ಬೆಳಗಿನ ತಿಂಡಿಗೆ ಹೆಲ್ದಿ ಗೋಧಿ ರೊಟ್ಟಿ ಮಾಡಿ ತಿನ್ನಿರಿ – ರೆಸಿಪಿ ಹೀಗಿದೆ ನೋಡಿ…

ಬೆಳಗಿನ ತಿಂಡಿಗೆ ಹೆಲ್ದಿ ಗೋಧಿ ರೊಟ್ಟಿ ಮಾಡಿ ತಿನ್ನಿರಿ – ರೆಸಿಪಿ ಹೀಗಿದೆ ನೋಡಿ…

ನ್ಯೂಸ್ ಆ್ಯರೋ ‌: ಸಾಮ್ಯಾನವಾಗಿ ಮಹಿಳೆಯರು ಬೆಳಗಿನ ಉಪಹಾರವಾಗಿ ದೋಸೆ, ಇಡ್ಲಿ ಹಾಗೂ ಅನ್ನದ ವಿವಿಧ ಅಡುಗೆಗಳನ್ನು ಮಾಡ್ತಾರೆ. ರೊಟ್ಟಿ ಮಾಡೋದು ತೀರಾ ಕಡಿಮೆ. ಅಕ್ಕಿ ರೊಟ್ಟಿ, ರಾಗಿ ರೊಟ್ಟಿ ಆರೋಗ್ಯಕ್ಕೆ ಒಳ್ಳೆದು ಅನ್ನೋದು ಎಲ್ಲರಿಗೂ ಹಾಗಾಗೇ ಮನೆಯಲ್ಲಿ ರೊಟ್ಟಿ ಮಾಡ್ತಿವಿ. ಅದೇ ಮಾಮೂಲಿ ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ದರೆ, ಈ ಗೋಧಿ ರೊಟ್ಟಿಯನ್ನೊಮ್ಮೆ ಟ್ರೈ ಮಾಡಿ. ಗೋಧಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಈ ರೊಟ್ಟಿ ನಾಲಗೆಗೆ ರುಚಿ ನೀಡುವುದು. ಬೆಳಿಗ್ಗೆ ತಿಂಡಿಗೆ, ಸಂಜೆ ಸ್ನಾಕ್ ಗೆ ಕೂಡ ಈ ರೊಟ್ಟಿ ಮಾಡಬಹುದು. ಇದನ್ನು ಹೇಗೆ ತಯಾರಿಸುವುದು ಎಂಬ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

  • ಅಕ್ಕಿಹಿಟ್ಟು – 1 ಕಪ್
  • ಗೋಧಿ ಹಿಟ್ಟು – 2ಕಪ್
  • ಉಪ್ಪು – ರುಚಿಗೆ ತಕ್ಕಷ್ಟು
  • ಅರಿಸಿನ ಪುಡಿ – ಕಾಲು ಚಮಚ
  • ಅಚ್ಛಾ ಖಾರದಪುಡಿ – ಮುಕ್ಕಾಲು ಚಮಚ
  • ಜೀರಿಗೆ – ಅರ್ಧ ಚಮಚ
  • ಗರಂ ಮಸಾಲಾ -ಅರ್ಧ ಚಮಚ
  • ಹಸಿ ಮೆಣಸಿನಕಾಯಿ – 2 (ಸಣ್ಣಗೆ ಹೆಚ್ಚಿದ್ದು)
  • ಕರಿ ಬೇವು – 10
  • ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
  • ಕೊತ್ತಂಬರಿ ಸೊಪ್ಪು – 3 ರಿಂದ 4 ದೊಡ್ಡ ಚಮಚ
  • ಗೋಡಂಬಿ ಚೂರುಗಳು – 10
  • ಮೊಸರು – 1 ಕಪ್
  • ತೆಂಗಿನ ತುರಿ – ಅರ್ಧ ಕಪ್
  • ನೀರು – ಸ್ವಲ್ಪ
  • ಎಣ್ಣೆ – ಸ್ವಲ್ಪ

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಗೆ 1 ಕಪ್ ಅಕ್ಕಿಹಿಟ್ಟು, 2 ಕಪ್ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಅರಿಸಿನ ಪುಡಿ, ಮುಕ್ಕಲು ಚಮಚ ಅಚ್ಚ ಖಾರದಪುಡಿ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಗರಂ ಮಸಾಲ, 1 ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, 10 ಕರಿ ಬೇವಿನ ಎಲೆಗಳನ್ನು ಕೈಯಿಂದ ಮುರಿದು ಹಾಕಿ, ನಂತರ ಇದಕ್ಕೆ 1 ಸಣ್ಣಗೆ ಹೆಚ್ಚಿದ ಈರುಳ್ಳಿ, 3 ರಿಂದ ೪ ದೊಡ್ಡ ಚಮಚ ಕೊತ್ತಂಬರಿ ಸೊಪ್ಪು, 10 ಗೋಡಂಬಿ ಚೂರುಗಳನ್ನು ಹಾಕಿ ಚೆನ್ನಾಗಿ ಕಲಸಿ.

ನಂತರ ಇದಕ್ಕೆ 1 ಕಪ್ ಮೊಸರು, ಅರ್ಧ ಕಪ್ ತೆಂಗಿನ ತುರಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ನಾಡಿ. ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ.

ಒಂದು ಬಟರ್‌ ಪೇಪರ್‌ ಮೇಲೆ ಎಣ್ಣೆ ಸವರಿ, ಅದರ ಮೇಲೆ ಹಿಟ್ಟಿನ ಉಂಡೆ ಇಟ್ಟು ಸಮವಾಗಿ ತಟ್ಟಿ.

ನಂತರ ಕಾವಲಿ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ , ಅದರ ಮೇಲೆ ತಟ್ಟಿದ ರೊಟ್ಟಿ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿ ಚೆನ್ನಾಗಿ ಬೇಯಿಸಿ.

ಈ ರುಚಿಯಾದ ಮಸಾಲೆ ಗೋಧಿ ರೊಟ್ಟಿಯನ್ನು ನಿಮಗಿಷ್ಟವಾದ ಚಟ್ನಿ ಅಥವಾ ಸಾಂಬಾರು ಜೊತೆಗೆ ಸವಿಯಿರಿ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *