ಸಂಗಾತಿಯೊಂದಿಗೆ ಆಗಾಗ ಮನಸ್ತಾಪಗಳು ಬರುತ್ತಿದೆಯೇ? – ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ, ಮುನಿಸಿಗೆ ಬೈ ಹೇಳಿ

ಸಂಗಾತಿಯೊಂದಿಗೆ ಆಗಾಗ ಮನಸ್ತಾಪಗಳು ಬರುತ್ತಿದೆಯೇ? – ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ, ಮುನಿಸಿಗೆ ಬೈ ಹೇಳಿ

ನ್ಯೂಸ್ ಆ್ಯರೋ : ಸಂಬಂಧಗಳು ನೀರಿನ ಮೇಲಿನ ಗುಳ್ಳೆಗಳಿದ್ದಂತೆ. ಒಂದು ಬಾರಿ ಒಡೆದರೆ ಸರಿಪಡಿಸಲಾಗದಷ್ಟು ಅನರ್ಥಗಳಾಗುತ್ತವೆ. ಒಂದು ಸಣ್ಣ ತಪ್ಪು ತಿಳುವಳಿಕೆ ಜೀವನದ ಅಡಿಪಾಯನ್ನೇ ಅಲುಗಾಡಿಸಬಹುದು. ಹೀಗಾಗಿ ಸಂಗಾತಿಯೊಂದಿಗಿನ ಸಂಬಂಧವನ್ನು ಜತನವಾಗಿ ಕಾಪಿಟ್ಟುಕೊಳ್ಳುವತ್ತ ಹೆಚ್ಚಿನ ಗಮನ ನೀಡಿ.

ಬದುಕಿನ ಭಾಗವಾಗಿರುವ ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಅರಿತುಕೊಳ್ಳಿ, ನಂಬಿಕೆಯನ್ನು ಗಳಿಸಿ ಇದು ನಿಮ್ಮ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇಬ್ಬರ ನಡುವೆ ಪ್ರೀತಿಯ ಬುನಾದಿ ಗಟ್ಟಿಯಾಗಿದ್ದರೆ ಎಂತಹದ್ದೇ ಸಂದರ್ಭ ಬಂದರೂ ಎದುರಿಸಿ ಸರಿಪಡಿಸಿಕೊಳ್ಳಬಹುದು. ಬದುಕು ಒಂದು ಸುಂದರ ಪಯಣ. ಆದರೆ ಅದನ್ನು ನೋಡುವ ರೀತಿ ಬೇರೆ ಬೇರೆ ಅಷ್ಟೆ. ಹೀಗಾಗಿ ಧನಾತ್ಮಕ ಚಿಂತನೆಗಳೊಂದಿಗೆ ಜೀವನ ನಡೆಸಿ.

ಗಂಡ ಹೆಂಡತಿ ಎಂದರೆ ಚಕ್ಕಡಿ ಗಾಡಿಯ ಎತ್ತುಗಳಿದ್ದಂತೆ. ಇಬ್ಬರ ನಡುವಿನ ಯೋಚನಾ ಲಹರಿ ಸರಿಯಾದ ರೀತಿಯಲ್ಲಿ, ಸರಿಯಾದ ದಾರಿಯಲ್ಲಿ ಸಾಗಿದರೆ ಮಾತ್ರ ಗುರಿಯನ್ನು ತಲುಪಬಲ್ಲವು. ಲಗಾಮಿಲ್ಲದ ಬದುಕಾದರೆ ಬಿರುಕು ಸಹಜ. ಸಂಗಾತಿಯೊಂದಿಗೆ ಆಗಾಗ ಮನಸ್ಥಾಪಗಳು ಬರುವುದು ಸಹಜ ಅದನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ನಿಮ್ಮಲ್ಲಿರಬೇಕು. ಆಗ ಮಾತ್ರ ಬದುಕಿನ ಖುಷಿಯ ಬಾಗಿಲು ತೆರೆದುಕೊಳ್ಳುತ್ತದೆ. ಹಾಗಾದರೆ ಸಂಗಾತಿಯೊಂದಿಗಿನ ಸುಂದರ ಬದುಕು ಸಾಗಿಸಬೇಕು ಎಂದುಕೊಳ್ಳುತ್ತಿರುವವರು ಈ ಟಿಪ್ಸ್ ಗಳನ್ನು ಫಾಲೋ ಮಾಡಿ.

ಅಭಿನಂದಿಸುವುದನ್ನು ಅಭ್ಯಸಿಸಿಕೊಳ್ಳಿ
ಇಬ್ಬರಲ್ಲೂ ಒಬ್ಬರಿಗೊಬ್ಬರನ್ನು ಅಭಿನಂದಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮಿಬ್ಬರ ನಡುವಿನ ಖುಷಿ ಹೆಚ್ಚಿಸುತ್ತದೆ. ಸಂಗಾತಿಯ ಕೆಲಸಗಳನ್ನು ಗುರುತಿಸಿ ಶ್ಲಾಘಿಸಿದರೆ ಅವರ ಖುಷಿ ಇಮ್ಮಡಿಗೊಳ್ಳುತ್ತದೆ. ನಿಮ್ಮ ಒಂದು ಅಭಿನಂದನೆ ಅಥವಾ ಧನ್ಯವಾದ ಅವರನ್ನು ಹೊಸ ಉತ್ಸಾಹಕ್ಕೆ ಕರೆದೊಯ್ಯತ್ತದೆ. ಅಲ್ಲದೆ ನಿಮ್ಮಿಬ್ಬರ ನಡುವಿನ ನಂಬಿಕೆ ಗಟ್ಟಿಗೊಳ್ಳುತ್ತದೆ.

ಮುಕ್ತವಾಗಿ ಚರ್ಚಿಸಿ
ಸಂಬಂಧಗಳ ನಡುವೆ ಮುಕ್ತ ಚರ್ಚೆಗೆ ಅವಕಾಶವಿರಬೇಕು. ಆಗ ಮಾತ್ರ ದೃಢವಾದ ನಂಬಿಕೆ ಬೆಳೆಯುತ್ತದೆ. ಯಾವುದೇ ವಿಚಾರಗಳಿರಲಿ ಅದರ ಬಗ್ಗೆ ನೀವು ಅಂದುಕೊಂಡಷ್ಟನ್ನೂ ನಿಮ್ಮ ಸಂಗಾತಿಯೆದುರು ತೆರೆದಿಡಿ. ಸಂಗಾತಿ ನಿಮ್ಮ ಜೀವನದ ಕನ್ನಡಿಯಾಗಿರುತ್ತಾರೆ. ನಿಮ್ಮಲ್ಲಿನ ನೋವು, ಖುಷಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಿ. ವಿಷಯ ಎಷ್ಟೇ ಚಿಕ್ಕದಿರಲಿ ಅದನ್ನು ಮುಕ್ತವಾಗಿ ಚರ್ಚಿಸಿ, ಗೊತ್ತಿಲ್ಲದ್ದನ್ನು ತಿಳಿಸಿ ಹೇಳಿ ಅಥವಾ ಅವರಿಂದ ತಿಳಿದುಕೊಳ್ಳಿ. ಆಗ ಮನಸ್ತಾಪಗಳಿಗೆ ಅವಕಾಶವೇ ಇರುವುದಿಲ್ಲ.

ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿ
ನಿಮ್ಮ ಜೀವನದಲ್ಲಿ ಸಂಗಾತಿಯೊಂದಿಗೆ ನೀವು ತೆರೆದ ಪುಸ್ತಕದಂತಿರಬೇಕು. ಆಗ ಮಾತ್ರ ಬದುಕ ಬಂಡಿ ಸುಲಲಿತವಾಗುವುದು. ನೀವು ಮಾಡಿದ ಅಥವಾ ಮಾಡುವ ಯಾವುದೇ ಕೆಲಸಗಳಿರಲಿ ಅಥವಾ ಮುಂದೆ ಮಾಡಬೇಕೆಂದಿರುವ ಯೋಜನೆಗಳಿರಲಿ ಅದರ ಬಗ್ಗೆ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿ. ಕೆಲವೊಮ್ಮೆ ನೀವು ನೋಡುವ ದೃಷ್ಟಿ ಕೋನಕ್ಕೂ, ವಿಷಯದ ಬಗೆಗೆ ನಿಮ್ಮ ಸಂಗಾತಿ ನೋಡುವ ದೃಷ್ಟಿಕೋನಕ್ಕೂ ವ್ಯತ್ಯಾಸವಿರಬಹುದು. ಚರ್ಚಿಸಿದಾಗ ಅದು ತಿಳಿಯುತ್ತದೆ. ಇದರಿಂದ ನಿಮ್ಮ ಯೋಜನೆಗಳಿಗೆ ಇನ್ನಷ್ಟು ಪುಷ್ಟಿ ನೀಡುವ ಅಂಶಗಳು ದೊರೆಯಬಹುದು. ಅಲ್ಲದೆ ಅಭಿಪ್ರಾಯ ಅಥವಾ ಸಲಹೆಗಳನ್ನು ಕೇಳುವುದರಿಂದ ಅವರಿಗೂ ಪ್ರಾಮುಖ್ಯತೆ ನೀಡಿದಂತಾಗುತ್ತದೆ.

ಮನೆಕೆಲಸಗಳಲ್ಲಿ ನೆರವಾಗಿ

ಇತ್ತೀಚಿನ ಅಧ್ಯಯನಗಳ ಪ್ರಕಾರ ದಂಪತಿಯ ನಡುವೆ ಮನಸ್ತಾಪಗಳು ಹುಟ್ಟಿಕೊಳ್ಳುವುದೇ ಮನೆಕೆಲಸಗಳ ಅಥವಾ ಮನೆಯ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ. ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಅಗತ್ಯ. ಯಾವ ಕೆಲಸವೂ ಯಾರೊಬ್ಬರಿಗೇ ಸೀಮಿತವಲ್ಲ. ಹೀಗಾಗಿ ಮನೆಯ ಕೆಲಸಗಳಲ್ಲಿ ನೆರವಾಗಿ. ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಿ. ಮುಕ್ತವಾಗಿ, ಬಿಗುಮಾನವಿಲ್ಲದೆ ಮಾತನಾಡಿದರೆ ಎಲ್ಲಾ ವಿಷಯಗಳ ನಡುವೆ ಆದ ಮನಸ್ತಾಪಗಳಿಗೆ ಅಂತ್ಯ ಹಾಡಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *