WPL 2023 : ಇಂದಿನಿಂದ ಮಹಿಳಾ ಐಪಿಎಲ್ ಹಬ್ಬ – ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಡೆಲ್ಲಿ ಮುಖಾಮುಖಿ

WPL 2023 : ಇಂದಿನಿಂದ ಮಹಿಳಾ ಐಪಿಎಲ್ ಹಬ್ಬ – ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಡೆಲ್ಲಿ ಮುಖಾಮುಖಿ

ನ್ಯೂಸ್ ಆ್ಯರೋ‌ : ಮಹಿಳಾ ಕ್ರಿಕೆಟ್ ನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಬಿಸಿಸಿಐ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪುರುಷರಂತೇ ಮಹಿಳೆಯರಿಗೂ ಐಪಿಎಲ್ ಆಯೋಜಿಸಿದ್ದು, ಇಂದಿನಿಂದ ಟೂರ್ನಿಗೆ ಚಾಲನೆ ಸಿಗಲಿದೆ.

ಮುಂಬೈನ ಬ್ರೆಬೋರ್ನ್ ಮೈದಾನ ಮತ್ತು ಡಿ ವೈ ಪಾಟೀಲ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು ಐದು ತಂಡಗಳು ಕಣದಲ್ಲಿವೆ. ಮಹಿಳೆಯರಿಗೆ ಈ ಪಂದ್ಯಗಳಿಗೆ ಉಚಿತ ಪ್ರವೇಶವಿರುವುದು ವಿಶೇಷ. ಹೆಚ್ಚಿನ ಪಂದ್ಯಗಳು ಮಧ್ಯಾಹ್ನ 3.30 ಮತ್ತು ಸಂಜೆ 7.30 ಕ್ಕೆ ಆರಂಭವಾಗಲಿದೆ. ಸ್ಪೋರ್ಟ್ಸ್ 18 ನೆಟ್ ವರ್ಕ್ ಮತ್ತು ಜಿಯೋ ಆಪ್ ನಲ್ಲಿ ನೇರಪ್ರಸಾರವಿದೆ.

ಇಂದು ಅದ್ಧೂರಿಯಾಗಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಬಾಲಿವುಡ್ ಕಲಾವಿದರಿಂದ ಮನರಂಜನಾ ಕಾರ್ಯಕ್ರಮವಿರಲಿದೆ. ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬಾಲಿವುಡ್ ಬೆಡಗಿಯರು ಸೊಂಟ ಬಳುಕಿಸಲಿದ್ದಾರೆ. ಕಿಯಾರ ಅಡ್ವಾನಿ ಮತ್ತು ಕೃತಿ ಸನನ್ ನೃತ್ಯದ ಮೂಲಕ, ವೀಕ್ಷಕರನ್ನ ರಂಜಿಸಲಿದ್ದಾರೆ. ಇನ್ನು ಪಂಜಾಬಿ ಖ್ಯಾತ ಱಪರ್ ಎ.ಪಿ ದಿಲೋನ್ ಸಾಂಗ್ ಹಾಡಿ ಕಾರ್ಯಕ್ರಮಕ್ಕೆ ರಂಗು ತುಂಬಲಿದ್ದಾರೆ.

ಅದಾದ ಬಳಿಕ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿದೆ. ಐದು ತಂಡಗಳ ಸಂಗ್ರಾಮ, ಒಟ್ಟು 23 ದಿನಗಳ ಕಾಲ ನಡೆಯಲಿದೆ. ಐದು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಮಾರ್ಚ್ 26 ರಂದು ಫೈನಲ್ ಪಂದ್ಯ ನಡೆಯಲಿದೆ. ನಾಲ್ಕು ವಾರಗಳ ಈ ಮಹಾಬ್ಯಾಟಲ್, ಮಹಾರಾಷ್ಟ್ರದ ನಾಲ್ಕು ನಗರಗಳಲ್ಲಿ ಮಾತ್ರ ನಡೆಯಲಿದೆ. 5 ತಂಡಗಳು ಭರ್ಜರಿ ಸಮರಾಭ್ಯಾಸ ನಡೆಸಿದ್ದು, ಕ್ರಿಕೆಟ್ ಪ್ರಿಯರು ಫುಲ್ ಮೀಲ್ಸ್ ಸವಿಯಲಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿದ್ದು, ಇದನ್ನ ಮಿಥಾಲಿ ರಾಜ್ ವರ್ಸಸ್ ಜೂಲನ್ ಗೋಸ್ವಾಮಿ ಬ್ಯಾಟಲ್ ಎಂದೇ ಬಿಂಬಿತವಾಗಿದೆ. ಯಾಕಂದ್ರೆ ಮಿಥಾಲಿ ಗುಜರಾತ್ ಜೈಂಟ್ಸ್ ಮೆಂಟರ್ ಹಾಗೂ ಗೋಸ್ವಾಮಿ ಮುಂಬೈ ತಂಡಕ್ಕೆ ಮೆಂಟರ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಹೀಗಾಗಿ ಉದ್ಘಾಟನಾ ಪಂದ್ಯವೇ, ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ.

ಮಹಿಳೆಯರಿಗೆ ಫ್ರೀ ಪಾಸ್..!!

ಟೂರ್ನಿ ಶುರುವಿಗೂ ಮಹಿಳಾ ಮಣಿಗಳಿಗೆ ಬಂಪರ್ ಜಾಕ್ಪಾಟ್ ಹೊಡೆದಿದೆ. ಮಹಿಳೆಯರು ಉಚಿತವಾಗಿ ಪಂದ್ಯ ವೀಕ್ಷಿಸಬಹುದೆಂದು ಬಿಸಿಸಿಐ ಘೋಷಿಸಿದೆ. ಆದ್ರೆ ಪುರುಷರಿಗೆ 100 ರಿಂದ 400 ರೂಪಾಯಿವರೆಗೆ ಟಿಕೆಟ್ ದರ ಫಿಕ್ಸ್ ಮಾಡಿದೆ. ಆನ್ಲೈನ್ನಲ್ಲಿ ಟಿಕೆಟ್ ಪಡೆಯಬಹುದು. ಈಗಾಗ್ಲೇ ಉದ್ಘಾಟನಾ ಪಂದ್ಯದ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *