ಭಾರತದಲ್ಲೇ ತಯಾರಾಗಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್ಫೋನ್’ಗಳು – ಇನ್ಮುಂದೆ ಸ್ಯಾಮ್ಸಂಗ್ ಕೂಡ ‘ಮೇಡ್ ಇನ್ ಇಂಡಿಯಾ’

ಭಾರತದಲ್ಲೇ ತಯಾರಾಗಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್ಫೋನ್’ಗಳು – ಇನ್ಮುಂದೆ ಸ್ಯಾಮ್ಸಂಗ್ ಕೂಡ ‘ಮೇಡ್ ಇನ್ ಇಂಡಿಯಾ’

ನ್ಯೂಸ್ ಆ್ಯರೋ ; ಹಲವು ವರ್ಷಗಳಿಂದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಎಂದರೆ ಅದು ಸ್ಯಾಮ್ಸಂಗ್. ಸ್ಯಾಮ್ಸಂಗ್ ವಿಶ್ವದಾದ್ಯಂತ ಬಳಕೆದಾರರನ್ನು ಹೊಂದಿದ್ದು, ಇತ್ತೀಚೆಗಂತೂ ಇಂದಿನ ಕಾಲಮಾನಕ್ಕೆ ಬೇಕಾದ ರೀತಿಯ ಫೀಚರ್ ಗಳೊಂದಿಗೆ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ಹೊಸದಾಗಿ ಸ್ಮಾರ್ಟ್ಫೋನ್ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್ಫೋನ್ ಗಳು ಭಾರತದಲ್ಲೇ ತಯಾರಾಗಲಿದೆ ಎಂದು ಕಂಪೆನಿಯು ತಿಳಿಸಿದೆ.

ಹೌದು, 2018ರಲ್ಲಿ ಪ್ರಧಾನಿ‌ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ ನೋಯ್ಡಾದಲ್ಲಿರುವ ದೇಶದ‌ ಅತೀ ದೊಡ್ಡ ಮೊಬೈಲ್ ತಯಾರಿಕಾ ಘಟಕದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್ಫೋನ್ ಗಳು ತಯಾರಾಗಲಿವೆ. ಭಾರತದ ಉತ್ಪಾದನೆ ಹಾಗೂ ಬೆಳವಣಿಗೆ ಹೆಚ್ಚಿಸುವ ಉದ್ದೇಶದಿಂದ, ‘ಮೇಡ್‌ ಇನ್‌ ಇಂಡಿಯಾ‘ ಗ್ಯಾಲಕ್ಸಿ S23 ಮೊಬೈಲ್‌ ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು ಎಂದು ಸಾಮ್ಸಂಗ್‌ ಕಂಪೆನಿಯ ಸ್ಪಷ್ಟನೆ ನೀಡಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಫೀಚರ್ಸ್ ಹೀಗಿರಲಿದೆ..

ಮೇಡ್‌ ಇನ್ ಇಂಡಿಯಾ ಕಲ್ಪನೆಯಲ್ಲಿ ಭಾರತದಲದಲೇ ತಯಾರಾಗಲಿರುವ ಈ ಸ್ಮಾರ್ಟ್ಫೋನ್ ನಲ್ಲಿ ಸ್ನಾಫ್‌ಡ್ರ್ಯಾಗನ್ 8 Gen ಪ್ರೊಸೆಸರ್ ಇರಲಿದ್ದು, ಅತ್ಯದ್ಭುತ ಅನುಭವ ನೀಡುವ ಗೇಮಿಂಗ್‌ ಫೀಚರ್‌ ಇರಲಿದೆ. ಇದಕ್ಕಾಗಿ ವಿಶ್ವದ ವೇಗದ ಮೊಬೈಲ್ ಗ್ರಾಫಿಕ್ಸ್‌ಗಳನ್ನು ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಜೊತೆಗೆ ಈ ಮೊಬೈಲ್‌ನಲ್ಲಿ ಮರುಬಳಕೆ ಮಾಡಲಾದ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗಿದ್ದು, 200MP ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆ ಹೊಂದಿರಲಿದೆ‌ ಎಂದು ಕಂಪೆನಿ‌ ತಿಳಿಸಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *