ಹಣೆಗೆ ತಿಲಕ ಇಡಲು ತಿರಸ್ಕರಿಸಿದ ಟೀಂ ಇಂಡಿಯಾದ ಸಿರಾಜ್, ಉಮ್ರಾನ್ ಮಲಿಕ್ – ಪರ ವಿರೋಧ ಚರ್ಚೆಗೆ ಕಾರಣವಾಯ್ತು ವೈರಲ್ ವಿಡಿಯೋ…!!

ಹಣೆಗೆ ತಿಲಕ ಇಡಲು ತಿರಸ್ಕರಿಸಿದ ಟೀಂ ಇಂಡಿಯಾದ ಸಿರಾಜ್, ಉಮ್ರಾನ್ ಮಲಿಕ್ – ಪರ ವಿರೋಧ ಚರ್ಚೆಗೆ ಕಾರಣವಾಯ್ತು ವೈರಲ್ ವಿಡಿಯೋ…!!

ನ್ಯೂಸ್ ಆ್ಯರೋ : ಟೀಂ ಇಂಡಿಯಾದ ಆಟಗಾರರಾದ ಮೊಹಮ್ಮದ್ ಸಿರಾಜ್ ಹಾಗೂ ಉಮ್ರಾನ್‌ ಮಲಿಕ್‌ ತಮ್ಮ ಹಣೆಗೆ ತಿಲಕ ಇಡುವುದನ್ನು ತಿರಸ್ಕರಿಸಿದ್ದಾರೆ ಎಂಬ ಕಾರಣಕ್ಕೆ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಸದ್ಯ, ಈ ಇಬ್ಬರು ಆಟಗಾರರಿಗೆ ಸ್ವಾಗತ ಕೋರುವವರು ಕುಂಕುಮ‌ ಇಡುತ್ತಿದ್ದಂತೆ ಬೇಡ ಎಂದು ತಿರಸ್ಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

ಟೀಂ ಇಂಡಿಯಾದ ಆಟಗಾರರು ಹೋಟೆಲ್‌ಗೆ ತೆರಳುತ್ತಿದ್ದ ವಿಡಿಯೋ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಆಟಗಾರರಿಗೆ ಸ್ವಾಗತ ಏರ್ಪಡಿಸಲಾಗಿತ್ತು. ಭಾರತೀಯ ಬೌಲರ್‌ಗಳಾದ ಸಿರಾಜ್ ಹಾಗೂ ಉಮ್ರಾನ್ ಮಲಿಕ್ ಈ ವೇಳೆ ತಮ್ಮ ಹಣೆಗೆ ತಿಲಕ ಇಡದಂತೆ ಹೊಟೇಲ್ ಸಿಬ್ಬಂದಿಗಳನ್ನು‌ ತಡೆದಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರಲ್ಲಿ ಕೆಲವರು ‘ಹಾಗೆ ಮಾಡಬಾರದಿತ್ತು, ಅದು ಭಾರತೀಯ ಸಂಸ್ಕೃತಿಯ ಪ್ರಕಾರ ಸ್ವಾಗತಿಸುವುದಲ್ಲವೇ’ ಎಂದರೆ, ಮತ್ತೆ ಕೆಲವರು ‘ಆಟಗಾರರು ಮಾಡಿದ್ದು‌ ಸರಿ, ಅವರು ಅವರ ಧರ್ಮದ‌ ಪ್ರಕಾರ ನಡೆದುಕೊಂಡಿದ್ದಾರೆ ಅದರಲ್ಲೇನು ತಪ್ಪದೆ’ ಎಂದು ಪ್ರಶ್ನಿಸಿದ್ದಾರೆ.

ಆದರೆ ಇದೇ ವೇಳೆ ತಿಲಕವನ್ನು ತಿರಸ್ಕರಿಸಿದ ಟೀಂ ಇಂಡಿಯಾದ ಬ್ಯಾಟಿಂಗ್‌ ಕೋಚ್ ವಿಕ್ರಮ್ ರಾಥೋರ್ ಅವರನ್ನು‌ ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಕೆಲವರ ಪ್ರಕಾರ, ಇದು ಹಳೆಯ ವಿಡಿಯೋ. ಏಕೆಂದರೆ ಆಸ್ಟ್ರೇಲಿಯಾ ಪರ ಟೆಸ್ಟ್ ಸರಣಿಗೆ ಆಯ್ಕೆಯಾಗಿಲ್ಲ. ಆದರೂ ವಿಡಿಯೋದಲ್ಲಿ ಅವರಿದ್ದಾರೆ. ಇದು ಶ್ರೀಲಂಕಾ ಅಥವಾ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದ ವೇಳೆ ನಡೆದಿರುವ ಘಟನೆಯಾಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ವಿಡಿಯೋ ಮಾತ್ರ ಪರ – ವಿರೋಧ ಚರ್ಚೆಗೆ ಆಹಾರವಾಗಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *