ಐಪಿಎಲ್ 2023 ಯಲ್ಲಿ ಜಾರಿಯಾಗಲಿದೆ ಹೊಸ ನಿಯಮ – ಇಂಪ್ಯಾಕ್ಟ್ ಪ್ಲೇಯರ್ ಕಣಕ್ಕಿಳಿಯಲು ಹೊಸ ಅವಕಾಶ : ಏನಿದು ಹೊಸ ನಿಯಮ? ಇದರಿಂದ ತಂಡಗಳಿಗೆ ಆಗುವ ಲಾಭವೇನು?

ಐಪಿಎಲ್ 2023 ಯಲ್ಲಿ ಜಾರಿಯಾಗಲಿದೆ ಹೊಸ ನಿಯಮ – ಇಂಪ್ಯಾಕ್ಟ್ ಪ್ಲೇಯರ್ ಕಣಕ್ಕಿಳಿಯಲು ಹೊಸ ಅವಕಾಶ : ಏನಿದು ಹೊಸ ನಿಯಮ? ಇದರಿಂದ ತಂಡಗಳಿಗೆ ಆಗುವ ಲಾಭವೇನು?

ನ್ಯೂಸ್ ಆ್ಯರೋ : ಮುಂದಿನ ಬಾರಿ ನಡೆಯಲಿರುವ ಟೂರ್ನಿಯಲ್ಲಿ ಬಿಸಿಸಿಐ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಐಪಿಎಲ್ ಮುಂದಿನ ಸೀಸನ್​ನಿಂದ ಇಂಪ್ಯಾಕ್ಟ್ ಪ್ಲೇಯರ್ ಎಂಬ ನಿಯಮವನ್ನು ಅಳವಡಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ.

ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ಆಯೋಜಿಸಲಾಗಿದ್ದು ಎಲ್ಲ ಫ್ರಾಂಚೈಸಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಪ್ಲೇಯರ್ಸ್ ಆಗಿದ್ದಾರೆ. ಹೀಗಿರುವಾಗ ಐಪಿಎಲ್ 2023 ಟೂರ್ನಿಯಲ್ಲಿ ಬಿಸಿಸಿಐ (BCCI) ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಐಪಿಎಲ್ ಮುಂದಿನ ಸೀಸನ್​ನಿಂದ ಇಂಪ್ಯಾಕ್ಟ್ ಪ್ಲೇಯರ್ ಎಂಬ ನಿಯಮವನ್ನು ಅಳವಡಿಸುವ ಬಗ್ಗೆ ಬಿಸಿಸಿಐಚಿಂತನೆ ನಡೆಸಿದೆ.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಿಸಿಸಿಐ ಪ್ರಯೋಗಿಸಿ ಯಶಸ್ಸು ಕಂಡಿತ್ತು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಈ ರೂಲ್ ತರಲು ಮುಂದಾಗಿದೆ.

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?

ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಆಟದ ನಡುವೆ ಬದಲಿ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆ. ಈ ನಿಯಮ ಭಾರತಕ್ಕೆ ಹೊಸದಾಗಿದ್ದರೂ ಕ್ರಿಕೆಟ್ ಲೋಕದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಈ ಹಿಂದೆ ಬಿಗ್​ಬ್ಯಾಶ್ ಟಿ20 ಲೀಗ್​​ನಲ್ಲಿ ಕೂಡ ಇದನ್ನು ಅಳವಡಿಸಲಾಗಿತ್ತು. ಈ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪಂದ್ಯದ ಮಧ್ಯೆ ಬದಲಿಬಹುದು. ಹಾಗಂತ ಈ ನಿಯಮವನ್ನು ಬಳಸಲೇಬೇಕೆಂದಿಲ್ಲ. ಈ ಆಯ್ಕೆಯನ್ನು ಪ್ರಯೋಗಿಸುವುದು ತಂಡಕ್ಕೆ ಬಿಟ್ಟ ವಿಷಯ.

ಈ ನಿಯಮದ ಪ್ರಕಾರ, ಪ್ರತಿ ತಂಡವು ಟಾಸ್ ಪ್ರಕ್ರಿಯೆ ವೇಳೆ ಪ್ಲೇಯಿಂಗ್ ಇಲೆವೆನ್ ಹೆಸರಿಸುವಾಗ ಹೆಚ್ಚುವರಿ 4 ಆಟಗಾರರ ಹೆಸರನ್ನು ನೀಡಬೇಕಾಗುತ್ತದೆ. ಅಂದರೆ ಟಾಸ್ ಸಮಯದಲ್ಲೇ ಒಟ್ಟು 11+4 ಆಟಗಾರರ ಹೆಸರನ್ನು ಘೋಷಿಸಬೇಕು. ಪಂದ್ಯ ಆರಂಭದ ನಂತರ ತಂಡಗಳು ಈ 4 ಆಟಗಾರರಲ್ಲಿ ಯಾರನ್ನಾದರೂ ಪ್ಲೇಯಿಂಗ್ ಇಲೆವೆನ್​ನಲ್ಲಿ ಸೇರಿಸಿಕೊಳ್ಳಬಹುದು. ಆದರೆ ಇಲ್ಲೂ ಒಂದು ನಿಯಮವಿದೆ. ಇನಿಂಗ್ಸ್​ನ 14ನೇ ಓವರ್​ಗೂ ಮೊದಲು ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು. ನಂತರ ಈ ಆಯ್ಕೆಯನ್ನು ಬಳಸುವಂತಿಲ್ಲ.

ಪ್ಲೇಯಿಂಗ್ ಇಲೆವೆನ್ ಒಬ್ಬ ಪ್ಲೇಯರ್ ಹೊರಕ್ಕೆ:

ಇಲ್ಲಿ ಬದಲಿ ಆಟಗಾರನಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್​ನನ್ನು ಕಣಕ್ಕಿಳಿಸಿದರೆ, ಒಬ್ಬ ಆಟಗಾರ ಹೊರಹೋಗಬೇಕಾಗುತ್ತದೆ. ಅಂತೆಯೆ ಹೊರಹೋದ ಆಟಗಾರ ಆ ಬಳಿಕ ಯಾವುದೇ ರೂಪದಲ್ಲಿ ಪಂದ್ಯದ ಭಾಗವಾಗಲು ಸಾಧ್ಯವಾಗುವುದಿಲ್ಲ. ಬದಲಿ ಫೀಲ್ಡರ್, ರನ್ನರ್ ಆಗಿಯೂ ಕೂಡ ಕಣಕ್ಕಿಳಿಯಲು ಅವಕಾಶ ಇರುವುದಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ಮೂಲಕ ಓವರ್‌ನ ಮಧ್ಯದಲ್ಲಿ ಕೂಡ ಬದಲಿ ಆಟಗಾರನನ್ನು ಕಣಕ್ಕಿಳಿಸಲು ಅವಕಾಶವಿಲ್ಲ. ಒಂದು ವೇಳೆ ಆಟಗಾರನೊಬ್ಬ ಗಾಯಗೊಂಡರೆ ಈ ಆಯ್ಕೆಯನ್ನು ಬಳಸಿಕೊಳ್ಳಬಹುದಷ್ಟೆ.

ಇಂಪ್ಯಾಕ್ಟ್ ಪ್ಲೇಯರ್ ಏನು ಮಾಡಬಹುದು?

ಬ್ಯಾಟಿಂಗ್ ತಂಡವು ವಿಕೆಟ್ ಕಳೆದುಕೊಂಡ ಸಂದರ್ಭ ಅಥವಾ ಇನ್ನಿಂಗ್ಸ್ ವಿರಾಮದ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಪರಿಚಯಿಸಬಹುದು. ಹೀಗೆ ಕಣಕ್ಕಿಳಿದ ಆಟಗಾರನಿಗೆ ಪ್ಲೇಯಿಂಗ್​ XI ನಲ್ಲಿದ್ದ ಆಟಗಾರರಷ್ಟೇ ಅಧಿಕಾರ ಇರುತ್ತದೆ. ಒಂದು ವೇಳೆ ಫೀಲ್ಡಿಂಗ್ ತಂಡವು ಬೌಲರ್ ಅನ್ನು ಕಣಕ್ಕಿಳಿಸಲು ಬಯಸಿದರೆ, ಸಂಪೂರ್ಣ ಓವರ್​ ಎಸೆಯುವ ಅವಕಾಶ ಕೂಡ ಇರಲಿದೆ. ಅಂದರೆ ಒಂದಕ್ಕಿಂತ ಹೆಚ್ಚು ಓವರ್‌ಗಳನ್ನು ಬೌಲ್ ಮಾಡದಿದ್ದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುವ ಆಟಗಾರನಿಗೆ ಪೂರ್ಣ 4 ಓವರ್‌ಗಳನ್ನು ಬೌಲ್ ಮಾಡಲು ಅನುಮತಿಸಲಾಗುತ್ತದೆ. ಇದಾಗ್ಯೂ ಮಳೆ ಬಂದು ಅಥವಾ ಇತರೆ ಕಾರಣಗಳಿಂದ 10 ಓವರ್​ಗಳಿಗೆ ಸೀಮಿತವಾಗಿರುವ ಪಂದ್ಯಗಳಿಗೆ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯನ್ನು ನೀಡಲಾಗುವುದಿಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *