ನಿಮ್ಮ ಸ್ಮಾರ್ಟ್ ಫೋನ್ ಬಗ್ಗೆ ನಿಮಗೇ ಅರಿವಿಲ್ಲದ ಸೀಕ್ರೆಟ್ ಗಳನ್ನು ಈ ಕೋಡ್ ಗಳ ಮೂಲಕ ತಿಳೀಬೋದು – ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ…

ನಿಮ್ಮ ಸ್ಮಾರ್ಟ್ ಫೋನ್ ಬಗ್ಗೆ ನಿಮಗೇ ಅರಿವಿಲ್ಲದ ಸೀಕ್ರೆಟ್ ಗಳನ್ನು ಈ ಕೋಡ್ ಗಳ ಮೂಲಕ ತಿಳೀಬೋದು – ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ…

ನ್ಯೂಸ್ ಆ್ಯರೋ : ನಾವು ಅಂಡ್ರಾಯ್ಡ್ ಫೋನ್ ಬಳಸ್ತಿದ್ರೂ ಕೂಡಾ ಅದರ ಬಗ್ಗೆ ತಿಳಿದಿಲ್ಲದ ಅನೇಕ ವಿಚಾರಗಳಿರಬಹುದು. ಬಹುಶಃ ಮೊಬೈಲ್ ಅನ್ನು ಬುದ್ಧಿಜೀವಿಗಳು ಮಾಯಾಲೋಕ ಅಂತ ಕರೆದಿದ್ದು ಅದಕ್ಕೇ ಇರಬೇಕು.‌ ಅದರ ತಾಂತ್ರಿಕ ಮಾಹಿತಿ ವಿಶಾಲ ಸಾಗರದಂತೆ. ಬಗೆದಷ್ಟು ಅರಿತುಕೊಳ್ಳಲು ಸಾಕಷ್ಟಿರುತ್ತದೆ.

ಇದೀಗ ಕೆಲವು ಕೋಡ್ ಗಳ ಆಧಾರದ ಮೇಲೆ ಫೋನ್ ನಲ್ಲಿ ಇಂಟ್ರೆಸ್ಟಿಂಗ್ ವಿಷಯಗಳನ್ನು ಪಡೆಯಬಹುದು. ಇಂದು ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್ (Smartphone) ಅನಿವಾರ್ಯ ಎಂಬಂತಾಗಿದೆ. ಒಂದೇ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಫೋನ್ ಇದ್ದೇ ಇರುತ್ತದೆ. ಬ್ಯಾಂಕ್ ಕೆಲಸದಿಂದ ಹಿಡಿದು, ಫ್ಲೈಟ್ ಟಿಕೆಟ್, ಸಿನಿಮಾ ಟಿಕೆಟ್ ಬುಕ್ಕಿಂಗ್ ವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಸ್ಮಾರ್ಟ್​ಫೋನ್ ಮೂಲಕವೇ ಮಾಡಬಹುದು.

ನಿಮ್ಮ ಅಂಗೈಯಲ್ಲಿರುವ ಈ ಗ್ಯಾಜೆಟ್ ಈಗ ಜಗತ್ತನ್ನು ಆಳುತ್ತಿದೆ. ಆದರೆ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುವ ಸ್ಮಾರ್ಟ್​ಫೋನ್ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಹಲವು ವಿಷಯಗಳಿವೆ. ಅದನ್ನು ಕೋಡ್ ಗಳ ಮೂಲಕ ತಿಳಿದುಕೊಳ್ಳಬಹುದು.

ಆ ಕೋಡ್‌ಗಳು ಯಾವುವು..?

  1. 4636##: ನಿಮ್ಮ ಸ್ಮಾರ್ಟ್​ಫೋನ್‌ನ ಸಂಪೂರ್ಣ ವಿವರಗಳನ್ನು ತಿಳಿಯಲು ಫೋನ್‌ನಲ್ಲಿ ಈ ಕೋಡ್ ಅನ್ನು ನಮೂದಿಸಿ. ಈ ಕೋಡ್ ಮೂಲಕ ಬ್ಯಾಟರಿ, ವೈಫೈ ಮಾಹಿತಿ, ಆಪ್ಸ್ ಬಳಕೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳಬಹುದು.
  2. ಕರೆಗಳು ಅಥವಾ ಸಂದೇಶಗಳನ್ನು ಮತ್ತೊಂದು ಸಂಖ್ಯೆಗೆ ಡೈವರ್ಟ್ ಮಾಡಲಾಗಿದೆಯೇ ಎಂದು ತಿಳಿಯಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೋಡ್ ಲಭ್ಯವಿದೆ. *#21# ಕೋಡ್ ಸಹಾಯದಿಂದ ಇದನ್ನು ಮಾಡಬಹುದು.
  3. ನಿಮ್ಮ ಕರೆಗಳು ಮತ್ತು ಸಂದೇಶಗಳನ್ನು ಇತರ ಸಂಖ್ಯೆಗಳಿಗೆ ಫಾರ್ವರ್ಡ್ ಮಾಡಿದರೆ, ##002# ಕೋಡ್ ಅನ್ನು ನಮೂದಿಸುವ ಮೂಲಕ ನೀವು ಅದನ್ನು ರದ್ದುಗೊಳಿಸಬಹುದು. ಈ ಕೋಡ್ ಅನ್ನು ನಮೂದಿಸುವುದರಿಂದ ಈ ಕರೆಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲಾಗುತ್ತದೆ.
  4. *43# ಕೋಡ್ ಸಹಾಯದಿಂದ ನಿಮ್ಮ ಫೋನ್‌ನಲ್ಲಿ ಕಾಲ್ ವೈಟಿಂಗ್ ಸೇವೆಯನ್ನು ಸಕ್ರಿಯಗೊಳಿಸಬಹುದು.
  5. ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ತಿಳಿಯಲು, ನೀವು *#06# ಕೋಡ್ ಅನ್ನು ನಮೂದಿಸಬೇಕು. ಈ ಕೋಡ್ ಅನ್ನು ನಮೂದಿಸುವ ಮೂಲಕ ನಿಮ್ಮ ಫೋನ್‌ನ IMEI ಸಂಖ್ಯೆಯ ಜೊತೆಗೆ ನೀವು ಸಂಪೂರ್ಣ ವಿವರಗಳನ್ನು ಪಡೆಯಬಹುದು.

ಗಮನಿಸಿ: ಕೆಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮೇಲಿನ ವಿವರಗಳನ್ನು ಒದಗಿಸಲಾಗಿದೆ. ಆದರೆ ಈ ಕೋಡ್‌ಗಳನ್ನು ಸರಿಯಾಗಿ ಬೆಂಬಲಿಸದ ಫೋನ್‌ಗಳು ತಾಂತ್ರಿಕ ಹಾನಿಯ ಅಪಾಯವನ್ನು ಎದುರಿಸುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮುಂಜಾಗೃತಾ ಕ್ರಮ ಅನುಸರಿಸಿಕೊಂಡು ಸುರಕ್ಷತೆಯ ದೃಷ್ಟಿಯಲ್ಲಿ ಈ ಕ್ರಮಗಳನ್ನು ಅನುಸರಿಸಿಕೊಳ್ಳಿ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *