
ರಾಕಿಂಗ್ ಸ್ಟಾರ್ ಮನೆಯಲ್ಲಿ ಅದ್ಧೂರಿ ಆಯುಧ ಪೂಜೆ – ಅಪ್ಪನ ವಾಹನಕ್ಕೆ ಪೂಜೆ ನೆರವೇರಿಸಿದ ಐರಾ, ಯಥರ್ವ್
- ಮನರಂಜನೆ
- October 24, 2023
- No Comment
- 79
ನ್ಯೂಸ್ ಆ್ಯರೋ : ನಿನ್ನೆ ನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮದಿಂದ ಆಚರಿಸಲಾಗಿದೆ. ಇನ್ನೂ ಯಾವುದೇ ಹಬ್ಬವಾದರು ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸುತ್ತಾರೆ. ಮನೆಯಲ್ಲಿರುವ ಕಾರು ಹಾಗೂ ವಾಹನಗಳಿಗೆ ಯಶ್ ಮಕ್ಕಳು ಪೂಜೆಯನ್ನು ಸಲ್ಲಿಸಿದರು.
ಆಯುಧ ಪೂಜೆಯಲ್ಲಿ ಯಶ್ ಮಕ್ಕಳು ಕಾರಿಗೆ ಪೂಜೆ ಮಾಡ್ತಿರುವ ಫೋಟೋವನ್ನು ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಸ್‌ಲ್ಲಿ ರಾಧಿಕಾ ಪಂಡಿತ್ ಮನೆಯಲ್ಲಿ ಆಯುಧ ಪೂಜೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋಗಳಲ್ಲಿ ಯಶ್ ಮಕ್ಕಳಾದ ಐರಾ ಹಾಗೂ ಯಥರ್ವ್ ಕಾರಿಗೆ ಪೂಜೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಮತ್ತೊಂದು ಫೋಟೋದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಾದ ಮಕ್ಕಳು ತಮ್ಮ ಸೈಕಲ್ಗೂ ಪೂಜೆ ಸಲ್ಲಿಸಿ ಅದೇ ಸೈಕಲ್ ಮೇಲೆ ಕುಳಿತು ಫೋಟೋಗೆ ಪೋಸ್ ಕೊಟ್ಟಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಅವರು ಆಗಾಗ ಫ್ಯಾಮಿಲಿ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಿರುತ್ತಾರೆ.
ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿರುವ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟೀವ್ ಆಗಿದ್ದಾರೆ.
ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ನಟಿ ರಾಧಿಕಾ ಪಂಡಿತ್ ಅವರು ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಯಶ್ ಜತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
2012 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನ ಡ್ರಾಮಾ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ರಾಧಿಕಾ ಪಂಡಿತ್ ನಟಿಸಿದ್ರು. ಬಳಿಕ ಬಂದ ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ ಸಿನಿಮಾ ಯಶ್ ಹಾಗೂ ರಾಧಿಕಾಗೆ ಸೂಪರ್ ಸಕ್ಸಸ್ ತಂದುಕೊಟ್ಟಿತ್ತು.
ಯಶ್ ಹಾಗೂ ರಾಧಿಕಾ ಪ್ರೀತಿ ಮಾಡಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.