ಪಾಲಕ್ ರಾಗಿ ರೊಟ್ಟಿ : ಬೆಳಗಿನ ತಿಂಡಿಗೆ ಪಾಲಕ್ ರಾಗಿ ರೊಟ್ಟಿ ಹೀಗೆ ಮಾಡಿ – ಸಖತ್ ಟೇಸ್ಟೀ ಆಗಿರುತ್ತೆ : ಮಾಡೋ ವಿಧಾನ ಇಲ್ಲಿದೆ ನೋಡಿ…

ಪಾಲಕ್ ರಾಗಿ ರೊಟ್ಟಿ : ಬೆಳಗಿನ ತಿಂಡಿಗೆ ಪಾಲಕ್ ರಾಗಿ ರೊಟ್ಟಿ ಹೀಗೆ ಮಾಡಿ – ಸಖತ್ ಟೇಸ್ಟೀ ಆಗಿರುತ್ತೆ : ಮಾಡೋ ವಿಧಾನ ಇಲ್ಲಿದೆ ನೋಡಿ…

Palak Raagi Rotti Recipe : ರಾಗಿ ಪದಾರ್ಥಗಳು ಬೆಳಗಿನ ಉಪಾಹಾರಕ್ಕೆ ಬೆಸ್ಟ್ ಅಂತಾನೇ ಹೇಳಬಹುದು. ಏಕೆಂದರೆ ಇದರಲ್ಲಿ ಫೈಬರ್ ಮತ್ತು ಕಬ್ಬಿಣನಾಂಶ ಸಮೃದ್ಧವಾಗಿದೆ. ಇದು ಕಂಪ್ಲೀಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರವಾಗಿದೆ. ರಾಗಿ ನಮ್ಮನ್ನು ದಿನವಿಡೀ ಶಕ್ತಿಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಈ ಬಾರಿ ನೀವು ಬೆಳಗಿನ ತಿಂಡಿಗೆ ಪಾಲಕ್ ರಾಗಿ ರೊಟ್ಟಿಯನ್ನು ಬೆಳಗಿನ ತಿಂಡಿಗೆ ಟ್ರೈ ಮಾಡಬಹುದು. ಇನ್ನೂ ಪಾಲಕ್ ರಾಗಿ ರೊಟ್ಟಿ ಮಾಡಲು ರಾತ್ರಿಯಂದಲೇ ಅದಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಪದಾರ್ಥವನ್ನು ಸಿದ್ಧ ಪಡಿಸಿಟ್ಟುಕೊಂಡರೆ ಆರಾಮವಾಗಿ ಬೆಳಗ್ಗೆ ತಿಂಡಿಯನ್ನು ಮಾಡಬಹುದು. ಬೆಳಗ್ಗೆ ಎದ್ದು ರೊಟ್ಟಿಯನ್ನು ಮಾತ್ರ ಸುಡಬೇಕಾಗಿರುತ್ತದೆ. ಅದರಲ್ಲಿಯೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ (ಇದು ಸುಲಭವಾಗಿ ಮಾಡುವ ತಿಂಡಿಯಾಗಿದೆ. ಸದ್ಯ ಈಗ ಪಾಲಕ್ ರಾಗಿ ರೊಟ್ಟಿ ಮಾಡುವುದೇಗೆ ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.

ಬೇಕಾಗಿರುವ ಸಾಮಾಗ್ರಿಗಳು:

  • ರಾಗಿ ಹಿಟ್ಟು – 2 ಕಪ್
  • ಈರುಳ್ಳಿ – 3
  • ತುರಿದ ತೆಂಗಿನಕಾಯಿ – 1/2 ಕಪ್
  • ಹಸಿರು ಮೆಣಸಿನಕಾಯಿ – 3
  • ಪಾಲಕ್ ಸೊಪ್ಪು – ಸ್ವಲ್ಪ
  • ಮೆಂತ್ಯ – ಸ್ವಲ್ಪ
  • ಕೊತ್ತಂಬರಿ – 1/4 ಕಪ್
  • ಉಪ್ಪು – ಅಗತ್ಯಕ್ಕೆ ತಕ್ಕಷ್ಟು
  • ಎಣ್ಣೆ – ಸ್ವಲ್ಪ
  • ನೀರು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಈರುಳ್ಳಿ, ಹಸಿರು ಮೆಣಸಿನಕಾಯಿ. ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿ.

ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟನ್ನು ತೆಗೆದುಕೊಂಡು ಕತ್ತರಿಸಿದ ಪದಾರ್ಥಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ ಮತ್ತು ಗಟ್ಟಿಯಾಗುವಂತೆ ಕಲಸಿ. ಹಿಟ್ಟನ್ನು ಚಪಾತಿಗಿಂತ ಸ್ವಲ್ಪ ಸಡಿಲವಾಗಿ ಬೆರೆಸಿಕೊಳ್ಳಿ.

ಈಗ ಕಲಸಿದ ಹಿಟ್ಟನ್ನು 5 ನಿಮಿಷಗಳ ಕಾಲ ನೆನೆಸಿ. ನಂತರ ದೋಸೆ ಕಲ್ಲನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ.

ನಂತರ ನಿಂಬೆ ಹಣ್ಣಿನ ಗಾತ್ರದಷ್ಟು ಹಿಟ್ಟನ್ನು ಕೈಗೆ ತೆಗೆದುಕೊಳ್ಳಿ. ಬಾಳೆ ಎಲೆಯ ಮೇಲೆ ಹಾಕಿ ದೋಸೆಯಂತೆ ತಟ್ಟಿ. ತಟ್ಟುವಾಗ ಈರುಳ್ಳಿ ಚೂರುಗಳನ್ನು ಚೆನ್ನಾಗಿ ಒತ್ತಿರಿ.

ನಂತರ ಸ್ಟವ್ ಮೇಲಿನ ಉರಿಯಲ್ಲಿ ಕಡಿಮೆ ಇಟ್ಟು, ದೋಸೆ ಕಲ್ಲಿನ ಮೇಲೆ ಹಾಕಿ ನಂತರ ಎರಡೂ ಬದಿಗಳಲ್ಲಿ ತಿರುಗಿಸಿ, ಅದು ಬೆಂದಿದ್ಯಾ ಎಂಬುವುದನ್ನು ಖಚಿತಪಡಿಸಿಕೊಂಡು ಎತ್ತಿ ಹಾಕಿ.

ಈಗ ರುಚಿಕರವಾದ ಪಾಲಕ್ ರಾಗಿ ರೊಟ್ಟಿ ಸವಿಯಲು ಸಿದ್ಧವಾಗಿದೆ. ಇದಕ್ಕೆ ಯಾವುದೇ ಸೈಡ್ ಡಿಶ್ ಅಗತ್ಯವಿಲ್ಲ. ಹಾಗೆಯೇ ತಿಂದರೂ ರುಚಿಕರವಾಗಿರುತ್ತದೆ. ಬೇಕಾದರೆ ಮಸಾಲೆ ಚಟ್ನಿ, ಪುದೀನಾ ಚಟ್ನಿ, ತೆಂಗಿನಕಾಯಿ ಚಟ್ನಿ ಸೇವಿಸಬಹುದು.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *