ಸ್ಮಾರ್ಟ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ – ಕೇವಲ 329ರೂ.ಗಳಿಗೆ 1000ಜಿಬಿ ಡೇಟಾ ಪಡೆಯೋದು ಹೇಗೆ?

ಸ್ಮಾರ್ಟ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ – ಕೇವಲ 329ರೂ.ಗಳಿಗೆ 1000ಜಿಬಿ ಡೇಟಾ ಪಡೆಯೋದು ಹೇಗೆ?

ನ್ಯೂಸ್ ಆ್ಯರೋ : ಸ್ಮಾರ್ಟ್ ಫೋನ್ ಬಳಕೆದಾರರಿಗೆ ಅನೇಕ ಸಂದರ್ಭದಲ್ಲಿ ಕಾಡುವ ಸಮಸ್ಯೆ ಅಂದ್ರೆ ಅದು ಡೇಟಾ ಸಮಸ್ಯೆ. ನಾವು ಕಂಟಿನ್ಯೂ ಆಗಿ ಯಾವುದಾದರೂ ವೆಬ್ ಸಿರೀಸ್, ಕ್ರಿಕೆಟ್ ನ್ನು ಮೊಬೈಲ್ ನಲ್ಲಿ ನೋಡ್ಬೇಕಾದ್ರೆ ಅದಕ್ಕೆ ಬೇಕಾಗುವಷ್ಟು ಡಾಟಾ ಪ್ಯಾಕ್ ಹಾಕಿಕೊಳ್ಳಲೇಬೇಕು. ಆಫೀಸ್ ಗಳಲ್ಲಿ ಹೆಚ್ಚಿನ ಕೆಲಸಕ್ಕೆ ಅದೇ ಕಾರಣಕ್ಕೆ ವೈಫೈ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಇದೀಗ ಮೊಬೈಲ್ ಬಳಕೆದಾರರಿಗೆ ಟೆಲಿಕಾಂ ಕಂಪೆನಿ ಶುಭಸುದ್ದಿಯೊಂದು ನೀಡಿದೆ.

ಬಿಎಸ್ ಎನ್ ಎಲ್ ಕಂಪೆನಿಯು ರೂ. 299ರ ಅಗ್ಗದ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಜಾರಿಗೆ ತರಲಿದೆ. ಈ ಯೋಜನೆ ಒಂದು ತಿಂಗಳ ಮಾನ್ಯತೆಯೊಂದಿಗೆ ಬರಲಿದೆ.

ಬಿಎಸ್ಎನ್ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಕಂಪನಿಯು ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಸಾಕಷ್ಟು ಪ್ರಯೋಜನಗಳೊಂದಿಗೆ ಹಲವು ಯೋಜನಗಳನ್ನು ನಡೆಸುತ್ತಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳಂತೆ, ಸರ್ಕಾರಿ ಟೆಲಿಕಾಂ ಕಂಪನಿಯ ಬ್ರಾಡ್‌ಬ್ಯಾಂಡ್ ಪೋರ್ಟ್‌ಫೋಲಿಯೊ ಕೂಡ ಒಂದಕ್ಕಿಂತ ಹೆಚ್ಚು ಯೋಜನೆಗಳನ್ನು ಒಳಗೊಂಡಿದೆ.

ಕಡಿಮೆ ವೆಚ್ಚದಲ್ಲಿ ನಿಮಗೆ ಹೆಚ್ಚಿನ ಡೇಟಾವನ್ನು ಒದಗಿಸುವ ಯೋಜನೆಯನ್ನು ನೀವು ಹುಡುಕುತ್ತಿದ್ದರೆ ನಾವು ನಿಮಗೆ ಬಿಎಸ್ಎನ್ಎಲ್ ನ ಕೆಲ ಅಗ್ಗದ ಬ್ರಾಡ್‌ಬ್ಯಾಂಡ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಅವು ಒಂದೇ ರೀಚಾರ್ಜ್ ನಲ್ಲಿ ನಿಮಗೆ 1000GB ಡೇಟಾವನ್ನು ನೀಡುತ್ತದೆ. ಬಿಎಸ್ಎನ್ಎಲ್ ನ ಬ್ರಾಡ್‌ಬ್ಯಾಂಡ್ ಪೋರ್ಟ್‌ಫೋಲಿಯೋ ಅನೇಕ ಅಗ್ಗದ ಯೋಜನೆಗಳು ಒಳಗೊಂಡಿವೆ.

ಇಂದು ನಾವು ನಿಮಗೆ ಬಿಎಸ್ಎನ್ಎಲ್ ನ ಕೆಲ ಬ್ರಾಡ್‌ಬ್ಯಾಂಡ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ನಿಮಗೆ ಕಡಿಮೆ ಬೆಲೆಯಲ್ಲಿ 1000GB ವರೆಗೆ ಡೇಟಾ ಪ್ರವೇಶವನ್ನು ನೀಡುತ್ತವೆ. ವಿಶೇಷವೆಂದರೆ ಈ ಪಟ್ಟಿಯಲ್ಲಿರುವ ಅಗ್ಗದ ಪ್ಲಾನ್ ಕೇವಲ 329 ರೂ.ಗಳದ್ದಾಗಿದೆ. ಎಲ್ಲಾ ಯೋಜನೆಗಳ ಬೆಲೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1.1000GB ನೀಡುವ ಬಿಎಸ್ಎನ್ಎಲ್ ನ ಯೋಜನೆಗಳು

ರೂ 329 ಯೋಜನೆ- ಬಿಎಸ್ಎನ್ಎಲ್ ಕಂಪನಿಯ ಅಗ್ಗದ ಬ್ರಾಡ್‌ಬ್ಯಾಂಡ್ ಯೋಜನೆ ರೂ 329 ಗಳದ್ದಾಗಿದೆ. ಈ ಯೋಜನೆಯು 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಈ ಯೋಜನೆಯಲ್ಲಿ 20 Mbps ವೇಗದಲ್ಲಿ 1000GB ಡೇಟಾಗೆ ಪ್ರವೇಶವನ್ನು ನೀಡುತ್ತದೆ. 1000GB ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವು 4 Mbps ಗೆ ಕಡಿಮೆಯಾಗುತ್ತದೆ.

  1. ರೂ 399 ಯೋಜನೆ- ಈ ಪಟ್ಟಿಯಲ್ಲಿನ ಮುಂದಿನ ಯೋಜನೆ ರೂ 399 ಗಳದ್ದಾಗಿದೆ. ಈ ಯೋಜನೆಯು 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ 1000GB ವರೆಗೆ ಅನಿಯಮಿತ ಡೇಟಾ ಪ್ರವೇಶವನ್ನು ನೀಡುತ್ತದೆ. ಇದರಲ್ಲಿ ಇಂಟರ್ನೆಟ್‌ನ ವೇಗವು 30 Mbps ವರೆಗೆ ಇರುತ್ತದೆ. 1000GB ಡೇಟಾ ಕೋಟಾ ಮುಗಿದ ನಂತರ ಇಂಟರ್ನೆಟ್ ವೇಗವು 30 Mbps ಗೆ ಕಡಿಮೆಯಾಗುತ್ತದೆ.
  2. ರೂ 799 ಯೋಜನೆ- ಈ ಪಟ್ಟಿಯಲ್ಲಿನ ಮುಂದಿನ ಯೋಜನೆ ರೂ 799 ಆಗಿದೆ. ಈ ಯೋಜನೆಯು 1 ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ಬಳಕೆದಾರರು 100 Mbps ವೇಗದಲ್ಲಿ 1000GB ವರೆಗೆ ಡೇಟಾ ಪ್ರವೇಶವನ್ನು ಪಡೆಯುತ್ತಾರೆ. ಇದರ ನಂತರ ಇಂಟರ್ನೆಟ್ ವೇಗವು 5 Mbps ಗೆ ಕಡಿಮೆಯಾಗುತ್ತದೆ.

ಕಡಿಮೆ ಬೆಲೆಯಲ್ಲಿ ನಾವು ಡೇಟಾವನ್ನು ಪಡೆದುಕೊಳ್ಳಲು ಟೆಲಿಕಾಂ ಕಂಪೆನಿ ಇದೀಗ ಈ ಯೋಜನೆಯನ್ನು ಜಾರಿಗೆ ತಂದಿದೆ. ಉಪಯುಕ್ತ ಎಂದಾದಲ್ಲಿ ಬಳಕೆದಾರರು ಈ ಪ್ರಯೋಜನವನ್ನು ಉಪಯೋಗಿಸಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *