20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ ಭ್ರಷ್ಟಾಚಾರ, ಲಂಚದ ಹಾದಿಯನ್ನೂ ಹಿಡಿಯುತ್ತಾರೆ. ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಆ ವೃತ್ತಿಗೂ ಅಗೌರವ ಸೂಚಿಸುವ ಅದೆಷ್ಟೋ ಜನರಿರುತ್ತಾರೆ.

ಸರ್ಕಾರಿ ನೌಕರನಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಯೊಬ್ಬ ಲಾಕ್ ಆಗಿದ್ದಾನೆ. ತಮಿಳುನಾಡು ಸ್ಟೇಟ್ ವಿಜಿಲೆನ್ಸ್ ಹಾಗೂ ಭ್ರಷ್ಟಾಚಾರ ಅಧಿಕಾರಿಗಳು ಅಂಕಿತ್ ತಿವಾರಿಯನ್ನು ಬಂಧಿಸಿದ್ದಾರೆ.

ಅಧಿಕಾರಿ ನಿವಾಸದ ಮೇಲೂ ದಾಳಿ

ಬಂಧಿತ ಅಧಿಕಾರಿಯನ್ನು ಡಿಸೆಂಬರ್ 5 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮದುರೈ ಇಡಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಡಿಂಡಿಗುಲ್ ಜಿಲ್ಲೆಯ ವಿಜಿಲನ್ಸ್ ಹಾಗೂ ಭ್ರಷ್ಟಾಚಾರ ನಿಗ್ರಹ ದಾಳಿ ಮಾಡಿ ಬಂಧಿಸಿದ್ದಾರೆ. ಕೊನೆಗೆ ಅಂಕಿತ್ ತಿವಾರಿ ನಿವಾಸದ ಮೇಲೂ ದಾಳಿ ಮಾಡಲಾಗಿದೆ. ತನಿಖೆ ವೇಳೆ ಪ್ರಕರಣದಲ್ಲಿ ಮದುರೈ ಮತ್ತು ಚೆನ್ನೈನ ದೊಡ್ಡ ದೊಡ್ಡ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಅಂಕಿತ್ ತಿವಾರಿ ಹಲವು ಜನರಿಗೆ ಬ್ಲ್ಯಾಕ್​ಮೇಲ್ ಮಾಡಿ ಕೋಟ್ಯಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಲಂಚ ಸ್ವೀಕರಿಸಿದ ಬಳಿಕ ಕೆಲವು ಇ.ಡಿ ಅಧಿಕಾರಿಗಳಿಗೆ ಅದರಲ್ಲಿ ಪಾಲು ನೀಡುತ್ತಿದ್ದ ಎನ್ನಲಾಗಿದೆ. ದಿಂಡಿಗುಲ್​​ನ ಸರ್ಕಾರಿ ನೌಕರನಿಂದ ಲಂಚ ಪಡೆಯಲು ಅಕ್ಟೋಬರ್ 29ರಂದು ಅಕಿತ್ ತಿವಾರಿಗೆ ಕಾಲ್ ಮಾಡಿದ್ದರು. ಕೂಡಲೇ ಇವರ ವಿರುದ್ಧ ಸರ್ಕಾರಿ ನೌಕರ ಭ್ರಷ್ಟಾಚಾರ ಕಾನೂನು ಅಡಿಯಲ್ಲಿ ದೂರು ದಾಖಲಿಸಿದ್ದರು. ಆದರೆ ಕೇಸ್​ ಅಲ್ಲಿಗೆ ಮುಚ್ಚಿ ಹೋಗಿತ್ತು. ಕೊನೆಗೆ ಪ್ರಧಾನ ಮಂತ್ರಿಗಳ ಕಚೇರಿಗೆ ಸರ್ಕಾರಿ ನೌಕರ ಮಾಹಿತಿ ನೀಡಿದ್ದರು ಎನ್ನಲಾಗಿದೆ.

51 ಲಕ್ಷ ರೂಪಾಯಿಗೆ ಡೀಲ್:

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಉದ್ಯೋಗಿ ವಿರುದ್ಧ ಅಂಕಿತ್ ತಿವಾರಿ ಕೇಸ್ ದಾಖಲಿಸಿಕೊಂಡಿದ್ದ. ಹೆಚ್ಚಿನ ತನಿಖೆಗಾಗಿ ಅಕ್ಟೋಬರ್ 30 ರಂದು ಮಧುರೈನಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ಕರೆಸಿಕೊಂಡಿದ್ದ. ಆ ಉದ್ಯೋಗಿ ಕಚೇರಿಗೆ ಬಂದಾಗ ಪ್ರಕರಣವನ್ನು ಅಂತ್ಯಗೊಳಿಸಲು 3 ಕೋಟಿ ರೂಪಾಯಿ ಲಂಚ ಕೇಳಿದ್ದ ಎನ್ನಲಾಗಿದೆ. ಕೊನೆಗೆ 51 ಲಕ್ಷ ರೂಪಾಯಿಗೆ ಡೀಲ್ ನಡೆದಿತ್ತಂತೆ.

ಅಂತೆಯೇ ನವೆಂಬರ್ 1 ರಂದು 20 ಲಕ್ಷ ರೂಪಾಯಿ ಹಿಡಿದುಕೊಂಡು ಇಡಿ ಕಚೇರಿಗೆ ಬಂದು ಹಣವನ್ನು ಕೊಟ್ಟು ಹೋಗಿದ್ದರು. 20 ಲಕ್ಷ ರೂಪಾಯಿ ಹಣ ನೀಡಿ, ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಹೇಳಿದ್ದರು. ಹಣ ನೀಡದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಂಕಿತ್ ಎಚ್ಚರಿಸಿದ್ದ ಎನ್ನಲಾಗಿದೆ. ಕೊನೆಗೆ ಸರ್ಕಾರಿ ನೌಕರ ನವೆಂಬರ್ 30 ರಂದು ಅಂಕಿತ್ ತಿವಾರಿ ವಿರುದ್ಧ ಕೇಸ್ ದಾಖಲಿಸಿದ್ದರು. ಪೂರ್ವ ಯೋಜನೆಯಂತೆ ಡಿಸೆಂಬರ್ 1 ರಂದು ನೌಕರ 20 ಲಕ್ಷ ಹಣವನ್ನು ಹಿಡಿದುಕೊಂಡು ಇಡಿ ಕಚೇರಿಗೆ ಬಂದಿದ್ದರು. ಈ ವೇಳೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಅಂಕಿತ್ ತಿವಾರಿಯನ್ನು ಬಂಧಿಸಿದ್ದಾರೆ.

ಬೇರೆಯವರಿಗೆ ಮಾದರಿ ಆಗಬೇಕಿರುವ ಇವರುಗಳು ಲಂಚದ ಹಣಕ್ಕೆ ಜೊಲ್ಲು ಸುರಿಸುತ್ತಿದ್ದಾರೆ. ಬಹು ದೊಡ್ಡ ಮೊತ್ತದ ಲಂಚಕ್ಕೆ ಮಾಸ್ಟರ್ ಪ್ಲಾನ್ ಹಾಕಿದ್ದ ಅಧಿಕಾರಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *