
ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ – ಲಿಂಗಾಯತ ಸಮುದಾಯ, ಬಿಎಸ್ವೈಗೆ ಬೆದರಿತಾ ಹೈಕಮಾಂಡ್..!?
- ರಾಜಕೀಯ
- November 10, 2023
- No Comment
- 35
ನ್ಯೂಸ್ ಆ್ಯರೋ : ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ (BJP Karnataka President) ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಶಾಸಕ ಬಿವೈ ವಿಜಯೇಂದ್ರ (BY Vijayendra) ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ.
ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (JP Nadda) ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ರಾಜ್ಯಾಧ್ಯಕ್ಷ ಆಯ್ಕೆ ಚರ್ಚೆಗೆ ತೆರೆ ಬಿದ್ದಂತಾಗಿದೆ. ವಿಜಯೇಂದ್ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದಾರೆ.
ಇದರೊಂದಿಗೆ, ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಕೊನೆಗೊಂಡಿದೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಮುಂಚಿತವಾಗಿ ಆಗಿರುವ ಈ ಬದಲಾವಣೆ ಪಕ್ಷದ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ.

ಕಳೆದ ಮೇ ತಿಂಗಳಲ್ಲೇ ಎಲೆಕ್ಷನ್ ಮುಗಿದಿದ್ದು ಹೊಸ ಸರ್ಕಾರ ಬಂದು ಸುಮಾರು 7 ತಿಂಗಳೇ ಕಳೆದಿತ್ತು. ಹೀಗಿದ್ರು ಕೂಡ ಬಿಜೆಪಿ ಹೈಕಮಾಂಡ್ ವಿರೋಧ ಪಕ್ಷ ನಾಯಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿರ್ಲಿಲ್ಲ.
ಈ ಹುದ್ದೆಗಳಿಗೆ ದೊಡ್ಡ ಪೈಪೋಟಿ ಕೂಡ ನಡೆದಿತ್ತು. ಮತ್ತೊಂದು ಕಡೆ ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಲಿಂಗಾಯತ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಂಡಿದೆ ಅನ್ನೋ ವಿಶ್ಲೇಷಣೆ ಆಗಿತ್ತು.
ಚುನಾವಣೆಯಲ್ಲಿ ಬಿಜೆಪಿ ಇದರ ಎಫೆಕ್ಟ್‌ನ್ನ ಕೂಡ ಅನುಭವಿಸಿತ್ತು. ಈಗ ಕೊನೆಗೂ ಅಳೆದು ತೂಗಿ ಹೈಕಮಾಂಡ್ ಬಿಎಸ್‌ವೈ ಪುತ್ರನ ಹೆಗಲಿಗೆ ರಾಜ್ಯ ಬಿಜೆಪಿ ನೊಗವನ್ನು ಹೊರಸಿದೆ. ಈ ಮೂಲಕ ಹೈಕಮಾಂಡ್ ಬಿಎಸ್‌ವೈ ಹಾಗೂ ಲಿಂಗಾಯತ ಸಮುದಾಯವನ್ನು ಒಂದು ರೀತಿ ಸಂತೃಪ್ತಿ ಪಡಿಸೋ ಪ್ರಯತ್ನ ಮಾಡಿದೆ.