
ಮಹಮ್ಮದ್ ಶಮಿಗೆ ಮದುವೆ ಪ್ರಪೋಸ್ ಮಾಡಿದ ನಟಿ ಪಾಯಲ್ ಘೋಷ್ – ಆದ್ರೆ ಒಂದೇ ಒಂದು ಷರತ್ತು ಇದ್ಯಂತೆ..! ಏನದು?
- ಮನರಂಜನೆ
- November 10, 2023
- No Comment
- 112
ನ್ಯೂಸ್ ಆ್ಯರೋ : ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ವಿವಾಹವಾಗುವುದಾಗಿ ಬಹುಭಾಷಾ ನಟಿ ಪಾಯಲ್ ಘೋಷ್ ಹೇಳಿದ್ದು, ಆದರೆ ಇದಕ್ಕೆ ಅವರು ಒಂದು ಷರತ್ತು ವಿಧಿಸಿದ್ದಾರೆ.
ಮೊಹಮ್ಮದ್ ಶಮಿಯ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಟಿ ಪಾಯಲ್ ಅವರ ಮುಂದೆ ಮದುವೆಯ ಪ್ರಸ್ತಾಪವನ್ನು ಇಟ್ಟು ಈಗ ಸುದ್ದಿಯಾಗಿದ್ದಾರೆ.
ಇದಕ್ಕಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿದ್ದು ಈಗ ವೈರಲ್ ಆಗಿದೆ. ಶಮಿ ಅವರೇ ನೀವು ಸೆಮಿಫೈನಲ್‌ನಲ್ಲಿ ಹೀರೋ ಆಗುವುದನ್ನು ನಾನು ನೋಡಬೇಕು. ಒಂದು ವೇಳೆ ನೀವು ಇಂಗ್ಲಿಷ್ ಕಲಿತರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧಳಿದ್ದೇನೆ ಎಂದು ಅವರು ಬಹಿರಂಗವಾಗಿಯೇ ಮದುವೆ ಪ್ರಪೋಸಲ್ ಅನ್ನು ಕೊಟ್ಟಿದ್ದಾರೆ.
ಮೀ ಟೂ ಅಭಿಯಾನದ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದ ಪಾಯಲ್ ಘೋಷ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.
ಶಮಿ ಅವರ ಅಸಾಧಾರಣ ಪ್ರದರ್ಶನದ ಬಗ್ಗೆ ಕ್ರೀಡಾ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿದ್ದರೂ ಅವರ ವಿಚ್ಛೇದಿತ ಪತ್ನಿ 2018 ರಿಂದ ಶಮಿ ದೂರವಾಗಿರುವ ಹಸೀನ್ ಜಹಾನ್, ನಾನು ಕ್ರಿಕೆಟ್ ಮತ್ತು ಕ್ರಿಕೆಟಿಗರ ಅಭಿಮಾನಿಯಲ್ಲ. ಆದರೂ ಶಮಿ ಉತ್ತಮ ಪ್ರದರ್ಶನ ನೀಡಿದರೆ, ಭಾರತೀಯ ತಂಡದಲ್ಲಿ ಉಳಿಯುತ್ತಾರೆ. ಅವರು ಉತ್ತಮವಾಗಿ ಸಂಪಾದಿಸುತ್ತಾರೆ. ಅದು ಕುಟುಂಬದ ಭವಿಷ್ಯಕ್ಕೆ ಒಳ್ಳೆಯದು ಎಂದು
ಹೇಳಿದ್ದರು.