ಥೈರಾಯ್ಡ್ ಸಮಸ್ಯೆ ಬಾರದಂತೆ ತಡೆಯಲು ಏನು ಮಾಡಬೇಕು? – ಸಮಸ್ಯೆ ಇದ್ದವರು ಏನು ಮಾಡಬೇಕು? ಈ ವರದಿ‌ ಓದಿ…

ಥೈರಾಯ್ಡ್ ಸಮಸ್ಯೆ ಬಾರದಂತೆ ತಡೆಯಲು ಏನು ಮಾಡಬೇಕು? – ಸಮಸ್ಯೆ ಇದ್ದವರು ಏನು ಮಾಡಬೇಕು? ಈ ವರದಿ‌ ಓದಿ…

ನ್ಯೂಸ್ ಆ್ಯರೋ‌ : ಥೈರಾಯ್ಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಥೈರಾಯ್ಡ್ ಒಮ್ಮೆ ಶುರುವಾದ್ರೆ ಹೋಗೋದಿಲ್ಲ. ಅದನ್ನು ನಿಯಂತ್ರಣದಲ್ಲಿಡಬೇಕು. ಪ್ರತಿ ದಿನ ಮಾತ್ರೆ ಸೇವನೆ ಮಾಡ್ಬೇಕು.

ಥೈರಾಯ್ಡ್ ಸಮಸ್ಯೆ ಹೆಚ್ಚಾದ್ರೆ ಇದ್ರಿಂದ ಮತ್ತೊಂದಿಷ್ಟು ಸಮಸ್ಯೆ ಕಾಡಲು ಶುರುವಾಗುತ್ತದೆ. ಅನೇಕ ಬಾರಿ ರೋಗಿ ಗಂಭೀರ ಸ್ಥಿತಿ ತಲುಪುವುದಿದೆ. ಹಾಗಾಗಿ ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಣದಲ್ಲಿಡಲು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಕಟ್ಟುನಿಟ್ಟಾದ ಡಯಟ್ ನಿಮ್ಮ ಥೈರಾಯ್ಡ್ ನಿಯಂತ್ರಣಕ್ಕೆ ದೊಡ್ಡ ಮಟ್ಟಿಗೆ ನೆರವಾಗುತ್ತದೆ.

ಥೈರಾಯ್ಡ್ ಸಮಸ್ಯೆಯಿರುವವರು ಕೆಲವು ಆಹಾರಗಳಿಂದ ದೂರವಿರಬೇಕು. ಹಾಗೆಯೇ ಕೆಲ ಆಹಾರವನ್ನು ಅವಶ್ಯಕವಾಗಿ ಸೇವನೆ ಮಾಡ್ಬೇಕು. ಥೈರಾಯ್ಡ್ ಸಮಸ್ಯೆ ನಿಮಗೂ ಕಾಡ್ತಿದ್ದರೆ ಕೆಲವು ಜ್ಯೂಸ್‌ಗಳನ್ನು ಸೇವನೆ ಮಾಡುವ ಮೂಲಕವೂ ನೀವು ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡಬಹುದು. ಥೈರಾಯ್ಡ್ ನಿಯಂತ್ರಣ ಮಾಡಲು ಸಹಾಯ ಮಾಡುವ ಜ್ಯೂಸ್ ಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಥೈರಾಯ್ಡ್ ಸಮಸ್ಯೆ ಕಡಿಮೆ ಮಾಡುವ ಜ್ಯೂಸ್ :

ಥೈರಾಯ್ಡ್ ನಲ್ಲಿ ಎರಡು ವಿಧಾನವಿದೆ. ಒಂದು ವಿಧಾನದಲ್ಲಿ ತೂಕ ಹೆಚ್ಚಾಗಲು ಶುರುವಾಗುತ್ತದೆ. ತೂಕ ಹೆಚ್ಚಾಗ್ತಿದ್ದಂತೆ ಅನೇಕರು ಥೈರಾಯ್ಡ್ ಪರೀಕ್ಷೆ ಮಾಡಿಸಿದ್ದೀರಾ ಎಂದು ಪ್ರಶ್ನೆ ಮಾಡುವುದನ್ನು ನೀವು ಕೇಳಿರಬಹುದು. ಥೈರಾಯ್ಡ್ ನ ಈ ಸಮಸ್ಯೆಯಿಂದ ದೂರವಿರಲು ಹೆಚ್ಚಿನ ಜನರು ಔಷಧಿಗಳ ಮೊರೆ ಹೋಗ್ತಾರೆ. ನಿಯಮತಿವಾಗಿ ಔಷಧಿ ಸೇವನೆ ಮಾಡಬೇಕಾಗುತ್ತದೆ. ಔಷಧಿ ತೆಗೆದುಕೊಳ್ಳದೆ ಹೋದ್ರೆ ಥೈರಾಯ್ಡ್ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹಾಗಾಗಿಯೇ ಅನೇಕರು ಥೈರಾಯ್ಡ್ ನಿಯಂತ್ರಣದಲ್ಲಿಡಲು ತಮ್ಮ ಆಹಾರವನ್ನು ಬದಲಾಯಿಸುವ ಪ್ರಯತ್ನವನ್ನು ಮಾಡ್ತಾರೆ. ಯಾವುದೇ ಆಹಾರದಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯ (Doctor) ರನ್ನು ಸಂಪರ್ಕಿಸಬೇಕು.

ಸೋರೆಕಾಯಿ ಜ್ಯೂಸ್

ಥೈರಾಯ್ಡ್ ಸಮಸ್ಯೆಯಿದ್ದು, ಆಹಾರದಿಂದ ಇದನ್ನು ನಿಯಂತ್ರಣದಲ್ಲಿ ಇಡುತ್ತೇವೆ ಎನ್ನುವವರು ಸೋರೆಕಾಯಿ ಜ್ಯೂಸ್ ಕೂಡ ಕುಡಿಯಬಹುದು. ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಬಾಟಲ್ ಸೋರೆಕಾಯಿಯು ಎಲ್ಲಾ ಜನರಿಗೂ ಒಳ್ಳೆಯದು. ಆದರೆ ನೀವು ಥೈರಾಯ್ಡ್ ಸಮಸ್ಯೆ ಹೊಂದಿದ್ದರೆ, ನಿಮ್ಮ ಡಯಟ್ ನಲ್ಲಿ ಸೋರೆಕಾಯಿ ರಸವನ್ನು ಖಂಡಿತವಾಗಿ ಸೇರಿಸಿ. ಇದನ್ನು ಕುಡಿಯುವುದರಿಂದ ಥೈರಾಯ್ಡ್ ನಿಯಂತ್ರಣಕ್ಕೆ ಬರುವ ಶುರುವಾಗುತ್ತದೆ ಎಂದು ತಜ್ಞರು ಹೇಳ್ತಾರೆ.

ಹೈಸಿಂತ್ ಜ್ಯೂಸ್

ಹೈಸಿಂತ್ ರಸವು ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಹೈಸಿಂತ್ ರಸವು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಹೈಸಿಂತ್ ಜ್ಯೂಸ್ ಮಾಡಲು ಎರಡು ಕಪ್ ಹೈಸಿಂತ್ ಎಲೆಗಳು ಮತ್ತು 2 ಸೇಬು ಹಣ್ಣನ್ನು ಚೆನ್ನಾಗಿ ತೊಳೆದು ಕತ್ತರಿಸಿ. ಈ ಎರಡನ್ನೂ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಸಾಧ್ಯವಾದರೆ, 1 ಚಮಚ ನಿಂಬೆ ರಸವನ್ನು ಮಿಕ್ಸ್ ಮಾಡಿ ಮತ್ತು ಸೇವಿಸಿ. ಇದನ್ನು ಸೇವಿಸುವುದರಿಂದ ನಿಮ್ಮ ತೂಕವೂ ಕಡಿಮೆಯಾಗುತ್ತದೆ. ಥೈರಾಯ್ಡ್ ಸಮಸ್ಯೆ ಕಡಿಮೆಯಾಗುತ್ತದೆ.

ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ನಲ್ಲಿದೆ ಥೈರಾಯ್ಡ್ ನಿಯಂತ್ರಣದ ಶಕ್ತಿ ಇದ್ದು, ಈ ಎರಡು ಜ್ಯೂಸ್ ಥೈರಾಯ್ಡ್ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿ ರಕ್ತ ಹೆಚ್ಚಿ ಕಬ್ಬಿಣಾಂಶದ ಕೊರತೆ ನೀಗುತ್ತದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *