RCB Circus to make a bold move at the start - all these players are guaranteed to gate pass

ಆರಂಭದಲ್ಲೇ ದಿಟ್ಟ ಹೆಜ್ಜೆ ಇಡಲು RCB ಸರ್ಕಸ್ – ಈ ಎಲ್ಲಾ ಆಟಗಾರರಿಗೆ ಗೇಟ್ ಪಾಸ್ ಪಕ್ಕಾ ಅಂತೆ…!!

ನ್ಯೂಸ್ ಆ್ಯರೋ : ಈಗಾಗಲೇ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡ ಕಾಂಗರೂ ಪಡೆಯ ಮುಂದೆ ಸೋಲುಂಡಿದೆ. ಇಂಡಿಯಾ ಟೀಮ್ ಕಪ್ ಹಿಡಿಯೋದನ್ನು ನೋಡಿ ಸಂಭ್ರಮಿಸಲು ಸಜ್ಜಾಗಿದ್ದ ಅಭಿಮಾನಿಗಳಿಗೆ ಮಾತ್ರ ನಿರಾಶೆಯಾಗಿತ್ತು.‌

ಇದೀಗ ಐಪಿಎಲ್ ಕ್ರಿಕೆಟ್ ಗೆ ಹೊಸ ಲುಕ್ ನೊಂದಿಗೆ ಕಣಕ್ಕಿಳಿಯಲು ಆರ್ ಸಿಬಿ ತಂಡ ಸಜ್ಜಾಗಿದೆ. ತಂಡವನ್ನ ಸೇರಿರುವ ಹೊಸ ಮಾಸ್ಟರ್​ ಮೈಂಡ್​ಗಳು, ಟೂರ್ನಿಗೂ ಮುನ್ನ ಸೂಪರ್​ ಪ್ಲಾನ್​ ರೂಪಿಸಿದ್ದಾರೆ. ಈ ಬಾಕಿ ಕಪ್​ ನಮ್ದಾಗಲೇ ಬೇಕು ಅನ್ನೋದು ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ.

ಕಳೆದ 16 ಸೀಸನ್​ಗಳಲ್ಲಿ ಕಪ್​ ನಮ್ದೇ ಅಂತಾ ಐಪಿಎಲ್​ ಸೀಸನ್​ ಆರಂಭಿಸೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಾಲಿಗೆ ಈವರೆಗೂ ಕಪ್​ ಅನ್ನೋದು ಗಗನ ಕುಸುಮವಾಗಿದೆ. ಸೀಸನ್​ನಿಂದ ಸೀಸನ್​ಗೆ ಕ್ಯಾಪ್ಟನ್​, ಕೋಚ್​, ಸಾಲು ಸಾಲು ಆಟಗಾರರು ಬದಲಾದರು. ಆದ್ರೆ ಕಪ್​ ಮಾತ್ರ ನಮ್ಮದಾಗಲಿಲ್ಲ.. ಇದೀಗ 17ನೇ ಸೀಸನ್​ನಲ್ಲಾದ್ರೂ ಚಾಂಪಿಯನ್​ ಆಗಲು ಪಣ ತೊಟ್ಟಿರೋ ರೆಡ್ ಆರ್ಮಿ ಆರಂಭದಲ್ಲೇ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ.

17ನೇ ಸೀಸನ್ ಐಪಿಎಲ್ ಗೆ ಆರ್ ಸಿಬಿ ಭರ್ಜರಿ ಸಿದ್ಧತೆ:

ಸೀಸನ್​ 17ರಲ್ಲಿ ಕಪ್​ ಗೆಲುವನ್ನ ಟಾರ್ಗೆಟ್​ ಮಾಡಿರುವ ಆರ್​ಸಿಬಿ ಹೆಡ್​ ಕೋಚ್​ ಬದಲಾವಣೆ ಮಾಡಿರೋದು ಈಗ ಹಳೆ ವಿಚಾರ. ಇದೀಗ ರಿಟೈನ್​, ರಿಲೀಸ್​ ಲೆಕ್ಕಾಚಾರ ಮುನ್ನೆಲೆಗೆ ಬರ್ತಿದ್ದಂತೆ ನೂತನ ಹೆಡ್​ ಕೋಚ್​ ಆ್ಯಂಡಿಫ್ಲವರ್​ ಚಾರ್ಚ್​ ತೆಗೆದುಕೊಂಡಿದ್ದಾರೆ.

ಆ್ಯಂಡಿ ಫ್ಲವರ್​​ ಜೊತೆ ಆರ್​​ಸಿಬಿಯ ನೂತನ ಡೈರೆಕ್ಟರ್​ ಮೊ ಬೊಟ್​​ ಕೂಡ ಅಖಾಡಕ್ಕೆ ಇಳಿದಿದ್ದಾರೆ. ಹೊಸ ಸೀಸನ್​​ ಅನ್ನು, ಹೊಸ ಪ್ಲಾನ್​ನೊಂದಿಗೆ, ಹೊಸ ಆಟಗಾರರೊಂದಿಗೆ ಫ್ರೆಶ್​ ಆಗಿ ಆರಂಭಿಸೋದು ರಾಯಲ್​ ಚಾಲೆಂಜರ್ಸ್​ ಪಡೆಯ ನಯಾ ಥಿಂಕ್​ಟ್ಯಾಂಕ್​ಗಳ ಲೆಕ್ಕಾಚಾರ..

ಯಾರಿಗೆಲ್ಲಾ ಗೇಟ್​ಪಾಸ್​.?

ದಿನೇಶ್​ ಕಾರ್ತಿಕ್​, ಹರ್ಷಲ್​ ಪಟೇಲ್, ಕೇದಾರ್ ಜಾದವ್​​
ಕರಣ್​ ಶರ್ಮಾ, ಸಿದ್ಧಾರ್ಥ್​ ಕೌಲ್​, ವೇಯ್ನ್​ ಪಾರ್ನೆಲ್​
ಫಿನ್​ ಅಲೆನ್​, ಅನುಜ್​ ರಾವತ್​, ಆಕಾಶ್​​ ದೀಪ್​

ಬಹುತೇಕ ಆಟಗಾರರಿಗೆ ಕೊಕ್​ ನೀಡಲು ಮಾಸ್ಟರ್ ಪ್ಲಾನ್

17ನೇ ಸೀಸನ್​ಗೂ ಮುನ್ನ ಪ್ಲೇ ಬೋಲ್ಡ್​ ಆರ್ಮಿ ಬೋಲ್ಡ್​ ಡಿಸಿಷನ್​ ತೆಗೆದುಕೊಳ್ಳಲು ಮುಂದಾಗಿದೆ. ಹಾಲಿ ತಂಡದಲ್ಲಿರುವ ಪ್ರಮುಖ ಆಟಗಾರರಿಗೆ ಕೊಕ್​ ಕೊಡೋ ಕಠಿಣ ನಿರ್ಧಾರವನ್ನು ಆರ್​ಸಿಬಿ ಪಾಳೆಯ ಮಾಡಿದೆ. ಯಾರೆಲ್ಲಾ ತಂಡಕ್ಕೆ ಫಿಟ್​ ಅನ್ನಿಸಲ್ವೋ ಅವರೆಲ್ಲರಿಗೂ ಗೇಟ್​ಪಾಸ್​ ನೀಡಲು ಆರ್​ಸಿಬಿ ತಂಡ ಮುಂದಾಗಿದೆ.

ವಿರಾಟ್​ ಕೊಹ್ಲಿ, ಫಾಫ್​ ಡುಪ್ಲೆಸಿ, ಮೊಹಮ್ಮದ್​ ಸಿರಾಜ್​ ಮೂವರ ಜೊತೆಗೆ ಕೆಲ ಯಂಗ್​ಸ್ಟರ್​ಗಳ ಸ್ಥಾನ ಸದ್ಯಕ್ಕೆ . ಹಲ ಸೀನಿಯರ್​ಗಳ ಜೊತೆ ಕೆಲ ಯುವಕರಿಗೆ ಸ್ಥಾನ ಡೌಟ್​..!

ಮಿಡಲ್​ ಆರ್ಡರ್​ಗೆ ಬಲ, ಭವಿಷ್ಯದ ನಾಯಕನ ಹುಡುಕಾಟ..!

ಮಿನಿ ಆಕ್ಷನ್​ಗೆ ಆರ್​​ಸಿಬಿ ಸಿದ್ಧಪಡಿಸಿಕೊಂಡಿರೋ ಒನ್​ ಲೈನ್​ ಅಜೆಂಡಾ ಇದು. ಮಿಡಲ್​ ಆರ್ಡರ್​ ಬ್ಯಾಟಿಂಗ್​ ತಂಡವನ್ನ ಬಿಡದೇ ಕಾಡ್ತಿದೆ. ಹೀಗಾಗಿ ಅದಕ್ಕೆ ಬಲ ತುಂಬಲು ಸೂಕ್ತ ಆಟಗಾರರ ಹುಡುಕಾಟ ಮಿನಿ ಆಕ್ಷನ್​ನಲ್ಲಿ ನಡೆಯಲಿದೆ. ಇದ್ರ ಜೊತೆಗೆ ಭವಿಷ್ಯದಲ್ಲಿ ತಂಡವನ್ನ ಮುನ್ನಡೆಸಬಲ್ಲ ಸಾಮರ್ಥ್ಯ ಯುವ ಆಟಗಾರನನ್ನ ತೆಕ್ಕೆಗೆ ಹಾಕಿಕೊಳ್ಳೋದು ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ.

ಒಟ್ಟಿನಲ್ಲಿ, 17ನೇ ಸೀಸನ್​ನಲ್ಲಿ ಟ್ರೋಫಿ ಗೆಲ್ಲಲು ಪಣ ತೊಟ್ಟಿರುವ ರಾಯಲ್​ ಚಾಲೆಂಜರ್ಸ್​ ಆರ್ಮಿ, ಇಷ್ಟು ದಿನ ಮಾಡಿದ ಮಿಸ್ಟೇಕ್​ಗೆ ಬ್ರೇಕ್​ ಹಾಕಲು ನಿರ್ಧರಿಸಿದೆ. ಬಲಿಷ್ಟ ಸೈನ್ಯದೊಂದಿಗೆ ರಣಾಂಗಣಕ್ಕೆ ಇಳಿಯಲು ಮೆಗಾ ಪ್ಲಾನ್​ ರೂಪಿಸಿಕೊಂಡಿದೆ. ಈ ಪ್ಲಾನ್​ ಎಷ್ಟರಮಟ್ಟಿಗೆ ವರ್ಕೌಟ್​ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ವಿರಾಟ್​ ಕೊಹ್ಲಿ ಮತ್ತೆ ಆರ್​​ಸಿಬಿಯ ಸಾರಥಿ

ಕಳೆದ 2 ಸೀಸನ್​​ ಹಿಂದೆ ಐಪಿಎಲ್​ ನಾಯಕತ್ವಕ್ಕೆ ಗುಡ್​ ಬೈ ಹೇಳಿರುವ ವಿರಾಟ್​ ಕೊಹ್ಲಿಗೆ ಮತ್ತೆ ಪಟ್ಟ ಕಟ್ಟುವ ಬಗ್ಗೆ ಫ್ರಾಂಚೈಸಿ ವಲಯದಲ್ಲಿ ಚರ್ಚೆ ನಡೆದಿರೋದು ಸತ್ಯ. ಹಾಲಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್ ನಾಯಕನಾಗಿ ತಂಡವನ್ನ ಉತ್ತಮವಾಗಿ ಮುನ್ನಡೆಸಿದ್ದಾರೆ. ಸಾಲಿಡ್​ ಫಾರ್ಮ್​ನಲ್ಲಿ ಬ್ಯಾಟ್​ ಬೀಸಿರುವ ಫಾಫ್​, ಫಿಟ್​ನೆಸ್​ ಕೂಡ ಟಾಪ್​ ಲೆವೆಲ್​ನಲ್ಲಿದೆ. 39 ವರ್ಷದ ಡುಪ್ಲೆಸಿಸ್ ಎಷ್ಟು ವರ್ಷ ನಾಯಕನಾಗಿರ್ತಾರೆ ಅನ್ನೋದ್ರ ಬಗ್ಗೆ ಖಚಿತತೆ ಇಲ್ಲ. ಹೀಗಾಗಿ ಕೊಹ್ಲಿಗೆ ನಾಯಕನ ಪಟ್ಟ ಕಟ್ಟುವ ಬಗ್ಗೆ ಚರ್ಚೆ ನಡೆದಿದೆ. ಇದಕ್ಕೆ ಕೊಹ್ಲಿ ಜೈ ಅನ್ತಾರಾ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆ.

ಒಟ್ಟಾರೆಯಾಗಿ ಈ ಬಾರಿಯಾದರೂ ಐಪಿಎಲ್ ಟ್ರೋಫಿ ಆರ್ ಸಿಬಿ ಪಾಲಾಗುತ್ತಾ ಎಂಬುವುದನ್ನು ನೋಡಬೇಕಷ್ಟೆ..!!