CWC2023 : ಎಂಟು ಕೆಜಿ ಮಟನ್ ತಿಂತೀರಾ? ಫಿಟ್ನೆಸ್ ಇಲ್ದೇ ಮೂರು ಮ್ಯಾಚ್ ಸೋತಿದ್ದೀರಾ..! – ಪಾಕ್ ಆಟಗಾರರ ವಿರುದ್ಧ ಕಿಡಿಕಾರಿದ ವಾಸೀಂ ಅಕ್ರಮ್

CWC2023 : ಎಂಟು ಕೆಜಿ ಮಟನ್ ತಿಂತೀರಾ? ಫಿಟ್ನೆಸ್ ಇಲ್ದೇ ಮೂರು ಮ್ಯಾಚ್ ಸೋತಿದ್ದೀರಾ..! – ಪಾಕ್ ಆಟಗಾರರ ವಿರುದ್ಧ ಕಿಡಿಕಾರಿದ ವಾಸೀಂ ಅಕ್ರಮ್

ನ್ಯೂಸ್ ಆ್ಯರೋ : ಈ ಬಾರಿಯ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ಸುಧಾರಿಸಿಕೊಳ್ಳಲು ಸಾಧ್ಯವಾಗೇ ಇಲ್ಲ, ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲಿನ ನಂತರ, ಈಗ ಅಫ್ಘಾನಿಸ್ತಾನದ ವಿರುದ್ಧ ಕೂಡ ಸೋತು ಭಾರಿ ಮುಖಭಂಗ ಅನುಭವಿಸಿದೆ. ಇದೇ ಮೊದಲ ಬಾರಿ ಅಫ್ಘಾನಿಸ್ತಾನ ಪಾಕಿಸ್ತಾನದ ವಿರುದ್ಧ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದೆ. ಇದರ ನಡುವೆ ಪಾಕಿಸ್ತಾನದ ಮಾಜಿ ವೇಗಿ, ನಾಯಕರಾಗಿದ್ದ ವಾಸೀಂ ಅಕ್ರಮ್ ಆಟಗಾರರು 8 ಕೆಜಿ ಮಟನ್ ತಿನ್ನುವುದು ಕಡಿಮೆ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಾಕ್‌ನ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನಗೊಂಡಿದ್ದು ಆಟಗಾರರಿಗೆ ಎಗ್ಗಾಮಗ್ಗಾ ಜಾಡಿಸಿದ್ದಾರೆ. ಇದು ಕೆಟ್ಟ ಸೋಲು, ಪಾಕಿಸ್ತಾನಕ್ಕೆ ಮುಜುಗರ ಎಂದು ಹೇಳಿದ್ದಾರೆ. ಪಾಕಿಸ್ತಾನದ ಕ್ರಿಕೆಟ್​ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ವಾಸಿಂ ಅಕ್ರಮ್, ‘ಅಫ್ಘಾನಿಸ್ತಾನ ವಿರುದ್ಧ ಇದು ಕೆಟ್ಟ ಸೋಲು, ನಿಜಕ್ಕೂ ಇದು ಮುಜುಗರ ತರುವಂತದ್ದು. ಕೇವಲ ಎರಡು ವಿಕೆಟ್ ಕಳೆದುಕೊಂಡು 280 ರನ್ ಗುರಿಯನ್ನು ತಲುಪುವುದು ಸಾಮಾನ್ಯ ವಿಷಯವಲ್ಲ. ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿಂದರೆ. ಫಿಟ್​ನೆಸ್​ ಹೇಗೆ ಸಾಧ್ಯ’ ಎಂದು ಬಾಬರ್​ ಪಡೆಯ ವಿರುದ್ಧ ಕಿಡಿಕಾರಿದ್ದಾರೆ.

ವೃತ್ತಿಪರರಾಗಿ ನೀವು ಪಡೆಯುವ ಹಣಕ್ಕೆ ತಕ್ಕ ಪ್ರದರ್ಶನ ನೀಡುವುದು ಕೂಡ ಪ್ರಮುಖವಾಗಿದೆ. ದೇಶಕ್ಕಾಗಿ ಆಡುವಾಗ ನಿಮ್ಮಲ್ಲಿ ಒಂದು ನಿರ್ದಿಷ್ಟ ಮಾನದಂಡ ಇರಬೇಕು. ಮಿಸ್ಬಾ ಉಲ್​ ಹಕ್​ ಅವರು ಕೋಚ್ ಆಗಿದ್ದ ವೇಳೆ ಫಿಟ್​ನೆಸ್​ ಮಾನದಂಡವನ್ನು ಜಾರಿಗೆ ತಂದಿದ್ದರು. ಆದರೆ ಅವರ ವಿರುದ್ಧವೇ ನೀವು ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿದ್ದೀರಿ. ಅವರ ಕಾರ್ಯತಂತ್ರಗಳು ಕೆಲಸ ಮಾಡುತ್ತಿದ್ದವು. ಫೀಲ್ಡಿಂಗ್ ಎನ್ನುವುದು ಫಿಟ್ನೆಸ್‌ಗೆ ಸಂಬಂಧಿಸಿದ್ದು. ನಮ್ಮಲ್ಲಿ ಆ ಕೊರತೆಯಿದೆ’ ಎಂದು ಹೇಳಿದರು.

ದಿನಕ್ಕೆ 8 ಕೆಜಿ ಮಟನ್​

ಪಾಕಿಸ್ತಾನದ ಕ್ರಿಕೆಟ್​ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ವಾಸಿಂ ಅಕ್ರಮ್, ‘ಅಫ್ಘಾನಿಸ್ತಾನ ವಿರುದ್ಧ ಇದು ಕೆಟ್ಟ ಸೋಲು, ನಿಜಕ್ಕೂ ಇದು ಮುಜುಗರ ತರುವಂತದ್ದು. ಕೇವಲ ಎರಡು ವಿಕೆಟ್ ಕಳೆದುಕೊಂಡು 280 ರನ್ ಗುರಿಯನ್ನು ತಲುಪುವುದು ಸಾಮಾನ್ಯ ವಿಷಯವಲ್ಲ. ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿಂದರೆ. ಫಿಟ್​ನೆಸ್​ ಹೇಗೆ ಸಾಧ್ಯ’ ಎಂದು ಬಾಬರ್​ ಪಡೆಯ ವಿರುದ್ಧ ಕಿಡಿಕಾರಿದ್ದಾರೆ.

‘ವೃತ್ತಿಪರರಾಗಿ ನೀವು ಪಡೆಯುವ ಹಣಕ್ಕೆ ತಕ್ಕ ಪ್ರದರ್ಶನ ನೀಡುವುದು ಕೂಡ ಪ್ರಮುಖವಾಗಿದೆ. ದೇಶಕ್ಕಾಗಿ ಆಡುವಾಗ ನಿಮ್ಮಲ್ಲಿ ಒಂದು ನಿರ್ದಿಷ್ಟ ಮಾನದಂಡ ಇರಬೇಕು. ಮಿಸ್ಬಾ ಉಲ್​ ಹಕ್​ ಅವರು ಕೋಚ್ ಆಗಿದ್ದ ವೇಳೆ ಫಿಟ್​ನೆಸ್​ ಮಾನದಂಡವನ್ನು ಜಾರಿಗೆ ತಂದಿದ್ದರು. ಆದರೆ ಅವರ ವಿರುದ್ಧವೇ ನೀವು ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿದ್ದೀರಿ. ಅವರ ಕಾರ್ಯತಂತ್ರಗಳು ಕೆಲಸ ಮಾಡುತ್ತಿದ್ದವು. ಫೀಲ್ಡಿಂಗ್ ಎನ್ನುವುದು ಫಿಟ್ನೆಸ್‌ಗೆ ಸಂಬಂಧಿಸಿದ್ದು. ನಮ್ಮಲ್ಲಿ ಆ ಕೊರತೆಯಿದೆ’ ಎಂದು ಹೇಳಿದರು.

‘ಹಿಂದಿನ ಕೋಚಿಂಗ್ ಸ್ಟಾಫ್‌ ಅಡಿಯಲ್ಲಿ ಪಾಕಿಸ್ತಾನ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿತ್ತು. ಕೆಜಿಗಟ್ಟಲೆ ಮಟನ್​ ತಿನ್ನುವುದನ್ನು ಬಿಟ್ಟು ದಯವಿಟ್ಟು ಮೊದಲು ದೇಶದ ಬಗ್ಗೆ ಯೋಜಿಸಿ’ ಎಂದು ವಾಸಿಂ ಅಕ್ರಮ್ ಕೆಂಡಾಮಂಡಲರಾಗಿದ್ದಾರೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *