ಸುಲಭವಾಗಿ ಕೈಗೆಟುಕಲಿದೆ ಗುಣಮಟ್ಟದ ಸ್ಮಾರ್ಟ್ ವಾಚ್; ಅಮೇಜಾನ್ ರಿಪಬ್ಲಿಕ್ ಡೇ ಭರ್ಜರಿ ಆಫರ್!

ಸುಲಭವಾಗಿ ಕೈಗೆಟುಕಲಿದೆ ಗುಣಮಟ್ಟದ ಸ್ಮಾರ್ಟ್ ವಾಚ್; ಅಮೇಜಾನ್ ರಿಪಬ್ಲಿಕ್ ಡೇ ಭರ್ಜರಿ ಆಫರ್!

ನ್ಯೂಸ್ ಆ್ಯರೋ : ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮೇಲೆ ಯಾರಿಗೆ ಒಲವಿಲ್ಲ ಹೇಳಿ. ಪ್ರತಿಯೊಬ್ಬರು ಕೂಡ ಇಂದನ ಕಾಲಮಾನದಲ್ಲಿ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಗಳನ್ನ ಇಷ್ಟ ಪಡುವವರೆ ಆದರೆ ಕೆಲವೊಮ್ಮೆ ಇವುಗಳಿಗಿರುವ ಅಧಿಕ ಬೆಲೆಯಿಂದಾಗಿ ಕೈಗೆಟುಕುವುದು ತುಸು ಕಷ್ಟ. ಆದರೆ ಸ್ವಲ್ಪ ದಿನಗಳ ಕಾಲ ಇವುಗಳನ್ನ ಕೊಳ್ಳಲು ಚಿಂತಿಸುವ ಅಗತ್ಯವಿಲ್ಲ. ಯಾಕಂದರೆ ರಿಪಬ್ಲಿಕ್ ಡೇ ಪ್ರಯುಕ್ತ ಜಗತ್ತಿನ ಬಹು‌ ಮುಖ್ಯ. ಆನ್ಲೈನ್ ಸರಕು ಡೆಲಿವರಿ ವೇದಿಕೆಯಾದ ಅಮೇಜಾನ್ ಸ್ಮಾರ್ಟ್ ವಾಚ್ ಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಅವುಗಳ ಮಾಹಿತಿ ಕೆಳಗಿನಂತಿದೆ ನೋಡಿ.

ಅಮೇಜಾನ್ ಈ ಆಫರನ್ನು ಜನವರಿ 15 ರಿಂದ ಜನವರಿ 20ರ ವರೆಗೆ ಮುಂದುವರೆಸಲಿದ್ದು, 5 ಐದು ದಿನಗಳ ಭರ್ಜರಿ ಆಫರ್ ನೀಡುತ್ತಿದೆ. 2023ರ ರಿಪಬ್ಲಿಕ್ ಡೇ ಸೇಲ್ ನಲ್ಲಿ ಟಾಪ್ ಬ್ರಾಂಡ್ ಸ್ಮಾರ್ಟ್ ವಾಚ್ ಗಳನ್ನು ರಿಯಾಯಿತಿ ದರದಲ್ಲಿ ದೊರೆಯಲಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಬ್ರಾಂಡೆಡ್ ಸ್ಮಾರ್ಟ್ ವಾಚ್ಗಳು ನಿಮ್ಮ ಕೈ ಸೇರಲಿವೆ. ಇನ್ನು ನೀವು EMI ಹಾಗೂ SBI ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿದರೆ 10% ತ್ವರಿತ ರಿಯಾಯಿತಿ ದೊರೆಯಲಿದೆ‌.

ಸ್ಮಾರ್ಟ್ ವಾಚ್ ಬೆಲೆಗಳು‌ ಹೀಗಿವೆ

iPhone ಕಂಪನಿಯ 36,900 ರೂ. ಬೆಲೆಯ ಸ್ಮಾರ್ಟ್ ವಾಚ್ ಗಳ ಇದೀಗೆ ಕೇವಲ 26,400 ರೂ.ಗಳಿಗೆ ಲಭ್ಯವಿದೆ.‌ಈ ಆ್ಯಪಲ್ ವಾಚ್ ನಲ್ಲಿ ನಿಮ್ಮ ದೈನಂದಿನ ಚಟುವಟಿಕೆಗಳ ಮೇಲ್ವಿಚಾರಣೆ ಮಾಡಬಹುದಾಗಿದೆ‌.ಇದರೊಂದಿಗೆ ಜಾಗಿಂಗ್, ಯೋಗ, ಈಜು ಮತ್ತು ನೃತ್ಯದಂತಹ ಕ್ಲಾಸಿಕ್ಗಳೊಂದಿಗೆ ತೈಚಿ ಮತ್ತು ಪೈಲೇಟ್ಸ್ನಂತಹ ಆಧುನಿಕ ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಬಹುದು. ಹೈ ಮತ್ತು ಲೊ ಹಾರ್ಟ್ ರೇಟ್ ಅನ್ನು ನೀವು ಈ ಸ್ಮಾರ್ಟ್ ವಾಚ್ ಮೂಲಕ ತಿಳಿದಿಕೊಳ್ಳಬಹುದು. ನಿಮ್ಮ ಆರೋಗ್ಯದಲ್ಲಿ ಗಂಭೀರವಾದ ಕುಸಿತವನ್ನು ಕಂಡರೆ ಆಪಲ್ ವಾಚ್ ಅದನ್ನು ಗುರುತಿಸುತ್ತದೆ ಮತ್ತು ತಕ್ಷಣವೇ ಸಹಾಯಕ್ಕಾಗಿ ಕರೆ ಮಾಡುತ್ತದೆ. ಅಗತ್ಯವಿದ್ದಾಗ ನೀವು ತುರ್ತು SOS ಮೂಲಕ ಸಹಾಯಕ್ಕಾಗಿ ಕರೆ ಅನ್ನು ಸಹ ಮಾಡಬಹುದು.

ಇನ್ನು, 5,999 ರೂ. ಬೆಲೆಯ Noise Pluse 2 Max ಸ್ನಾರ್ಟ್ ವಾಚ್ ಸದ್ಯ ಅಮೆಜಾನ್‌ ನಲ್ಲಿ 1,799 ರೂ. ಗಳಿಗೆ ಲಭ್ಯವಿದೆ‌. ಈ ಚಾಚ್ನ ಅತ್ಯಾಕರ್ಷಕ ಗುಣಮಟ್ಟಗಳೆಂದರೆ, ಈ ವಾಚ್ ಬೃಹತ್ 1.85″ ಡಿಸ್ಪ್ಲೇ. 1.85 TFT LCD ಜೊತೆಗೆ 550 nits ಹೊಳಪು ಮತ್ತು ಹೆಚ್ಚಿನ ಸ್ಕ್ರೀನ್-ಟು-ಬಾಡಿ ರೇಶಿಯೋ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ದೈನಂದಿನ ಡೇಟಾವನ್ನು ಸ್ಪಷ್ಟವಾಗಿ ನೋಡಲು ನಿಮಗೆ ಸಹಾಯ‌ ಮಾಡುತ್ತದೆ.. Noise Health Suite ನಲ್ಲಿ ಸ್ಪೋರ್ಟ್ಸ್ ಮೊಡ್ಸ್ನ ಸಹಾಯದಿಂದ ನಿಮ್ಮ ಫಿಟ್ನೆಸ್ ಪ್ರಯಾಣವನ್ನು ಪ್ರಾರಂಭಿಸುವ ಅವಕಾಶವಿರುತ್ತದೆ.

ಸಮಾನ್ಯವಾಗಿ 6,999 ರೂ.ಬೆಲೆಯಿರುವ One Plus Nord watch ಇದೀಗ ಅಮೆಜಾನ್ ನಲ್ಲಿ 4,499 ರೂ. ಗಳಿಗೆ ಲಭ್ಯವಿದೆ. ಇದು 1.78 AMOLED ಡಿಸ್ಪ್ಲೇ, 60 Hz ರಿಫ್ರೆಶ್ ರೇಟ್, 105 ಫಿಟ್ನೆಸ್ ಮೋಡ್ಗಳು, 10 ದಿನಗಳ ಬ್ಯಾಟರಿ ಬಾಳಿಕೆ, SPO2, ಹೃದಯ ಬಡಿತ, ಒತ್ತಡ ಮಾನಿಟರ್, ಮಹಿಳೆಯರ ಆರೋಗ್ಯ ಟ್ರ್ಯಾಕರ್ ಇವುಗಳು OnePlus ನಾರ್ಡ್ ವಾಚ್ನ ಫೀಚರ್ಸ ಆಗಿದೆ.1.78″ AMOLED ಡಿಸ್ಪ್ಲೇ ಗರಿಷ್ಟ 500 nits ಹೊಳಪು ಮತ್ತು 326 PPI ನಲ್ಲಿ 368×448 ರೆಸಲ್ಯೂಶನ್. ನೇರ ಬಿಸಿಲಿನಲ್ಲಿಯೂ ಸಹ ಸ್ಕ್ರೀನ್ ನಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಕಾಣಬಹುದು. ಉತ್ತಮ ಬ್ಯಾಟರಿ ಬಾಳಿಕೆ ಮತ್ತು ಮ್ಯೂಸಿಕ್ ಮತ್ತು ಕ್ಯಾಮರಾ ಕಂಟ್ರೋಲ್, 24 ಗಂಟೆಗಳ ಹೃದಯ ಬಡಿತ, ಸ್ಲೀಪ್ ಟ್ರ್ಯಾಕಿಂಗ್, ಆಲ್ ಡೇ ಸ್ಟ್ರೆಸ್ ಟ್ರ್ಯಾಕಿಂಗ್, ಮತ್ತು ಇತರ ಹಲವು ಸ್ಮಾರ್ಟ್ ಆರೋಗ್ಯ ಮೇಲ್ವಿಚಾರಣಾ ತಂತ್ರಜ್ಞಾನಗಳು ಒಳಗೊಂಡಿದೆ.

‘Fire-Boltt Visionary’ ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 16,999 ಆದರೆ ಇದೀಗ ಈ ವಾಚ್ 3,499 ರೂ.ಗಳಿಗೆ ಲಭ್ಯವಿರಲಿದೆ. AMOLED ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್ ಜೊತೆಗೆ 368*448 ಪಿಕ್ಸೆಲ್ ರೆಸಲ್ಯೂಶನ್ 100+ ಸ್ಪೋರ್ಟ್ಸ್ ಮೋಡ್, TWS ಸಂಪರ್ಕ, ವಾಯ್ಸ್ ಸಹಾಯ, SPO2 ಮತ್ತು ಹೃದಯ ಬಡಿತ ಮಾನಿಟರಿಂಗ್ ಮಾಡುತ್ತದೆ. ಫೈರ್-ಬೋಲ್ಟ್ ವಿಷನರಿ ಸ್ಮಾರ್ಟ್ವಾಚ್ ಆರೋಗ್ಯ ಟ್ರ್ಯಾಕಿಂಗ್ ಫೀಚರ್ ಗಳ ಸಂಪೂರ್ಣ ಪ್ಯಾಕೇಜ್ನೊಂದಿಗೆ ಬರುತ್ತದೆ. ಉಸಿರಾಟದ ವ್ಯಾಯಾಮ ಮತ್ತು ಮಹಿಳೆಯರ ಆರೋಗ್ಯದೊಂದಿಗೆ ಸ್ಮಾರ್ಟ್ ವಾಚ್ ಪ್ರತಿ ಬಳಕೆ ಮತ್ತು ಉದ್ದೇಶಕ್ಕಾಗಿ ಸೂಕ್ತವಾಗಿದೆ.

‘Noise ColorFit Ultra 2’ ಇದರ ಸಾಮಾನ್ಯ ಬೆಲೆ 8,999 ರೂ. ಆದರೆ ಅಮೆಜಾನ್ ಆಫರ್ ಮೂಲಕ ಗ್ರಾಹಕರು ಇದನ್ನು 3,499 ರೂ.ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. OneSize Noise ColorFit Ultra 2 ಜೊತೆಗೆ 1.78 , AMOLED ಡಿಸ್ಪ್ಲೇ, ಬೆಸ್ಟ್-ಇನ್-ಕ್ಲಾಸ್ ರೆಸಲ್ಯೂಷನ್, ಪ್ರೀಮಿಯಂ ಸ್ಟೇನ್ಲೆಸ್ ಸ್ಟೀಲ್ ಬಾಡಿ, 60+ ಸ್ಪೋರ್ಟ್ಸ್ ಮೋಡ್ಗಳು ಮತ್ತು 100+ ವಾಚ್ ಫೇಸ್ಗಳನ್ನು ಒಳಗೊಂಡಿದ್ದು 22 mm ಮತ್ತು 368*448 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿರುವ ಈ ಸಿಲಿಕೋನ್ ಸ್ಟ್ರಾಪ್ನೊಂದಿಗೆ ಅತ್ಯುತ್ತಮ-ಇನ್-ಕ್ಲಾಸ್ ರೆಸಲ್ಯೂಶನ್ನೊಂದಿಗೆ ಕೂಡಿದೆ. ನಿಮ್ಮ ಒಟ್ಟಾರೆ ಕ್ಷೇಮವನ್ನು ಟ್ರ್ಯಾಕ್ ಮಾಡಿ ಮತ್ತು ಹೃದಯದ ಆರೋಗ್ಯ, ಬ್ಲಡ್ ಆಕ್ಸಿಜನ್ ಮಟ್ಟ ಮತ್ತು ಸ್ಲೀಪ್ ಸೈಕ್ಲಸ್ ನ ವಿವರಗಳನ್ನು ನೀಡುವ ಫೀಚರ್ ಗಳನ್ನು ಒಳಗೊಂಡಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *