ನನ್ನ ಮಗ ಕ್ರಿಕೆಟರ್ ಆಗೋದು ನನಗಿಷ್ಟವಿಲ್ಲ ಎಂದ ಯುವರಾಜ್ ಸಿಂಗ್..! – ಯುವಿ ನೀಡಿದ ಶಾಕಿಂಗ್ ಕಾರಣ ಏನ್ ಗೊತ್ತಾ?

ನನ್ನ ಮಗ ಕ್ರಿಕೆಟರ್ ಆಗೋದು ನನಗಿಷ್ಟವಿಲ್ಲ ಎಂದ ಯುವರಾಜ್ ಸಿಂಗ್..! – ಯುವಿ ನೀಡಿದ ಶಾಕಿಂಗ್ ಕಾರಣ ಏನ್ ಗೊತ್ತಾ?

ನ್ಯೂಸ್ ಆ್ಯರೋ : ಡಾಕ್ಟರ್ ಮಗ ಡಾಕ್ಟರ್, ಎಂಜಿನಿಯರ್ ಮಗ ಎಂಜಿನಿಯರ್ ಎನ್ನುವ ಕಾಲ ಈಗಿಲ್ಲ. ಆದರೂ ಸೂಪರ್ ಸ್ಟಾರ್ ಗಳು ತಮ್ಮ ಮಕ್ಕಳೂ ತಮ್ಮಂತೆ ಆಗಬೇಕು ಎನ್ನುವ ಅಸೆ ಇಟ್ಟುಕೊಂಡಿರುತ್ತಾರೆ. ಆದರೆ ಈಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನೀಡಿರುವ ಹೇಳಿಕೆ ಈಗ ಕ್ರೀಡಾ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ.

ಭಾರತದ ಕ್ರಿಕೆಟ್ ತಂಡದ ಅಲ್ ರೌಂಡರ್ ಆಗಿ ಖ್ಯಾತಿ ಗಳಿಸಿದ್ದ ಯುವರಾಜ್ ಸಿಂಗ್ ವಯಕ್ತಿಕ ಬದುಕಿನಲ್ಲಿ ಮತ್ತು ಕ್ರೀಡಾ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಗೆದ್ದವರು. ಅವರೀಗ ತಮ್ಮ ಮಗ ಕ್ರಿಕೆಟಿಗನಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

17 ವರ್ಷಗಳ ಕಾಲ ವೃತ್ತಿಜೀವನದಲ್ಲಿ 40 ಟೆಸ್ಟ್, 304 ಏಕದಿನ ಮತ್ತು 58 ಟಿ 20 ಪಂದ್ಯಗಳನ್ನು ಆಡಿರುವ ಯುವರಾಜ್ ಟೆಸ್ಟ್​​ನಲ್ಲಿ 1900 ರನ್, ಏಕದಿನದಲ್ಲಿ 8701 ರನ್ ಮತ್ತು ಟಿ 20ಐನಲ್ಲಿ 1177 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಹೀಗಿರುವ ಅವರ ಈ ಹೇಳಿಕೆ ಸಹಜವಾಗಿ ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದೆ.

ವಿಶ್ವ ಕ್ರಿಕೆಟ್​ನಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಯುವರಾಜ್ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದರೂ ಅವರು ತಮ್ಮ ಮಗ ಓರಿಯನ್ ಕ್ರಿಕೆಟಿಗನಾಗುವುದಕ್ಕೆ ಬಯಸುವುದಿಲ್ಲ ಎಂದಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಮಾಧ್ಯಮಗಳು ಮತ್ತು ಸಾರ್ವಜನಿಕರು ಕ್ರಿಕೆಟಿಗರ ಮಕ್ಕಳ ಮೇಲೆ ಸಾಕಷ್ಟು ಒತ್ತಡ ಹೇರುತ್ತಾರೆ. ಅದು ಅವರ ಜೀವನವನ್ನು ಕಠಿಣಗೊಳಿಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನನ್ನ ಮಗ ಕ್ರಿಕೆಟಿಗನಾಗುವುದು ನನಗೆ ಇಷ್ಟವಿಲ್ಲ. ವಿಶೇಷವಾಗಿ ಕ್ರಿಕೆಟಿಗರ ಮಕ್ಕಳ ಮೇಲೆ ಮಾನಸಿಕ ಒತ್ತಡವು ತುಂಬಾ ಇದೆ ಎಂದು ನಾನು ಭಾವಿಸುತ್ತೇನೆ. ಸದಾ ಅವರನ್ನು ಹೆತ್ತವರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಇದರಿಂದ ಅವರಿಗೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಮಗನಿಗೆ ಗಾಲ್ಫ್ ಇಷ್ಟವಿದೆ. ಈಗಲೇ ಆತ ಕೆಲವು ಶಾಟ್​ಗಳನ್ನು ಕಲಿತಿದ್ದಾನೆ ಎಂದ ಅವರು, ನನಗೂ ಗಾಲ್ಫ್ ಇಷ್ಟ ಎಂದು ತಿಳಿಸಿದ್ದಾರೆ.

ಮಗನಿಗಾಗಿ ಪ್ಲಾಸ್ಟಿಕ್ ಗಾಲ್ಫ್ ಸೆಟ್ ಖರೀದಿಸಿದ್ದೇನೆ ಎಂದಿರುವ ಅವರು, ಕೆಲವು ವಿಷಯಗಳು ಮಕ್ಕಳಿಗೆ ಪೋಷಕರಿಂದ ನೈಸರ್ಗಿಕವಾಗಿಯೇ ಬರುತ್ತದೆ ಎಂದು ನಂಬಿದ್ದೇನೆ. ಹಾಗೆ ಒಂದು ವೇಳೆ ಆದರೆ ನನ್ನ ಮಗ ಕ್ರಿಕೆಟಿಗನಾಗಲು ಬಯಸಿದರೆ ನಾನು ಖಂಡಿತವಾಗಿಯೂ ಅವನನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.

Related post

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…
ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…

Leave a Reply

Your email address will not be published. Required fields are marked *