PKL-10 2023: Pro Kabaddi League Live Where

ಪ್ರೊ. ಕಬಡ್ಡಿ ಲೀಗ್ 10 ನೇ ಆವೃತ್ತಿಗೆ ದಿನಗಣನೆ – ನೇರಪ್ರಸಾರ ಎಲ್ಲಿ, ನಾವು ಫ್ರೀಯಾಗಿ ವೀಕ್ಷಿಸೋದು ಹೇಗೆ…?

ನ್ಯೂಸ್ ಆ್ಯರೋ : ‘ಕ್ರೀಡೆ’ ಅಂದ್ರೆ ಅದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವಂತಹ ಒಂದು ಕ್ರಿಯೆ. ಕ್ರೀಡೆಗೆ ಮಹಿಳೆಯರೂ ಏನೂ ಹೊರತಲ್ಲ. ಮೊನ್ನೆ ಮೊನ್ನೆಯಷ್ಟೇ ಕ್ರಿಕೆಟ್ ವಿಶ್ವಕಪ್ ನೋಡಿದ್ದೇವೆ. ಭಾರತ ಸೋತಿದಕ್ಕೆ ದುಃಖಿಸಿದ್ದೇವೆ.‌ ಸಮಾಧಾನ ಅಂದ್ರೆ ನಿನ್ನೆ ನಡೆದ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಆಸೀಸ್ ಎದುರು ಭಾರತಕ್ಕೆ ರೋಚಕ ಜಯ ಲಭಿಸಿತ್ತು.

ಇನ್ನೇನೋ ಪ್ರೋ ಕಬ್ಬಡ್ಡಿ ಕೂಡಾ ಶೀಘ್ರದಲ್ಲೇ ಪ್ರಾರಂಭ ಆಗುತ್ತಿದೆ. ಅದಕ್ಕೂ ದಿನಗಣನೆ ಪ್ರಾರಂಭವಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪ್ರೊ. ಕಬಡ್ಡಿ 10ನೇ ಆವೃತ್ತಿ ಯಾವಾಗ ಪ್ರಾರಂಭ..?

ಡಿಸೆಂಬರ್ 2ರಿಂದ ಫೆಬ್ರವರಿ 21ವರೆಗೂ 3ತಿಂಗಳ ಕಾಲ ಪ್ರೊ ಕಬಡ್ಡಿ ಲೀಗ್ ನಡೆಯಲಿದೆ. ಈ ಮೂರು ತಿಂಗಳ ಪರ್ಯಂತ ಮನರಂಜನೆ ನೀಡಲು ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿದೆ. ವೇಳಾಪಟ್ಟಿ ಕೂಡಾ ಬಿಡುಗಡೆಗೊಂಡಿದೆ.

ಉದ್ಘಾಟನಾ ಪಂದ್ಯ ಡಿಸೆಂಬರ್ 2ರಂದು ಅಹ್ಮದಾಬಾದ್ ನ ಅರೆನಾ ಬೈ ಟ್ರಾನ್ಸ್ ಸ್ಟಾಡಿಯಾ ಸ್ಟೇಡಿಯಂನಲ್ಲಿ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿವೆ.

ಪಾಲ್ಗೊಳ್ಳುವ ತಂಡಗಳು ಯಾವುದು..?

ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್ , ತಮಿಳು ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ, ಯುಪಿ ಯೋಧಾ ಈ ಎಲ್ಲ ತಂಡಗಳು ಭಾಗವಹಿಸಲಿದೆ.

ಅಂಕ ಯಾವುದರ ಮೇಲೆ ನಿರ್ಧರಿತವಾಗುತ್ತದೆ…?

ಗೆದ್ದ ತಂಡಕ್ಕೆ 5 ಅಂಕ, ಸೋತ ತಂಡಕ್ಕೆ ಶೂನ್ಯ ಅಂಕ ನೀಡಲಾಗುತ್ತದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡರೆ ಎರಡೂ ತಂಡಗಳಿಗೆ ಮೂರು ಅಂಕ ಸಿಗುತ್ತದೆ.

ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತದೆ..?

ಪಂದ್ಯಗಳು 12ನಗರಗಳಲ್ಲಿ ನಡೆಯಲಿದೆ. ಡಿ.2ರಿಂದ 7ರವರೆಗೆ- ಅಹಮದಾಬಾದ್, ಡಿ.8ರಿಂದ 13ರವರೆಗೆ-ಬೆಂಗಳೂರು, ಡಿ.15ರಿಂದ 20ರವರೆಗೆ-ಪುಣೆ, ಡಿ.22ರಿಂದ 27ರವರೆಗೆ ಚೆನ್ನೈ, ಡಿ. 29ರಿಂದ ಜನವರಿ 3ರವರೆಗೆ-ನೋಯ್ಡಾ, ಜ5ರಿಂದ 10ರವರೆಗೆ- ಮುಂಬೈ, ಜನವರಿ12-17 ಜೈಪುರ, ಜ.19-24 ಹೈದರಾಬಾದ್, ಜ.26-31 ಪಾಟ್ನಾ, ಫೆ.2-7 ದೆಹಲಿ, ಫೆ. 9-14 ಕೋಲ್ಕತ್ತಾ, ಫೆ. 16-21 ಪಂಚಕುಲದಲ್ಲಿ ನಡೆಯಲಿದೆ.

ಲೀಗ್ ನಲ್ಲಿ ನಡೆಯುವ ಪಂದ್ಯಗಳೆಷ್ಟು..?

ಈ ಆವೃತ್ತಿಯಲ್ಲಿ ಒಟ್ಟು 137 ಪಂದ್ಯಗಳಲ್ಲಿ ಚಾಂಪಿಯನ್ ಶಿಪ್ ಗೆಲ್ಲಲು 12 ತಂಡಗಳು ಪರಸ್ಪರ ಸ್ಪರ್ಧಿಸಲಿದೆ.

ಮೊಬೈಲ್, ಟಿವಿ, ಲ್ಯಾಪ್‌ಟಾಪ್ ನಲ್ಲಿ ಪ್ರೀ ಯಾಗಿ ಪ್ರೊ. ಕಬಡ್ಡಿ ವೀಕ್ಷಿಸೋದು ಹೇಗೆ..?

ಈ ಪಂದ್ಯಗಳ ನೇರಪ್ರಸಾರ ಎಲ್ಲಾ ಸ್ಟಾರ್ ಸ್ಪೋರ್ಟ್ಸ್ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಾನೆಲ್ ನಲ್ಲಿ ನೇರಪ್ರಸಾರ ಬರಲಿದೆ. ಡಿಸ್ನಿ+ ಹಾಟ್ ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಉಚಿತವಾಗಿ ನೋಡಬಹುದು.