
ಸಮುದ್ರದ ತಳದಲ್ಲಿ ಸಿಕ್ಕಿತು 30 ಸಾವಿರ ವರ್ಷಗಳ ಹಿಂದಿನ ನಾಣ್ಯಗಳು – ಸಿಕ್ಕಿದ್ದು ಎಲ್ಲಿ? ಎಷ್ಟು ಸಿಕ್ತು ಗೊತ್ತಾ?
- ಸತ್ಯಾನ್ವೇಷಣೆ
- November 10, 2023
- No Comment
- 110
ನ್ಯೂಸ್ ಆ್ಯರೋ : ಈ ಜಗತ್ತು ಒಂದು ಕುತೂಹಲ. ಎಲ್ಲಿ, ಏನಿದೆ ಎನ್ನುವುದರ ಸ್ಪಷ್ಟ ಮಾಹಿತಿ ಶೋಧಿಸುವುದು ಪರಿಪೂರ್ಣವಾಗಿ ಇನ್ನು ವಿಜ್ಞಾನಿಗಳಿಗೆ ಆಗಿಲ್ಲ. ಹೀಗಾಗಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇದೆ.
ಹೀಗೆ ಸಂಶೋಧನೆ ಮಾಡಲು ಹೊರಟವರಿಗೆ ಸಮುದ್ರದ ಆಳದಲ್ಲಿ ಬಂಗಾರದ ನಾಣ್ಯಗಳು ಸಿಕ್ಕಿವೆ. ಸಾವಿರಾರು ವರ್ಷಗಳ ಹಿಂದಿನ ಕಥೆಯನ್ನು ಇದು ಹೇಳುತ್ತಿವೆ.
ಸುಮಾರು 30,000 ಕ್ಕಿಂತಲೂ ಹೆಚ್ಚು ಪ್ರಾಚೀನವಾದ ನಾಣ್ಯಗಳು ಇಟಲಿಯ ಸಾರ್ಡಿನಿಯಾದ ಅರ್ಜಾಚೆನಾ ಪಟ್ಟಣದ ಸಮೀಪದ ಸಮುದ್ರದಡಿಯಲ್ಲಿ ಸಿಕ್ಕಿದ್ದು, ಇದು 4ನೇ ಶತಮಾನದ ಮೊದಲಾರ್ಧಕ್ಕೆ ಸೇರಿದ್ದು ಎನ್ನಲಾಗಿದೆ. ಕಂಚಿನ ಎರಕ ಹಾಕಿ ಮಾಡಿರುವ ಈ ನಾಣ್ಯಗಳ ಮೇಲೆ ದಿನಾಂಕ 324 ಎಡಿ ರಿಂದ 346 ಎಡಿ ಎಂದು ನಮೂದಿಸಲಾಗಿದೆ.
ಸಮುದ್ರದಲ್ಲಿ ನೌಕಾಘಾತ ಸಂಭವಿಸಿ ನೌಕೆಯಲ್ಲಿ ಸಾಗಿಸುತ್ತಿದ್ದ ಈ ನಾಣ್ಯಗಳು ನೀರುಪಾಲಾಗಿರಬಹುದು ಎಂದು ಊಹಿಸಲಾಗಿದೆ.
ಸಮುದ್ರದಾಳದಲ್ಲಿ ನಾಣ್ಯಗಳು ಸಿಕ್ಕಿರುವ ವಿಡಿಯೋವನ್ನು ಸಚಿವಾಲಯವು ಪೋಸ್ಟ್ ಮಾಡಿದ್ದು ಹೆಚ್ಚಿನ ನಾಣ್ಯಗಳು ಮರಳಿನ ಅಡಿಯಲ್ಲಿ ಹೂತು ಹೋಗಿದ್ದವು. ಬಹುತೇಕ ಎಲ್ಲಾ ನಾಣ್ಯಗಳು ಸುರಕ್ಷಿತವಾಗಿವೆ ಮತ್ತು ಅವುಗಳ ಮೇಲಿನ ಶಾಸನಗಳು ಸ್ಪಷ್ಟವಾಗಿವೆ.
ಸಮೀಪದಲ್ಲೇ ಹಡಗಿನ ಅವಶೇಷಗಳ ಅವಶೇಷಗಳು ಇರಬಹುದು. ಇದನ್ನು ಪತ್ತೆಹಚ್ಚುವುದಾಗಿಯೂ ಇಟಲಿಯ ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಸಿಕ್ಕಿರುವ ನಿಧಿಯಲ್ಲಿ 50,000 ಕ್ಕೂ ಹೆಚ್ಚು ನಾಣ್ಯಗಳಿದ್ದು, ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ. ಯುಕೆಯಲ್ಲಿ ಇತ್ತೀಚೆಗೆ ಇಂತಹದ್ದೇ 22,888 ನಾಣ್ಯಗಳು ಪತ್ತೆಯಾಗಿದ್ದವು.