
ಒಂದು ಚಿತ್ರದಿಂದಲೇ 1800 ಕೋಟಿ ಗಳಿಸಿದ್ದ ನಟ ಸದ್ಯ ಪ್ಲಾಪ್ ಸ್ಟಾರ್..! – ಆರು ವರ್ಷಗಳಲ್ಲಿ ಒಂದೇ ಒಂದು ಹಿಟ್ ಚಿತ್ರ ಕೊಟ್ಟಿಲ್ಲ..!
- ಮನರಂಜನೆ
- November 10, 2023
- No Comment
- 49
ನ್ಯೂಸ್ ಆ್ಯರೋ : ವಿಶ್ವದಾದ್ಯಂತ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಗಮನ ಸೆಳೆಯುವಂತೆ ಮಾಡಿದ್ದು ಆ ಒಂದು ಚಿತ್ರ. ಆ ಚಿತ್ರದಿಂದಲೇ ನಟ ಬರೋಬ್ಬರಿ 1800 ಕೋಟಿ ಗಳಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆದರೂ ಬಳಿಕ ಆರು ವರ್ಷದಿಂದ ಆ ನಟನಿಗೆ ಒಂದೇ ಒಂದು ಹಿಟ್ ಸಿನಿಮಾ ನೀಡಲು ಸಾಧ್ಯವಾಗಲಿಲ್ಲ.
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಆ ನಟ ಬೇರಾರೂ ಅಲ್ಲ. ಬಾಹುಬಲಿಯಾಗಿ ಎಲ್ಲರ ಮನ ಗೆದ್ದ ಪ್ರಭಾಸ್.
ಬಾಹುಬಲಿ ಚಿತ್ರದ ಯಶಸ್ಸಿನ ಬಳಿಕ ಕಳೆದ ಆರು ವರ್ಷಗಳಲ್ಲಿ ಪ್ರಭಾಸ್ ಅವರ ಯಾವುದೇ ಸಿನಿಮಾ ಹಿಟ್ ಆಗಿಲ್ಲ. ಉಪ್ಪಲಪತಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು ಅವರು ತೆಲುಗು ಚಿತ್ರ ರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಇವರು 2015 ರಿಂದ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
2002 ರಲ್ಲಿ ಈಶ್ವರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ಇವರ ಎರಡನೇ ಚಿತ್ರ ‘ರಾಘವೇಂದ್ರ’ ಬಾಕ್ಸ್ ಆಫೀಸ್‌ನಲ್ಲಿ ಸೋತಿತು. ಸಾಹಸ ಪ್ರಣಯ ವರ್ಷಮ್ (2004) ಚಿತ್ರದ ಮೂಲಕ ಯಶಸ್ಸು ಪಡೆದ 2015ರಲ್ಲಿ ‘ಬಾಹುಬಲಿ: ದಿ ಬಿಗಿನಿಂಗ್’ ಅನ್ನು ಮಾಡಿದರು. ಇದು ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಅತೀ ಹೆಚ್ಚು ಗಳಿಕೆಯ ಹದಿಮೂರನೇ ಭಾರತೀಯ ಚಲನಚಿತ್ರವಾಗಿ ಗುರುತಿಸಿಕೊಂಡಿತು.
ಇನ್ನು ಬಾಹುಬಲಿ 2: ದಿ ಕನ್‌ಕ್ಲೂಷನ್ (2017) ಸಾರ್ವಕಾಲಿಕವಾಗಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಗುರುತಿಸಿಕೊಂಡಿತು.
ಇದರ ಯಶಸ್ಸಿನ ಬಳಿಕ ಪ್ರಭಾಸ್ ಕಳೆದ ಆರು ವರ್ಷಗಳಿಂದ ಒಂದೇ ಒಂದು ಹಿಟ್ ಚಿತ್ರವನ್ನು ಕೊಟ್ಟಿಲ್ಲ. ಆದಿಪುರುಷ, ರಾಧೆ ಶ್ಯಾಮ್, ಸಾಹೋ.. ಹೀಗೆ ಸಾಲುಸಾಲು ಪ್ಲಾಪ್ ಸಿನಿಮಾಗಳೇ ಸೂಪರ್ ಸ್ಟಾರ್ ನ ಪಟ್ಟಿಯಲ್ಲಿದೆ.