
ವಾಟ್ಸಾಪ್ ನಿಂದ ಇತರ ಆ್ಯಪ್ ಗಳಿಗೂ ಇನ್ನು ಸಂದೇಶ ಕಳುಹಿಸಬಹುದು..! – ಹೇಗೆ ಅಂತಿರಾ? ಈ ಸುದ್ದಿ ಓದಿ…
- ಟೆಕ್ ನ್ಯೂಸ್
- September 13, 2023
- No Comment
- 90
ನ್ಯೂಸ್ ಆ್ಯರೋ : ವಾಟ್ಸಾಪ್ ಬಳಕೆದಾರರರಿಗೆ ಒಂದು ಸಿಹಿ ಸುದ್ದಿ. ವಾಟ್ಸಾಪ್ ನಿಂದ ಇನ್ನು ಮುಂದೆ ಇತರ ಆ್ಯಪ್ ಗಳಿಗೂ ಮೆಸೇಜ್ ಮಾಡಬಹುದು.
ಚಾಟಿಂಗ್, ಕಾಲಿಂಗ್, ಹಣ ವರ್ಗಾವಣೆ ಸೇರಿದಂತೆ ಈಗಾಗಲೇ ವಾಟ್ಸಾಪ್ ನಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಹೊಸದಾಗಿ ಈಗ ಘೋಷಣೆ ಮಾಡಲಾದ ಈ ಸೌಲಭ್ಯ ಮಾತ್ರ ಮೆಸೆಜಿಂಗ್ ಆ್ಯಪ್‌ಗಳಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ.
ಈವರೆಗೆ ವಾಟ್ಸಾಪ್ ಬಳಕೆದಾರರು ಇನ್ನೋರ್ವ ವಾಟ್ಸಾಪ್ ಬಳಕೆದಾರರಿಗೆ ಮಾತ್ರ ಸಂದೇಶ ಕಳುಹಿಸಬಹುದಿತ್ತು. ಆದರೆ, ಇನ್ಮುಂದೆ ಇತರೆ ಆ್ಯಪ್‌ಗಳಿಗೂ ಸಂದೇಶ ಕಳುಹಿಸಬಹುದಾಗಿದೆ.
ಶೀಘ್ರದಲ್ಲೇ ವಾಟ್ಸಾಪ್ ನಲ್ಲಿ ಈ ವಿಶೇಷ ಸೌಲಭ್ಯ ಬರಲಿದೆ ಎಂದು ವಾಬೀಟಲ್ ಇನ್ಫೋ (WABetaInfo) ವರದಿ ಮಾಡಿದೆ.
ಏನು ವಿಶೇಷ ?
ವಾಟ್ಸಾಪ್ ಈಗ ಹೊಸ ಫೀಚರ್ಸ್‌ನ ಬೇಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ವಾಟ್ಸಾಪ್ ಬಳಕೆದಾರರನ್ನುಮಾತ್ರವಲ್ಲ ಇತರೆ ಆ್ಯಪ್‌ಗಳನ್ನು ಬಳಕೆ ಮಾಡಿಕೊಂಡು ಬಳಕೆದಾರರನ್ನು ಸಂಪರ್ಕಿಸಲು ಮತ್ತು ಸಂದೇಶ ಕಳುಹಿಸಲು ನೆರವಾಗುತ್ತದೆ.
ಈ ಹೊಸ ಫೀಚರ್ಸ್‌ನೊಂದಿಗೆ ವಾಟ್ಸಾಪ್ ಬಳಕೆದಾರರು ಮೆಸೆಂಜರ್‌ನಂತಹ ಇತರ ಆ್ಯಪ್‌ಗಳಿಗೆ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಮೆಸೆಂಜರ್ ಬಳಕೆದಾರರು ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡದೆಯೇ ಇತರ ವಾಟ್ಸಾಪ್ ಬಳಕೆದಾರರೊಂದಿಗೆ ಸಂವಹನ ನಡೆಸಬಹುದು. ಈ ಫೀಚರ್ ಎಲ್ಲರಿಗೂ ಲಭ್ಯವಾದರೆ ವಾಟ್ಸಾಪ್‌ನಲ್ಲಿ ಇದೊಂದು ಅತೀ ದೊಡ್ಡ ಬದಲಾವಣೆಯಾಗಲಿದೆ.
ಇತ್ತೀಚೆಗೆ ಬಿಡುಗಡೆಯಾದ ಆಂಡ್ರಾಯ್ಡ್ ಬೀಟಾ ಅಪ್‌ಡೇಟ್ (ಆವೃತ್ತಿ 2.23.19.8) ಥರ್ಡ್-ಪಾರ್ಟಿ ಚಾಟ್‌ಗಳು ಎಂಬ ಹೊಸ ಡಿಸ್‌ಪ್ಲೇ ಆಯ್ಕೆ ನೀಡುತ್ತದೆ. ಈ ಹೊಸ ಫೀಚರ್ಸ್ ಅನ್ನು ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿಲ್ಲ. ಪ್ರಸ್ತುತ ಈ ಚಾಟ್ ಫೀಚರ್ಸ್ ಅನ್ನು ಬೇಟಾ ಬಳಕೆದಾರರಲ್ಲಿ ಪರೀಕ್ಷೆ ಮಾಡಲಾಗುತ್ತಿದೆ.
ಎನ್‌ಕ್ರಿಪ್ಟ್ ಮಾಡಲಾದ ಮೆಸೇಜಿಂಗ್ ಆ್ಯಪ್ ಅನ್ನು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವಂತೆ ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಇದು ಮೆಟಾದ ಮೊದಲ ಹೆಜ್ಜೆಯಾಗದೆ.
ವಾಟ್ಸಾಪ್‌ನ ಮೂಲ ಕಂಪೆನಿ ಮೆಟಾವನ್ನು ಯುರೋಪಿಯನ್ ಕಮಿಷನ್ ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ ಅಡಿಯಲ್ಲಿ ಗೇಟ್ ಕೀಪರ್ ಎಂದು ವರ್ಗೀಕರಿಸಿದೆ. ಇದರ ಅನಂತರ, ವಾಟ್ಸಾಪ್ ಕ್ರಾಸ್-ಪ್ಲಾಟ್‌ಫಾರ್ಮ್ ಮೆಸೇಜಿಂಗ್ ಫೀಚರ್ಸ್‌ನ ಬೀಟಾ ಆವೃತ್ತಿಯನ್ನು ಪರಿಚಯಿಸಿದೆ.
ಅಂದರೆ ಮಾರ್ಚ್ 2024 ರಿಂದ ಪ್ರಾರಂಭವಾಗುವ ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಇತರ ಥರ್ಡ್-ಪಾರ್ಟಿ ಮೆಸೇಜಿಂಗ್ ಆಪ್‌ಗಳೊಂದಿಗೆ ವಾಟ್ಸಾಪ್ ಕಾರ್ಯನಿರ್ವಹಿಸುವಂತೆ ಮಾಡಬೇಕು. ಆ ಆಪ್‌ಗಳ ಬಳಕೆದಾರರು ವಾಟ್ಸಾಪ್ ಖಾತೆಯನ್ನು ಹೊಂದಿಲ್ಲದಿದ್ದರೂ ವಾಟ್ಸಾಪ್ ನಲ್ಲಿ ಜನರನ್ನು ಸಂಪರ್ಕಿಸಲು ಅನುಮತಿಸುತ್ತದೆ. ಅದರಲ್ಲೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸಂರಕ್ಷಿಸಲಾಗಿದ್ದರೂ, ಕ್ರಾಸ್-ಮೆಸೇಜಿಂಗ್‌ನೊಂದಿಗೆ ಯಾವ ರೀತಿಯ ಫೀಚರ್ಸ್ ಲಭ್ಯವಿರುತ್ತವೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.