹಲಗೆ:

ಪ್ರಥಮ: ಎಸ್.ಎಮ್.ಎಸ್ ಫ್ಯಾಮಿಲಿ ಬೆಂಗಳೂರು
ಹಲಗೆ ಮುಟ್ಟಿದವರು- ಭಟ್ಕಳ ಹರೀಶ್
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಕನೆಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ ‘ಬಿ’

ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *