ಬಾಳೆದಿಂಡಿನ ಜ್ಯೂಸ್‌ ಸೇವನೆಯಿಂದ ಹೆಚ್ಚುತ್ತೆ ಆರೋಗ್ಯ – ಏನೆಲ್ಲಾ ಉಪಯೋಗಗಳಿವೆ ಗೊತ್ತಾ?

ಬಾಳೆದಿಂಡಿನ ಜ್ಯೂಸ್‌ ಸೇವನೆಯಿಂದ ಹೆಚ್ಚುತ್ತೆ ಆರೋಗ್ಯ – ಏನೆಲ್ಲಾ ಉಪಯೋಗಗಳಿವೆ ಗೊತ್ತಾ?

ನ್ಯೂಸ್ ಆ್ಯರೋ : ಒಂದು ಬಾಳೆಯ ಮರ ಮನೆಯ ಪಕ್ಕದಲ್ಲಿದ್ದರೆ ನಾನಾ ರೀತಿಯ ಉಪಯೋಗಗಳು ಇದೆ ಎನ್ನುವುದು ಹಿಂದಿನಿಂದಲೂ ಹಿರಿಯರು ಹೇಳಿಕೊಂಡು ಬಂದಿರುವ ಮಾತು. ಕೇವಲ ಬಾಳೆ ಹಣ್ಣು, ಬಾಳೆ ಎಲೆ ಅಷ್ಟಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಬದಲಿಗೆ, ಬಾಳೆ ಮರದ ದಂಟು ಅಥವಾ ದಿಂಡು ಕೂಡ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಬಾಳೆ ದಿಂಡು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಿದ್ದು, ಬಾಳೆ ಮರದ ಮಧ್ಯಭಾಗವನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.


ಬಾಳೆ ಮರದ ಮೇಲೆ ಸೊನೆ ಇರುತ್ತದೆ ಅದನ್ನು ತಿನ್ನುವುದು ಹೇಗೆ ಎನ್ನುವುದು ಹಲವರಿಗೆ ಗೊಂದಲ ಇರಬಹುದು. ಆದರೆ ಬಾಳೆ ಮರವನ್ನು ಮಧ್ಯಕ್ಕೆ ಕಡಿದು ಅದರ ಸುರುಳಿಗಳನ್ನು, ಒಳಗಿನ ಬಿಳಿ ಅಂಶ ಕಾಣುವವವರೆಗೆ ಬಿಡಿಸಬೇಕು. ಯಾವಾಗ ಬಿಳಿಯ ದಿಂಡು ಕಾಣುತ್ತದೆ, ಆಗ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಈ ರೀತಿಯ ಬಿಳಿ ಬಣ್ಣದ ಬಾಳೆ ದಿಂಡು ಆರೋಗ್ಯಕರವಾದ ಬಳಕೆಗೆ ಸಾಕ್ಷಿಯಾಗುತ್ತದೆ.

ಬಾಳೆ ದಿಂಡು ಮತ್ತು ಆರೋಗ್ಯ

ಬಾಳೆ ದಿಂಡಿನ ಪಲ್ಯ:

ಸಾಮಾನ್ಯವಾಗಿ ಬಾಳೆ ದಿಂಡಿನ ಪಲ್ಯವನ್ನು ವರ್ಷಕ್ಕೆ ಎರಡು ಬಾರಿಯಾದರೂ ತಿನ್ನಲೇಬೇಕು ಎನ್ನುವ ಮಾತು ಇದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡುವ ಪಲ್ಯ. ಪಲ್ಯವನ್ನು ಮಾಡಿ ತಿನ್ನುವುದರಿಂದ ಹೊಟ್ಟೆ ಭಾಗಕ್ಕೆ ತುಂಬಾ ಒಳಿತು. ಉಗುರು ತಿನ್ನುವ ಅಭ್ಯಾಸ ಇರುವವರು ಇದನ್ನು ತಿನ್ನಲೇ ಬೇಕು ಮತ್ತು ಹೊಟ್ಟೆ ನೋವು, ಮಲಬದ್ಧತೆ, ಹೊಟ್ಟೆಯಲ್ಲಿನ ಕಲ್ಮಶ ಅಥವಾ ಹೊಟ್ಟೆಯಲ್ಲಿ ಕೂದಲು ಸೇರಿಕೊಂಡಿದ್ದರೆ ಇದು ಎಲ್ಲವನ್ನು ಶುದ್ಧ ಮಾಡುತ್ತದೆ.

ಇನ್ನು ಬಾಳೆ ನಾರಿನಾಂಶವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಕೂಡ ಸಹಕಾರಿಯಾಗಿದೆ. ಆ ಮೂಲಕ ಹೊಟ್ಟೆ ಉಬ್ಬರಿಸುವುದು ಸೇರಿ ಇನ್ನಿತರ ಕಾಯಿಲೆಯಿಂದ ನಮ್ಮನ್ನು ರಕ್ಷಿಸಲು ಬಾಳೆ ದಿಂಡು ಸಹಕಾರಿಯಾಗಿದೆ.

ಬಾಳೆ ದಿಂಡಿನ ಜ್ಯೂಸ್:

ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು. ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ. ಬಾಳೆ ದಿಂಡನ್ನು ಬಿಡಿಸಿ ರುಬ್ಬಿ ಅದರ ರಸವನ್ನು ತೆಗೆದು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಮಾಯವಾಗುತ್ತದೆ. ರಕ್ತಹೀನತೆಯನ್ನು ಕೂಡ ಇದು ದೂರ ಮಾಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಟಮಿನ್ ಬಿ 6 ಕೂಡ ಹೇರಳವಾಗಿದೆ. ಅಲ್ಲದೆ ಇದರಲ್ಲಿ ಫೈಬರ್ ಅಂಶವು ಕೂಡ ಇದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಕೊರೊನಾ ಎರಡನೇ ಅಲೆಯ ಈ ಕಾಲಘಟ್ಟದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ. ಇದಕ್ಕೆ ಬಾಳೆ ದಿಂಡು ಪುಷ್ಠಿ ನೀಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ರೋಗನಿರೋಧಕ ಶಕ್ತಿ ಇದೆ. ಅಲ್ಲದೆ ಬಾಳೆ ದಿಂಡನ್ನು ಸೇವಿಸುವುದರಿಂದ ತೂಕವನ್ನು ಸಮತೋಲನಗೊಳಿಸಬಹುದು. ಇದು ಮೈಯಲ್ಲಿನ ಕೊಬ್ಬಿನಾಂಶವನ್ನು ದೂರ ಮಾಡಿ ಆರೋಗ್ಯಯುಕ್ತ ಜೀವನ ನಡೆಸಲು ಸಹಕಾರಿಯಾಗಿದೆ. 100 ಗ್ರಾಮ್ ಬಾಳೆ ದಿಂಡಿನಲ್ಲಿ 13 ಕ್ಯಾಲೋರಿ, 2 ಗ್ರಾಮಿನಷ್ಟು ಕಾರ್ಬೋಹೈಡ್ರೇಟ್ಸ್, ಒಂದು ಗ್ರಾಮ್ ನಷ್ಟು ಡಯೇಟ್ರಿ ಫೈಬರ್ ಇರುತ್ತದೆ. ಇದು ಚರ್ಮ ಮತ್ತು ಕೂದಲಿಗೆ ಕೂಡ ಒಳ್ಳೆಯದು.

Related post

‘ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ’?; ನಟಿ ಜ್ಯೋತಿ ರೈ ಸವಾಲು ಹಾಕಿದ್ಯಾರಿಗೆ…?

‘ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ’?; ನಟಿ ಜ್ಯೋತಿ…

ನ್ಯೂಸ್ ಆರೋ: ಕನ್ನಡದ ಖ್ಯಾತ ಸೀರಿಯಲ್ ನಟಿ ಜ್ಯೋತಿ ರೈ ಅಕ್ಷಯ ತೃತೀಯ ದಿನದಂದು ಕೆಲವೊಂದು ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ಅಶ್ಲೀಲ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ…
ಕೊಡಗು ವಿದ್ಯಾರ್ಥಿನಿಯ ತಲೆ ಕಡಿದು ಹತ್ಯೆ ಮಾಡಿದ ಆರೋಪಿ ಅಂದರ್..!

ಕೊಡಗು ವಿದ್ಯಾರ್ಥಿನಿಯ ತಲೆ ಕಡಿದು ಹತ್ಯೆ ಮಾಡಿದ ಆರೋಪಿ ಅಂದರ್..!

ನ್ಯೂಸ್ ಆ್ಯರೋ: ಎಸ್ಎಸ್ಎಲ್ಸಿ ಫಲಿತಾಂಶದ ಉತ್ತಮ ಅಂಕಗಳಿಸಿ ಪಾಸಾಗಿದ್ದ ವಿದ್ಯಾರ್ಥಿನಿಯನ್ನು ಭೀಕರವಾಗಿ ರುಂಡ ಕಡಿದು ಕೊಲೆ ಮಾಡಿದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಗಿ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ನನ್ನು ಸೋಮವಾರಪೇಟೆ…
ದಿನ‌ ಭವಿಷ್ಯ 11-05-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 11-05-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಇದಕ್ಕಾಗಿ ನೀವು ನಿಮ್ಮ…

Leave a Reply

Your email address will not be published. Required fields are marked *