Kabul Chana Bread Bonda Recipe : ರುಚಿಕರ ಬ್ರೆಡ್ ಬೋಂಡಾ ಟೇಸ್ಟ್ ಮಾಡಿದ್ದೀರಾ? – ಎಲ್ಲರಿಗೂ ಇಷ್ಟವಾಗೋ ಈ ತಿಂಡಿ ಮಾಡೋ ವಿಧಾನ ಇಲ್ಲಿದೆ..

Kabul Chana Bread Bonda Recipe : ರುಚಿಕರ ಬ್ರೆಡ್ ಬೋಂಡಾ ಟೇಸ್ಟ್ ಮಾಡಿದ್ದೀರಾ? – ಎಲ್ಲರಿಗೂ ಇಷ್ಟವಾಗೋ ಈ ತಿಂಡಿ ಮಾಡೋ ವಿಧಾನ ಇಲ್ಲಿದೆ..

ನ್ಯೂಸ್ ಆ್ಯರೋ : ಮಕ್ಕಳಿಗೆ ಬೇಕಾದ ಪೌಷ್ಠಿಕಾಂಶ ಹಾಗೂ ರುಚಿ, ಎರಡನ್ನೂ ಗಮನದಲ್ಲಿಟ್ಟುಕೊಂಡು ತಿಂಡಿಯನ್ನು ಮಾಡಿಕೊಡಬೇಕಾಗುತ್ತದೆ. ಸೊಪ್ಪು, ತರಕಾರಿ, ಕಾಳು ಮುಂತಾದವು ಮಕ್ಕಳಿಗೆ ಕೊಡಬೇಕಾದ ಆಹಾರದಲ್ಲಿ ಇರಲೇ ಬೇಕಾದ ಕೆಲವು ಪದಾರ್ಥಗಳು. ಕಾಳುಗಳಲ್ಲಿ ಪ್ರೋಟೀನ್ ಅಂಶ ಬಹಳ ಹೇರಳವಾಗಿರುತ್ತದೆ ಮತ್ತು ಮಕ್ಕಳ ಬೆಳವಣಿಗೆಗೆ ಅತ್ಯಾವಶ್ಯಕವೂ ಆಗಿರುತ್ತದೆ.

ಕಾಬುಲ್ ಚನ್ನಾ ಕಾಳನ್ನು ಬಳಸಿ ಒಂದು ಬಗೆಯ ತಿಂಡಿಯನ್ನು ಮಾಡುವುದು ಹೇಗೆ ಎಂದು ನೋಡೋಣ. ಈ ರೆಸಿಪಿ ಮಕ್ಕಳಿಗೆ ಮಾತ್ರವಲ್ಲದೇ ಮನೆಗೆ ಬರುವ ಅತಿಥಿಗಳಿಗೂ ಮಾಡಿಕೊಟ್ಟು ಸತ್ಕರಿಸಬಹುದು. ಸಂಜೆ ಸಮಯದಲ್ಲಿ ಚಹಾದೊಡನೆಯೂ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು:

  • ಕಾಬುಲ್ ಕಡ್ಲೆ : 1 ಕಪ್ (ಮೊದಲೇ 8 ತಾಸುಗಳ ಕಾಲ ನೆನೆಸಿಟ್ಟು ನಂತರ ಬೇಯಿಸಬೇಕು)
  • ತುಂಡರಿಸಿದ ಬ್ರೆಡ್ – 1ಕಪ್
  • ಹಸಿ ಮೆಣಸಿನಕಾಯಿ- 2
  • ಮ್ಯಾಂಗೋ ಪೌಡರ್ – ಅರ್ಧ ಚಮಚ
  • ಗರಂ ಮಸಾಲಾ- ಅರ್ಧ ಚಮಚ
  • ಅಚ್ಚ ಖಾರದ ಪುಡಿ – ಕಾಲು ಚಮಚ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಜೀರಿಗೆ ಪುಡಿ- ಕಾಲು ಚಮಚ
  • ಹಾಲು – 1 ಕಪ್
  • ಅಡುಗೆ ಎಣ್ಣೆ – 1 ಕಪ್
  • ರುಚಿಗೆ ತಕ್ಕಷ್ಟು ಉಪ್ಪು
  • ಆಲೂಗಡ್ಡೆ- 2
  • ಜೀರಿಗೆ- 2 ಚಮಚ
  • ದನಿಯಾ ಪೌಡರ್

ಮಾಡುವ ವಿಧಾನ:

  • ಕಾಬುಲ್ ಕಡಲೆಯನ್ನು 8 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಕುಕ್ಕರ್‌ನಲ್ಲಿ ಇಟ್ಟು ಬೇಯಿಸಬೇಕು. ಬೇಯಿಸಿದ ಕಡಲೆ, ಜೀರಿಗೆ, ದನಿಯಾ ಪೌಡರ್ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದನ್ನು ಒಂದು ಬೌಲ್‍ಗೆ ಹಾಕಿಕೊಳ್ಳಬೇಕು.
  • ಬ್ರೆಡ್ ತೆಗೆದು ಹಾಲಿನಲ್ಲಿ ಅದ್ದಿ ಹಿಂಡಿ ತೆಗೆದು ಬೌಲ್‍ಗೆ ಹಾಕಬೇಕು.
  • ಬಳಿಕ ರುಬ್ಬಿದ ಕಾಬೂಲ್ ಮಿಶ್ರಣ, ಆಲೂಗಡ್ಡೆಯನ್ನು ಹಾಕಬೇಕು. ನಂತರ ಮೊದಲೇ ತಯಾರು ಮಾಡಿಟ್ಟುಕೊಂಡ ಹೆಚ್ಚಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅಚ್ಚ ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ , ಮ್ಯಾಂಗೋ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಾಲಿನಲ್ಲಿ ಅದ್ದಿಗೆತೆದ ಬ್ರೆಡ್ ಎಲ್ಲವನ್ನು ಬೌಲ್‍ಗೆ ಹಾಕಿ, ನೀರಿಲ್ಲದೇ ಕಲಿಸಿಕೊಳ್ಳಬೇಕು.

*ನಂತರ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾದ ನಂತರ, ಮೊದಲೇ ಬೌಲ್‍ನಲ್ಲಿ ಕಲಿಸಿಟ್ಟುಕೊಂಡ ಮಿಶ್ರಣವನ್ನು ಆಂಬೊಡೆ ಆಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಈಗ ನಿಮ್ಮ ಬ್ರೆಡ್ ಬೋಂಡಾ ರೆಡಿ..

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *