
ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸಿದ ಉರ್ಫಿ – ನಿಮಗೆ ಹೀಗೂ ಡ್ರೆಸ್ ಮಾಡೋಕೆ ಬರುತ್ತಾ ಎಂದ ನೆಟ್ಟಿಗರು..!
- ಮನರಂಜನೆ
- November 10, 2023
- No Comment
- 61
ನ್ಯೂಸ್ ಆ್ಯರೋ : ಹಬ್ಬ ಎಂದರೆ ಎಲ್ಲರನ್ನೂ ರಂಗೇರುವಂತೆ ಮಾಡುತ್ತದೆ. ಸದಾ ಚಿತ್ರವಿಚಿತ್ರ ಉಡುಗೆಗಳನ್ನು ತೊಟ್ಟು ಗಮನ ಸೆಳೆಯುವ ನಟಿ, ಮಾಡೆಲ್ ಉರ್ಫಿ ಜಾವೇದ್ ಈಗ ಸಾಂಪ್ರದಾಯಿಕ ಧಿರಿಸಿನಿಂದ ಕಂಗೊಳಿಸಿದ್ದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.
ಪ್ರತಿ ಹಬ್ಬಗಳಿಗೆ ಉರ್ಫಿ ಜಾವೇದ್ ಸಾಂಪ್ರದಾಯಿಕ ಉಡುಗೆ ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಶೇರ್ ಮಾಡಿರುವ ಫೋಟೋಗೆ ಸಾಕಷ್ಟು ಮೆಚ್ಚುಗೆಗಳೂ ಬಂದಿದ್ದು, ಕೆಲವೇ ಹೊತ್ತಿನಲ್ಲಿ ಸಾಕಷ್ಟು ವೈರಲ್ ಆಗಿದೆ. ಅವರ ಟ್ರೆಡಿಷನಲ್ ಲುಕ್ ನೋಡಿ ಕೆಲವರು ಸೂಪರ್ ಮೇಡಂ ಅಂದ್ರೆ ಇನ್ನು ಕೆಲವರು ನಿಮಗೆ ಈ ರೀತಿ ಡ್ರೆಸ್ ಮಾಡೋಕೂ ಬರುತ್ತಾ ಎಂದು ಪ್ರಶ್ನಿಸಿದ್ದಾರೆ.
ಅಂದ ಹಾಗೆ ಇದು ಅವರದ್ದು ನವರಾತ್ರಿ ಹಬ್ಬದ ವೇಳೆ ತೆಗೆಸಿರುವ ಚಿತ್ರ. ಆದರೆ ಇತ್ತೀಚೆಗಷ್ಟೇ ಅವರು ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಲರ್ಫುಲ್ ಡ್ರೆಸ್ನಲ್ಲಿ ಅತ್ಯಂತ ಸುಂದರವಾಗಿ ಕಾಣುವ ಅವರನ್ನು ನೋಡಿ ಹಲವಾರು ಫಿದಾ ಆಗಿದ್ದಾರೆ.
ಪಿಂಕ್ ಕಲರ್ ಹೈಲೈಟ್ ಆಗಿರುವ ಉದ್ದದ ಲೆಹೆಂಗಾ ಹಾಗೂ ಟಾಪ್ ಜೊತೆ ದುಪಟ್ಟಾ ಧರಿಸಿ ಮಿಂಚಿರುವ ಉರ್ಫಿ ಜಾವೇದ್ ಇದರೊಂದಿಗೆ ಗ್ರೀನ್ ಸೂಟ್ ಧರಿಸಿಯೂ ಫೋಟೋ ತೆಗೆಸಿಕೊಂಡಿದ್ದಾರೆ.
ಗ್ರೀನ್ ಸಲ್ವಾರ್ ಧರಿಸಿದ ಉರ್ಫಿ ಜಾವೇದ್ ಅವರನ್ನು ನೋಡಿದ ಹಲವು ನೆಟ್ಟಿಗರು ಇದರ ಕ್ರಡಿಟ್ ಅನ್ನು ಎಲ್ವಿಶ್ ಯಾದವ್ಗೆ ಕೊಟ್ಟಿದ್ದು, ಉರ್ಫಿಯಲ್ಲಿ ಈ ಬದಲಾವಣೆಗೆ ಎಲ್ವಿಶ್ ಕಾರಣ ಎಂದಿದ್ದಾರೆ.
ಯಾವಾಗಲೂ ತುಂಡುಡುಗೆಯನ್ನೇ ಧರಿಸಿಕೊಂಡು ಜನರ ಮುಂದೆ ಬರುವ ಉರ್ಫಿಯ ಈ ಅವತಾರಕ್ಕೆ ಮೆಚ್ಚುಗೆಯ ಸುರಿಮಳೆಯೇ ಹರಿದಿದೆ.