ಪ್ರತಿಪಕ್ಷಗಳು ನನ್ನೊಬ್ಬನಿಗೆ ಸಮ, ಕೆಸರು ಎರಚಿದಷ್ಟು ಕಮಲ ಅರಳುತ್ತದೆ – ರಾಜ್ಯಸಭೆಯಲ್ಲಿ ಎದೆತಟ್ಟಿ ಗುಡುಗಿದ ಪ್ರಧಾನಿ ಮೋದಿ

ಪ್ರತಿಪಕ್ಷಗಳು ನನ್ನೊಬ್ಬನಿಗೆ ಸಮ, ಕೆಸರು ಎರಚಿದಷ್ಟು ಕಮಲ ಅರಳುತ್ತದೆ – ರಾಜ್ಯಸಭೆಯಲ್ಲಿ ಎದೆತಟ್ಟಿ ಗುಡುಗಿದ ಪ್ರಧಾನಿ ಮೋದಿ

ನ್ಯೂಸ್‌ ಆ್ಯರೋ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಇಡೀ ಪ್ರತಿಪಕ್ಷಗಳು ನನ್ನೊಬ್ಬನಿಗೆ ಸಮ ಅಲ್ಲ ಎಂದು ಎದೆ ತಟ್ಟಿಕೊಂಡು ಗುಡುಗಿದರು. ಇವರ ಮಾತಿಗೆ ಪಕ್ಷದ ನಾಯಕರು ಮೇಜನನ್ನು ಕುಟ್ಟಿ ಖುಷಿ ವ್ಯಕ್ತಪಡಿಸಿದರು.

ಗುರುವಾರ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಪ್ರತಿಪಕ್ಷಗಳು ದೇಶದ ಕಲ್ಯಾಣಕ್ಕಿಂತ ಕೇವಲ ರಾಜಕೀಯ ಮಹತ್ವಕಾಂಕ್ಷೆಯ ಬಗ್ಗೆ ಮಾತನಾಡುತ್ತಿವೆ.

ನಾವು ದೇಶವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದೇವೆ. ನಮ್ಮ ನೀತಿಗಳು ರಾಷ್ಟ್ರ ಹಾಗೂ ಪ್ರಾದೇಶಿಕ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತಿವೆ. ಆದರೆ, ಕಾಂಗ್ರೆಸ್ ಪಕ್ಷ ಇದೀಗ ದೇಶವನ್ನು ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದರು. ರಾಜ್ಯಸಭೆಯಲ್ಲಿ ವಿಪಕ್ಷಗಳು ಎಷ್ಟೇ ಆರೋಪ ಮಾಡಿದರೂ, ಕೆಸರು ಎರಚಿದಷ್ಟೂ ಕಮಲ ಮತ್ತಷ್ಟು ಅರಳುತ್ತದೆ ಎಂದರು.

https://fb.watch/iBLNzNxsN6/

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಒಬ್ಬ ವ್ಯಕ್ತಿ ಹೇಗೆ ಹಲವರನ್ನು ಬಲವಾಗಿ ಎದುರಿಸುತ್ತಿದ್ದಾನೆ ಎಂಬುದನ್ನು ರಾಷ್ಟ್ರ ಗಮನಿಸುತ್ತಿದೆ. ವಿರೋಧ ಪಕ್ಷಗಳು ನನ್ನ ವಿರುದ್ಧ ಹೊಸ ಘೋಷಣೆಗಳನ್ನು ಹುಡುಕಬೇಕಿದೆ. ನಾನು ದೇಶಕ್ಕಾಗಿ ಬದುಕುವುದನ್ನು ಮುಂದುವರೆಸುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು.

ಸ್ವಾತಂತ್ರ್ಯ ನಂತರ ದೇಶ ಕಟ್ಟುವಲ್ಲಿ ಜವಹರ್ ಲಾಲ್ ನೆಹರು ಅವರ ಪ್ರಯತ್ನಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ನೆಹರೂ ಅತ್ಯುತ್ತಮ ನಾಯಕರಾದರೆ ಅವರ ತಲೆಮಾರಿನ ಜನರು, ನೆಹರೂ ಅನ್ನು ತಮ್ಮ ಉಪನಾಮವಾಗಿ ಏಕೆ ಇಟ್ಟುಕೊಂಡಿಲ್ಲ‌? ಭಯವೇ ಅಥವಾ ನಾಚಿಕೆಯೇ ಎಂದರು.

ಸರಕಾರದ 600 ಕಾರ್ಯಕ್ರಮಗಳು ಗಾಂಧಿ-ನೆಹರೂ ಕುಟುಂಬದವರ ಹೆಸರುಗಳಲ್ಲಿವೆ ಎಂದು ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ಕೋವಿಡ್-19 ಲಸಿಕೆ ಕಂಡುಹಿಡಿದ ಭಾರತೀಯ ವಿಜ್ಞಾನಿಗಳನ್ನು ಅಪಮಾನಿಸಿದೆ. ಅವರ ಆಡಳಿತ ಅವಧಿಯಲ್ಲಿ ಬುಡಕಟ್ಟು ಸಮುದಾಯ, ಸಣ್ಣ ಮತ್ತು ಅತಿ ಸಣ್ಣ ರೈತರನ್ನು ನಿರ್ಲಕ್ಷಿಸಲಾಗಿತ್ತು ಎಂದು ಆರೋಪಿಸಿದರು.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *