ರಾಗಿ ಕಿಚಡಿ ರೆಸಿಪಿ : ಬೆಳಗಿನ ಉಪಹಾರಕ್ಕೆ ಆರೋಗ್ಯಕರ ರಾಗಿ ಕಿಚಡಿ ಮಾಡಿ ತಿನ್ನಿ – ಮಾಡೋ ವಿಧಾನ ನಾವು ಹೇಳಿಕೊಡ್ತೇವೆ..

ರಾಗಿ ಕಿಚಡಿ ರೆಸಿಪಿ : ಬೆಳಗಿನ ಉಪಹಾರಕ್ಕೆ ಆರೋಗ್ಯಕರ ರಾಗಿ ಕಿಚಡಿ ಮಾಡಿ ತಿನ್ನಿ – ಮಾಡೋ ವಿಧಾನ ನಾವು ಹೇಳಿಕೊಡ್ತೇವೆ..

ನ್ಯೂಸ್ ಆ್ಯರೋ‌ : ಬೆಳಗಿನ ತಿಂಡಿ ಯಾವಾಗಲೂ ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು. ಅದಕ್ಕಾಗಿ ನೀವು ಧಾನ್ಯಗಳಾದ ಬೇಳೆ ಕಾಳುಗಳು, ಮೆಕ್ಕೆಜೋಳ, ಜೋಳ, ರಾಗಿ ನವಣೆ, ಉದ್ದು ಸೇರಿದಂತೆ ಹಲವು ಕಾಳುಗಳಿಂದ ನಿಮ್ಮಿಷ್ಟದ ತಿಂಡಿ ಮಾಡಿ ಸೇವನೆ ಮಾಡಬಹುದು. ಅದರಲ್ಲಿ ವಿಶೇಷವಾಗಿ ಬೆಳಗಿನ ತಿಂಡಿಗೆ ರಾಗಿ ಗಂಜಿ, ರಾಗಿ ರೊಟ್ಟಿ, ರಾಗಿ ದೋಸೆ ಸೇರಿದಂತೆ ರಾಗಿಯಿಂದ ಮಾಡಿದ ಪದಾರ್ಥ, ರೆಸಿಪಿಗಳು ಹೊಟ್ಟೆ ತುಂಬಿಸುತ್ತವೆ. ಮತ್ತು ಆರೋಗ್ಯಕರ ಆಯ್ಕೆ ಆಗಿದೆ.

ನಾವು ಬೆಳಗಿನ ಜಾವ ರಾಗಿಯ ಖಿಚಡಿ ಮಾಡಿ ಸೇವಿಸಿದರೆ ಅದ್ಭುತವಾದ ಪೋಷಕಾಂಶ ಪಡೆಯಬಹುದು.

ಹಾಗಿದ್ದರೆ ರಾಗಿ ಕಿಚಡಿ ಮಾಡುವುದೇಗೆ ಎಂದೂ ಯೋಚನೆ ಮಾಡುತ್ತಿದ್ದೀರಾ..? ಇಲ್ಲಿದೆ ಮಾಹಿತಿ..

ಬೇಕಾಗುವ ಸಾಮಗ್ರಿಗಳು

  • 1 ಬೌಲ್ ರಾಗಿ
  • ಅರ್ಧ ಬೌಲ್ ಹೆಸರು ಬೇಳೆ ಅಥವಾ ಕಡಲೆ ಬೇಳಅರ್ಧ ಬಟ್ಟಲು ಅಕ್ಕಿ
  • ಉಪ್ಪು ರುಚಿಗೆ ತಕ್ಕಂತೆ
  • ಶುದ್ಧ ಅಥವಾ ದೇಸಿ ತುಪ್ಪ ಬೇಕು.

ಮಾಡುವ ವಿಧಾನ

ಮೊದಲು ರಾಗಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಸ್ವಲ್ಪ ನೀರು ಹಾಕಿ ಚೆನ್ನಾಗಿ ತೊಳೆದು ನೀರು ಹೋಗಲಾಡಿಸಿ. ನಂತರ ಒದ್ದೆಯಾದ ರಾಗಿ ಕಾಳುಗಳನ್ನು ಮಿಕ್ಸರ್ ನಲ್ಲಿ ಸ್ವಲ್ಪ ಉಪ್ಪಿಟ್ಟಿನ ರವಾದ ಹದಕ್ಕೆ ರುಬ್ಬಿಕೊಳ್ಳಿ.

ನಂತರ ಆಳವಾದ ತಟ್ಟೆಗೆ ಹಾಕಿ, ರಾಗಿಯ ಸಿಪ್ಪೆ ಹೊರಗೆ ತೆಗೆಯಿರಿ. ರಾಗಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ನಂತರ ಕುಕ್ಕರ್‌ನಲ್ಲಿ ಸುಮಾರು ಮೂರರಿಂದ ನಾಲ್ಕು ಲೋಟ ನೀರು ಹಾಕಿ ಕುದಿಸಿ.

ಅದು ಬೆಂದ ನಂತರ ರಾಗಿ, ಬೇಳೆ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ತೊಳೆದು ಕುದಿಯುವ ನೀರಿಗೆ ಹಾಕಿ. ಆಗಾಗ್ಗೆ ತಿರುವುತ್ತಾ ಇರಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಮೂರು ಸೀಟಿ ಬಂದ ನಂತರ ಕುಕ್ಕರ್ ಆಫ್ ಮಾಡಿ.

ರಾಗಿ ಕಿಚಡಿಯನ್ನು ತುಪ್ಪ, ಬೆಲ್ಲ, ತಾಜಾ ಮಜ್ಜಿಗೆ ಅಥವಾ ಹಾಲಿನ ಜೊತೆ ಬಡಿಸಿ ಸೇವಿಸಿ. ತಟ್ಟೆಗೆ ಹಾಕಿ ತಿಂದರೆ ರುಚಿ ಹೆಚ್ಚು.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *