
ಖಾಲಿ ಹೊಟ್ಟೇಲಿ ಏಲಕ್ಕಿ ನೀರು ಕುಡಿದು ನೋಡಿ – ಆರೋಗ್ಯ ವೃದ್ಧಿಸಿ, ದೇಹ ತೂಕ ಕುಗ್ಗಿಸಿ : ರೋಗಗಳಿಂದ ದೂರಾಗಿ..!
- ಆರೋಗ್ಯವೇ ಭಾಗ್ಯ
- October 25, 2023
- No Comment
- 75
ನ್ಯೂಸ್ ಆ್ಯರೋ : ಬಹುತೇಕ ದುಬಾರಿ ಆಹಾರ ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ಕೂಡ ಬಂದು ನಿಲ್ಲುತ್ತದೆ! ಆದರೆ ನಿಮಗೆ ಗೊತ್ತಿರಲಿ, ಈ ಪುಟ್ಟ ಏಲಕ್ಕಿಯು ದುಬಾರಿಯಾದರೂ ಕೂಡ, ತನ್ನಲ್ಲಿ ಹಲವಾರು ಬಗೆಯ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ನೂರಾರು ವರ್ಷಗಳ ಆಯುರ್ವೇದ ಪದ್ಧತಿಯಲ್ಲಿಯೂ ಕೂಡ, ಏಲಕ್ಕಿಗೆ ಒಂದು ವಿಶೇಷ ಸ್ಥಾನಮಾನವಿದೆ.
ಹೀಗಾಗಿ ನಮ್ಮ ದೈನಂದಿನ ಅಡುಗೆಯಲ್ಲಿ ಏಲಕ್ಕಿಯನ್ನು ಉಪಯೋಗಿಸುವುದರಿಂದ, ಸಣ್ಣ -ಪುಟ್ಟ ಕಾಯಿಲೆಗಳಿಂದ ಹಿಡಿದು, ದೀರ್ಘಕಾಲದವರೆಗೆ ಕಾಡುವ ಕಾಯಿಲೆಗಳನ್ನು ಕೂಡ ದೂರ ಮಾಡುವ, ಎಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳು ಕೂಡ ಇದರಲ್ಲಿ ಕಂಡು ಬರುತ್ತದೆ ಎಂದು ಮನೆಯಲ್ಲಿನ ಹಿರಿಯರು ಕೂಡ ಹೇಳುತ್ತಾರೆ.
ಅದೇ ಈ ಏಲಕ್ಕಿ ಬೀಜಗಳನ್ನು ನೆನೆಸಿಟ್ಟ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ವಿಷಕಾರಿ ಅಂಶವನ್ನು ಹೊರಹಾಕುತ್ತದೆ
ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಷಯ ನಮಗೆ ತಿಳಿದಿದೆ.
ಅಂತೆಯೇ, ಈ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದಲ್ಲಿ ಕಂಡುಬರುವ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರ ಹೋಗಲು ಸಾಧ್ಯ ವಾಗುತ್ತದೆ.
ಇಲ್ಲಾಂದ್ರೆ ರಾತ್ರಿ ಪೂರ್ತಿ ನೆನೆಸಿಟ್ಟ ಏಲಕ್ಕಿ ನೀರನ್ನು ಬೆಳಗ್ಗೆ ಎದ್ದು ಉಗುರು ಬೆಚ್ಚಗೆ ಬಿಸಿ ಮಾಡಿ, ಕುಡಿಯುವುದರಿಂದಲೂ ಕೂಡ, ಆರೋಗ್ಯವನ್ನು ವೃದ್ಧಿಸಿಕೊಳ್ಳ ಬಹುದು. ಈ ಸಮಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ನೀರನ್ನು ಕುಡಿದು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ದೇಹದ ತೂಕ ಇಳಿಸಿಕೆಗೆ ಸಹಕಾರಿ
ಇಂದಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ನೂರಾರು ಟಿಪ್ಸ್‌ಗಳು ಇಂಟರ್ ನೆಟ್‌ನಲ್ಲಿ ನಿಮಗೆ ಸಿಗುವುದು. ಅದೇ ರೀತಿಯಾಗಿ ಮಾರುಕಟ್ಟೆಯಲ್ಲಿ ಕೂಡ ಹಲವಾರು ಉತ್ಪನ್ನಗಳು ತೂಕ ಇಳಿಸುವ ಭರವಸೆ ನೀಡುವುದು. ಆದರೆ ಇವೆಲ್ಲದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಆರೋಗ್ಯಕಾರಿ ಆಹಾರ ಪದ್ಧತಿ, ಪ್ರತಿದಿನ ವ್ಯಾಯಾಮ ಅಥವಾ ಯೋಗಾಭ್ಯಾಸದ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಏಲಕ್ಕಿ ನೆನೆಸಿಟ್ಟ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ತೂಕದಲ್ಲಿ ನಿಯಂತ್ರಣ ಸಾಧಿಸಬಹುದಾಗಿದೆ.
ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ
ಏಲಕ್ಕಿ ನೆನೆಸಿಟ್ಟ ನೀರನ್ನು ವಾರದಲ್ಲಿ ಎರಡು-ಮೂರು ಬಾರಿಯಾದರೂ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ ಜೊತೆಗೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ದೂರವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಏಲಕ್ಕಿಯಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ ಹಾಗೂ ಹೈಪೋಲಿ ಪಿಡೆಮಿಕ್ ಎನ್ನುವ ನೈಸರ್ಗಿಕ ಸಂಯುಕ್ತ ಅಂಶಗಳು ಕಂಡು ಬರುವುದರಿಂದ, ಮಧುಮೇಹ ರೋಗಿಗಳ ರಕ್ತದಲ್ಲಿನಸಕ್ಕರೆ ಮಟ್ಟ, ಏರಿಕೆ ಆಗದಂತೆ ನೋಡಿಕೊಳ್ಳುತ್ತದೆ.
ಲಿವರ್ ನ ಆರೋಗ್ಯ ವೃದ್ಧಿ
ದೇಹದಲ್ಲಿ ಇರುವಂತಹ ಬಹುತೇಕ ಪ್ರಮುಖ ಅಂಗಾಂಗಗಳಲ್ಲಿ ನಮ್ಮ ಲಿವರ್ ಕೂಡ ಒಂದು. ಒಂದು ವೇಳೆ, ಈ ಲಿವರ್‌ನಲ್ಲಿ ಸಮಸ್ಯೆಗಳು ಕಂಡು ಬಂದರೆ ಅದರಿಂದ ಹಲವು ಬಗೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಹೀಗಾಗಿ ಲಿವರ್‌ನ ಆರೋಗ್ಯಕ್ಕೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ ಏಲಕ್ಕಿಯಲ್ಲಿ ದೇಹದ ಯಕೃತ್ ಅಥವಾ ಲಿವರ್ ಭಾಗದ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕುವ ಶಕ್ತಿ ಇದೆ. ಹೀಗಾಗಿ ಪ್ರತಿದಿನ ಏಲಕ್ಕಿ ನೆನೆಸಿಟ್ಟ ನೀರನ್ನು ಕುಡಿಯುತ್ತಾ ಬರುವುದರಿಂದ, ಲಿವರ್ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.