Oats Idly Recipe : ಬೆಳಗಿನ ತಿಂಡಿಗೆ ಮಾಡಿ ಸ್ಪೆಷಲ್ ಓಟ್ಸ್ ಇಡ್ಲಿ – ಮಾಡೋದು ತುಂಬಾ ಸುಲಭ : ವಿವರ ಇಲ್ಲಿದೆ.

Oats Idly Recipe : ಬೆಳಗಿನ ತಿಂಡಿಗೆ ಮಾಡಿ ಸ್ಪೆಷಲ್ ಓಟ್ಸ್ ಇಡ್ಲಿ – ಮಾಡೋದು ತುಂಬಾ ಸುಲಭ : ವಿವರ ಇಲ್ಲಿದೆ.

ನ್ಯೂಸ್ ಆ್ಯರೋ : ನಿಮ್ಮ ದೈಹಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಬೆಳಗ್ಗಿನ ಉಪಹಾರವನ್ನು ಎಂದಿಗೂ ನಿರ್ಲಕ್ಷ್ಯಿಸದಿರಿ. ನೀವು ಮಾಡುವ ಈ ಉಪಹಾರ ಕೇವಲ ಹೊಟ್ಟೆ ತುಂಬಿಸುವುದಕ್ಕೆ ಮಾತ್ರವಲ್ಲ ನಿಮ್ಮನ್ನು ಇಡೀ ದಿನ ಚಟುವಟಿಕೆಯಿಂದ ಇರಿಸುವ ದಿವ್ಯ ಔಷಧವಾಗಿದೆ. ಹೆಚ್ಚಿನವರು ಕಚೇರಿಗೆ ಹೋಗುವ ಲಗುಬಗೆಯಲ್ಲಿ ಅಥವಾ ಎಂಬ ನೆಪದಲ್ಲಿ ಬೆಳಗ್ಗಿನ ಉಪಹಾರವನ್ನು ಸೇವಿಸದೇ ಮಧ್ಯಾಹ್ನ ಜೊತೆಯಾಗಿ ಊಟ ಮಾಡಿದರೆ ಆಯಿತು ಎಂಬ ಉಪೇಕ್ಷೆಯಲ್ಲಿ ಈ ಅದ್ಭುತ ಟಾನಿಕ್ ಅನ್ನು ಕೈಬಿಡುತ್ತಿದ್ದಾರೆ. ಆದರೆ ನೀವು ಸೇವಿಸುವ ಉಪಹಾರ ನಿಮ್ಮ ದೇಹದ ತೂಕ ಇಳಿಕೆಯಲ್ಲೂ ಅದ್ಭುತ ಪರಿಣಾಮವನ್ನು ಬೀರುತ್ತದೆ.

ಓಟ್ಸ್ ನಮ್ಮ ಉಪಾಹಾರದಲ್ಲಿ ನುಸುಳಿ ಹೆಚ್ಚು ಸಮಯವಾಗಿಲ್ಲ, ಆಗಲೇ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡುಬಿಟ್ಟಿದೆ. ಬೆಳಿಗ್ಗೆ ಕಚೇರಿಗೆ ಹೊರಡುವ ಧಾವಂತದಲ್ಲಿ ಬೇಗನೇ ತಯಾರಿಸಬಹುದಾದ, ಸ್ವಾದಿಷ್ಟ ಮತ್ತು ಪೌಷ್ಠಿಕವಾದ ಆಹಾರವಾದುದರಿಂದ ಯುವಜನತೆಗಂತೂ ಅನಿವಾರ್ಯವಾದ ಉಪಾಹಾರವಾಗಿಬಿಟ್ಟಿದೆ. ಅಲ್ಲದೇ ಮಧ್ಯಾಹ್ನದ ಊಟದವರೆಗೂ ಅಗತ್ಯವಾದ ಶಕ್ತಿ ನೀಡುವ ಮೂಲಕ ಹಾಗೂ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ತೂಕ ಇಳಿಸಲೂ ನೆರವಾಗುತ್ತದೆ.

ರುಚಿಕರವಾದ ಉಬ್ಬಿದ ಓಟ್ಸ್ ಇಡ್ಲಿ ಮಾಡುವುದೇಗೆ…? ಇಲ್ಲಿದೆ ಮಾಹಿತಿ.

ಅಗತ್ಯವಿರುವ ಸಾಮಾಗ್ರಿಗಳು

ಓಟ್ಸ್ – ಕಾಲು ಕಪ್, ಉದ್ದಿನ ಬೇಳೆ – ಒಂದು ಕಪ್, ಉಪ್ಪು-ರುಚಿಗನುಸಾರ, ಶುಂಠಿಯ ಪೇಸ್ಟ್ – ಅರ್ಧ ಚಿಕ್ಕಚಮಚ, ಹಸಿಮೆಣಸಿನ ಪೇಸ್ಟ್ – ಒಂದು ಚಿಕ್ಕ ಚಮಚ, ಸವರಲು ಎಣ್ಣೆ – ಕಾಲು ಚಮಚ ಅಥವಾ ಅಗತ್ಯಕ್ಕೆ ತಕ್ಕಂತೆ, ನೀರು – ಒಂದೂವರೆ ಕಪ್

ಮಾಡುವ ವಿಧಾನ

1) ಓಟ್ಸ್ ಮತ್ತು ಉದ್ದಿನ ಬೇಳೆಯನ್ನು ಒಣದಾಗಿರುವಂತೆಯೇ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗೆ ಪುಡಿಮಾಡಿ

2) ಇದಕ್ಕೆ ನೀರು ಹಾಕಿ ಕಲಕಿ ನುಣ್ಣನೆಯ ಮಿಶ್ರಣ ತಯಾರಿಸಿ. ಇದಕ್ಕೆ ಉಪ್ಪು ಮತ್ತು ಹಸಿಮೆಣಸಿನ ಪೇಸ್ಟ್ ಸೇರಿಸಿ ಕಲಕಿ. ಇದು ಸುಮಾರು ಇಡ್ಲಿಹಿಟ್ಟಿನ ಹದಕ್ಕೆ ಬರಬೇಕು.

3) ಈ ಪಾತ್ರೆಯನ್ನು ಸುಮಾರು ಒಂದು ಘಂಟೆ ಕಾಲ ಮುಚ್ಚಿಡಿ.

4) ಒಂದು ಗಂಟೆಯ ಬಳಿಕ ಇಡ್ಲಿಪಾತ್ರೆಯ ಲೋಟ (ಅಥವಾ ಅಚ್ಚು) ಗಳ ಒಳಭಾಗಕ್ಕೆ ಕೊಂಚ ಎಣ್ಣೆ ಸವರಿ ಪ್ರತಿ ಅಚ್ಚಿನಲ್ಲಿಯೂ ತುಂಬುವಷ್ಟು ಹಿಟ್ಟನ್ನು ತುಂಬಿ.

5) ಇಡ್ಲಿಗಳನ್ನು ಇಡ್ಲಿಪಾತ್ರೆಯಲ್ಲಿ ಸುಮಾರು ಎಂಟರಿಂದ ಹತ್ತು ನಿಮಿಷಗಳವರೆಗೆ ಹಬೆಯಲ್ಲಿ ಬೇಯಿಸಿ.

6) ಅಚ್ಚುಗಳಿಂದ ಹೊರತೆಗೆದ ಇಡ್ಲಿಗಳನ್ನು ಬಿಸಿಬಿಸಿಯಿರುವಂತೆಯೇ ಸವಿಯಿರಿ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *