
ಆಪರೇಶನ್ ಹಸ್ತದ ಟ್ರಯಲ್ ಆರಂಭಿಸಿದ ಕಾಂಗ್ರೆಸ್ – ಆರ್. ಅಶೋಕ್ ಆಪ್ತವಲಯಕ್ಕೆ ಕೊಡಲಿ ಪೆಟ್ಟು ಕೊಟ್ಟ ಡಿಕೆ ಬ್ರದರ್ಸ್..!
- ರಾಜಕೀಯ
- September 13, 2023
- No Comment
- 109
ನ್ಯೂಸ್ ಆ್ಯರೋ : ರಾಜ್ಯ ಬಿಜೆಪಿಯ ಪ್ರಮುಖ ನಾಯಕ ಆರ್. ಅಶೋಕ್ ಅವರ ಆಪ್ತರನ್ನೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರರು ಕಾಂಗ್ರೆಸ್ ಗೆ ಸೆಳೆದುಕೊಂಡು ಬಿಜೆಪಿ ನಾಯಕರಿಗೆ ಬಹುದೊಡ್ಡ ಶಾಕ್ ನೀಡಿದ್ದಾರೆ.
ಬೆಂಗಳೂರಿನ ಶಾಸಕರಲ್ಲೇ ಅತ್ಯಂತ ಪ್ರಭಾವಿ ಎನಿಸಿರುವ ಆರ್. ಅಶೋಕ್ ಹಲವು ವರ್ಷಗಳಿಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರೂ ಹೌದು. ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಪರೇಷನ್ ಹಸ್ತಕ್ಕೆ ಚಾಲನೆ ಕೊಟ್ಟಿರುವ ಡಿ.ಕೆ. ಸಹೋದರರು, ಅಶೋಕ್ ಅವರ ಶಿಷ್ಯರು ಹಾಗೂ ಅವರ ಗೆಲುವಿನ ರೂವಾರಿಗಳನ್ನೇ ಕಾಂಗ್ರೆಸ್ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಶೋಕ್ ಅವರ ಅತ್ಯಂತ ಆಪ್ತರನ್ನೇ ಕಾಂಗ್ರೆಸ್‌ಗೆ ಸೆಳೆದಿರುವ ಡಿಕೆಶಿ, ಮುಂದಿನ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಸೋಲಿನ ರುಚಿ ಉಣಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿರುವ ಮುಖಂಡರು ಅಶೋಕ ಜೊತೆಗೆ ಈಗಾಗಲೇ ಸಂಬಂಧ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಎಲ್. ಶ್ರೀನಿವಾಸ್, ಮಾಜಿ ಉಪ ಮಹಾಪೌರರು ಮತ್ತು ಮಾಜಿ ಪಾಲಿಕೆ ಸದಸ್ಯರು, ಆಂಜಿನಪ್ಪ, ಮಾಜಿ ನಗರಸಭೆ ಸದಸ್ಯರು, ಬೊಮ್ಮನಹಳ್ಳಿ, ಶೋಭಾ ಆಂಜಿನಪ್ಪ, ಮಾಜಿ ಬಿಬಿಎಂಪಿ ಸದಸ್ಯರು ಪದ್ಮನಾಭನಗರ ವಾರ್ಡ್, ಗೋವಿಂದ ರಾಜ್, ಗಣೇಶ ಮಂದಿರ ವಾರ್ಡ್ ಮಾಜಿ ಪಾಲಿಕೆ ಸದಸ್ಯರು. ಹೆಚ್. ನಾರಾಯಣ್, ಮಾಜಿ ಬಿಬಿಎಂಪಿ ಸದಸ್ಯರು, ಹೊಸಕೆರೆಹಳ್ಳಿ ವಾರ್ಡ್ ಮತ್ತು ಮಾಜಿ ಅಧ್ಯಕ್ಷರು ಆರೋಗ್ಯ ಸ್ಥಾಯಿ ಸಮಿತಿ ಬಿಬಿಎಂಪಿ, ವೆಂಕಟಸ್ವಾಮಿ ನಾಯ್ಡು, ಮಾಜಿ ಪಾಲಿಕೆ ಸದಸ್ಯರು, ಚಿಕ್ಕಲ್ಲಸಂದ್ರ ವಾರ್ಡ್, ಹೆಚ್. ಸುರೇಶ್ ಮಾಜಿ ಪಾಲಿಕೆ ಸದಸ್ಯರು, ಕುಮಾರಸ್ವಾಮಿ ಬಡಾವಣೆ ವಾರ್ಡ್, ಸುಪ್ರಿಯ ಶೇಖರ್, ಬಿಬಿಎಂಪಿ ಮಾಜಿ ಸದಸ್ಯರು, ಚಿಕ್ಕಕಲ್ಲಸಂದ್ರ ವಾರ್ಡ್, ಲಕ್ಷ್ಮಿ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್, ರಂಗದಾಮೇಗೌಡ್ರು , ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ. ಪ್ರಸಾದ್ ಬಾಬು, ಜಿಡಿಎಸ್ ಮುಖಂಡ, ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಪವನ್, ಬಿಜೆಪಿ ಮುಖಂಡ, ಪದ್ಮನಾಭ ನಗರ ಇವರೆಲ್ಲ ಆರ್. ಅಶೋಕ ನಡುವಳಿಕೆಯಿಂದ ಬೆಸತ್ತು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಅಶೋಕ್ ಬೆಂಬಲಿಗರಾಗಿದ್ದ ಮಾಜಿ ಉಪಮೇಯರ್, ಮಾಜಿ ಕಾರ್ಪೊರೇಟರ್‌ಗಳು ಸೇರಿದಂತೆ 8 ಜನ ಪ್ರಮುಖ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.