ಮಹಿಳಾ ಐಪಿಎಲ್ ಆರಂಭಕ್ಕೂ ಮುನ್ನವೆ ಭರ್ಜರಿ ಲಾಭ; ಪ್ರಸಾರ ಹಕ್ಕು ಬರೊಬ್ಬರಿ 951 ಕೋಟಿಗೆ ಬಿಕರಿ

ಮಹಿಳಾ ಐಪಿಎಲ್ ಆರಂಭಕ್ಕೂ ಮುನ್ನವೆ ಭರ್ಜರಿ ಲಾಭ; ಪ್ರಸಾರ ಹಕ್ಕು ಬರೊಬ್ಬರಿ 951 ಕೋಟಿಗೆ ಬಿಕರಿ

ನ್ಯೂಸ್ ಆ್ಯರೋ : ಕ್ರೀಕೆಟ್ ಲೋಕದಲ್ಲಿ ಹೊಸಾ ಟ್ರೆಂಡ್ ಹುಟ್ಟು ಹಾಕಿದ, ಸಾಕಷ್ಟು ತೆರೆಮರೆಯ ಪ್ರತಿಭೆಗಳಿಗೆ ವೇದಿಕೆಯಾದ ಐಪಿಎಲ್ ಸದಾ ಹಣದ ವಿಚಾರದಲ್ಲಿ ಮುನ್ನಲೆಗೆ ಬರುತ್ತಲೆ ಇರುತ್ತದೆ. ಐಪಿಎಲ್ ಮೂಲಕ ಭಾರತೀಯ ಕ್ರಿಕೇಟ್ ಮಂಡಳಿಗೆ ಹಣದ ಹೊಳೆಯೆ ಹರಿದು ಬರುತ್ತಿದೆ. ಸದ್ಯ, ಬಿಸಿಸಿಐ ಮಹಿಳಾ ಐಪಿಎಲ್ ನಡೆಸಲು ತೀರ್ಮಾನಿಸಲಾಗಿದ್ದು ಪ್ರಸಾರದ ಹಕ್ಕನ್ನು ವಯಾಕಾಮ್ ಬರೋಬ್ಬರಿ 951 ಕೋಟಿ ರೂ.ಗಳಿಗೆ ತನ್ನದಾಗಿಸಿಕೊಂಡಿದೆ.

ವಯಾಕಾಮ್ 18 ಸಂಸ್ಥೆಯು 2023 ರಿಂದ 2027ರ ವರೆಗಿನ 5 ವರ್ಷಗಳ ಪ್ರಸಾರದ ಹಕ್ಕನ್ನು ಬರೋಬ್ಬರಿ 951 ಕೋಟಿ ರೂ.ಗಳಿಗೆ ಪಡೆದುಕೊಂಡಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸಾರ ಹಕ್ಕಿನ ನಿಯಮದಂತೆ ಪ್ರತಿ ಪಂದ್ಯಕ್ಕೆ ವಯಾಕಾಮ್ 7.09 ಕೋಟಿ ರೂಪಾಯಿಗಳಂತೆ ಒಟ್ಟು 134 ಪಂದ್ಯಗಳಿಗೆ 951 ಕೋಟಿ ರೂಪಾಯಿಯನ್ನು ಬಿಸಿಸಿಐಗೆ ನೀಡಬೇಕಾಗಿರುತ್ತದೆ‌.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿ, ‘ಮಹಿಳಾ ಐಪಿಎಲ್ ಗಾಗಿ ನಡೆದ ಮಾದ್ಯಮ ಹಕ್ಕುಗಳ ಇಂದಿನ ಹರಾಜು ಪ್ರಕ್ರಿಯೆ ಮತ್ತೊಂದು ಮೈಲಿಗಲ್ಲು ತಲುಪಿದೆ. ಈ ಮೂಲಕ ಮಹಿಳಾ ಕ್ರಿಕೆಟ್‌ನ ಸಬಲೀಕರಣಕ್ಕಾಗಿ ಒಂದು ದೊಡ್ಡ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ. ಇದು ಎಲ್ಲಾ ವಯಸ್ಸಿನ ವನಿತೆಯ ಭಾಗವಹಿಸುವಿಕೆಯನ್ನು ಖಚಿತಪಡಿಸುದರೊಂದಿಗೆ ಹೊಸ ಪ್ರತಿಭೆಗಳಿಗೆ ವೇದಿಕೆಯಾಗಲಿದೆ’ ಎಂದರು.

ಮಹಿಳಾ ಐಪಿಎಲ್‌ ಪ್ರಸಾರದ ಹಕ್ಕುಗಳ ಬಿಡ್ಡಿಂಗ್‌ ಮೊತ್ತವನ್ನು ಪುರುಷರ ಐಪಿಎಲ್‌ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಐಪಿಎಲ್‌ನ ಐದು ವರ್ಷಗಳ ಮಾಧ್ಯಮ ಹಕ್ಕುಗಳನ್ನು ಕಳೆದ ವರ್ಷ ಬೃಹತ್ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು. ಆದರೆ, ಭಾರತದ ಮಹಿಳಾ ಕ್ರಿಕೆಟಿಗರು ಇನ್ನೂ ವಿಶ್ವ ಮಟ್ಟದಲ್ಲಿ ಪುರುಷರಂತೆ ಗುರುತಿಸಿಕೊಂಡಿಲ್ಲ. ಅಲ್ಲದೆ ಅವರಲ್ಲಿ ಬೆರಳೆಣಿಕೆಯಷ್ಟು ಆಟಗಾರ್ತಿಯರು ಮಾತ್ರ ಮನೆಮಾತಾಗಿದ್ದಾರೆ. ಹೀಗಿದ್ದರೂ ಮೊದಲ ಪ್ರಯತ್ನದಲ್ಲೇ ಸಾವಿರ ಕೋಟಿಯಷ್ಟು ಸಮೀಪಕ್ಕೆ ಬಿಡ್ಡಿಂಗ್‌ ಬಂದಿರುವುದು, ಕ್ರೀಡಾಕೂಟದ ಆರಂಭಕ್ಕೂ ಮೊದಲು ಸಿಕ್ಕ ಯಶಸ್ಸಾಗಿದೆ’ ಎಂದು ಅವರು ಹರ್ಷ ವ್ಯಕ್ತ ಪಡಿಸಿದರು.

ಮಹಿಳಾ ಐಪಿಎಲ್ ಪ್ರಸಾರ ಹಕ್ಕಿನ ಹರಾಜಿನ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಲಿಸಾ ಸ್ಥಾಲೇಕರ್ ‘ ಭಾರತದ ಯುವತಿಯೊಬ್ಬಳಿಗೆ, ಭಾರತದಲ್ಲಿನ ಮಹಿಳಾ ಕ್ರಿಕೆಟ್‌ಗೆ, ಮಹಿಳೆಯರ ಆಟಕ್ಕೆ, ಸಾಮಾನ್ಯವಾಗಿ ಕ್ರೀಡೆಗೆ ಸಿಗುತ್ತಿರುವ ಗೌರವವನ್ನು ಕಂಡು ಅತೀವ ಸಂತಸಗೊಂಡಿದ್ದೇನೆ. ಮಹಿಳೆಯರ ಉಬ್ನತಿಗೆ ಇಂತಹ ಪ್ರಯತ್ನಗಳು ಯಾವಾಗಲೂ ಹೆದ್ದಾರಿಗಳಾಗಲಿವೆ’ ಎಂದಿದ್ದಾರೆ.

ಇನ್ನುಳಿದಂತೆ 2023ರ ಮಾರ್ಚ್ ಮೊದಲ ವಾರದಿಂದ ಈ ಮಹಿಳಾ ಐಪಿಎಲ್ ಆರಂಭಗೊಳ್ಳಿದ್ದು, ಒಟ್ಟಯ ಐದು ತಂಡಗಳು ಪಾಲ್ಗೊಳ್ಳಲಿವೆ. ಈ ಪಂದ್ಯಾಟಗಳೆಲ್ಲವು ದೆಹಲಿಯಲ್ಲಿ ನಡೆಯಲಿದೆ. ಭಾರತೀಯ ವನಿತಾ ಕ್ರಿಕೇಟ್ ತಂಡದ ನಿವೃತ್ತಿ ಆಟಗಾರ್ತಿಯರಾದ ಮಿಥಿಲಾ ರಾಜ್ ಹಾಗೂ ಜೂಲನ್ ಗೋ ಸ್ವಾಮಿ ಆಡಲಿದ್ದಾರೆ. ಈಗಾಗಲೇ ಫ್ರಾಂ

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *