ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? – ಬದಲಾಗಿರುವ ಗೋಲ್ಡ್ ಲೋನ್ ಹೊಸ ನಿಯಮಗಳನ್ನು ಗಮನಿಸಿ…

ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? – ಬದಲಾಗಿರುವ ಗೋಲ್ಡ್ ಲೋನ್ ಹೊಸ ನಿಯಮಗಳನ್ನು ಗಮನಿಸಿ…

ನ್ಯೂಸ್ ಆ್ಯರೋ : ಅನಿವಾರ್ಯ ಸಂದರ್ಭಗಳಲ್ಲಿ ಹಣದ ಅವಶ್ಯಕತೆ ಇದ್ದಾಗ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯ ಧನಸಹಾಯವನ್ನು ಬಯಸುತ್ತಾರೆ. ಅದಕ್ಕಾಗಿ ಬ್ಯಾಂಕ್ ಅಥವಾ ಫೈನಾನ್ಸ್ ಗಳಿಂದ ಸಾಲ ಪಡೆಯುವುದಕ್ಕೂ ಮುಂದಾಗುತ್ತೇವೆ. ಯಾವುದೇ ಉದ್ಯೋಗದಲ್ಲಿ ಇದ್ದರೂ ಸ್ವಂತ ಉದ್ದಿಮೆ ಮಾಡುತ್ತಿದ್ದರೂ ಕೂಡ ಯಾವುದೇ ಅಡಮಾನ ಇಲ್ಲದೆ ವೈಯಕ್ತಿಕ ಸಾಲವನ್ನು ಸುಲಭವಾಗಿ ಪಡೆಯಬಹುದು.

ಆದರೆ ವೈಯಕ್ತಿಕ ಸಾಲ ಹಾಗೂ ಚಿನ್ನದ ಮೇಲಿನ ಸಾಲ ಎನ್ನುವ ಆಯ್ಕೆ ಬಂದಾಗ ಯಾವುದು ಉತ್ತಮ ಆಯ್ಕೆ ಎಂಬುದನ್ನು ಮತ್ತು ಚಿನ್ನದ ಮೇಲಿನ ಸಾಲದ ಕೆಲವು ಬದಲಾದ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು.

ವೈಯಕ್ತಿಕ ಸಾಲದ ಮೇಲಿನ ನಿಯಮ ಬದಲಾವಣೆ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ನೀಡಲಾಗುವ ವೈಯಕ್ತಿಕ ಸಾಲದ ಮೇಲಿನ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಇದಕ್ಕೆ ಮುಖ್ಯ ಕಾರಣ ವೈಯಕ್ತಿಕ ಸಾಲ ಯಾವುದೇ ಗ್ಯಾರಂಟಿ ತೆಗೆದುಕೊಳ್ಳದೆ ಕೊಡುವಂತಹ ಸಾಲವಾಗಿರುತ್ತದೆ. ಇದರೊಂದಿಗೆ ಈ ಸಾಲವನ್ನು ತೆಗೆದುಕೊಂಡ ವ್ಯಕ್ತಿ ಸಾಲ ಮರುಪಾವತಿ ಮಾಡದೆ ಇದ್ದರೆ ಆತ ಡೀಫಾಲ್ಟರ್ ಆಗುತ್ತಾನೆ. ಹಾಗೂ ಇದು ಬ್ಯಾಂಕಿಗೆ ನಷ್ಟವು ಆಗಬಹುದು. ಆದ್ದರಿಂದ ವೈಯಕ್ತಿಕ ಸಾಲದ ನಿಯಮಗಳನ್ನು ಇನ್ನಷ್ಟು ಬಲಪಡಿಸಲಾಗಿದೆ. ಅದೇ ರೀತಿ ಬಡ್ಡಿ ದರ ಕೂಡ ಜಾಸ್ತಿಯಾಗಿದೆ ಎನ್ನಲಾಗಿದೆ‌.

ಚಿನ್ನದ ಮೇಲಿನ ಸಾಲದಲ್ಲಿ ಬದಲಾದ ನಿಯಮ!

ಇದೀಗ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಲು ನೀವು ಬಯಸಿದರೆ ಬದಲಾದ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುವುದಿದ್ದರೆ ಈಗ ಬಹಳ ಬೇಗ ಸಾಲ ಪಡೆಯಬಹುದು. ನೀವು ಚಿನ್ನವನ್ನು ಅಡವಿಟ್ಟು ಕೆಲವೇ ನಿಮಿಷಗಳಲ್ಲಿ ನಿಮಗೆ ಸಾಲ ಸೌಲಭ್ಯ ಸಿಗುತ್ತದೆ. ಅಷ್ಟೇ ಅಲ್ಲ ಆನ್ಲೈನ್ ಮೂಲಕವೂ ಕೂಡ ಚಿನ್ನದ ಮೇಲಿನ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.

ಚಿನ್ನದ ಮೇಲಿನ ಸಾಲದ ಲಾಭಗಳು!

ಚಿನ್ನದ ಮೇಲಿನ‌ಸಾಲದ ಪ್ರಮುಖ ಪ್ರಯೋಜನ ಅಂದ್ರೆ ನೀವು ವೈಯಕ್ತಿಕ ಸಾಲದಂತೆ ಚಿನ್ನದ ಸಾಲಕ್ಕೆ ಪ್ರತಿ ತಿಂಗಳು EMI ಪಾವತಿಸಬೇಕಾಗಿಲ್ಲ. ನೀವು ಸಾಲ ತೆಗೆದುಕೊಂಡ ತಕ್ಷಣವೇ ಸಂಪೂರ್ಣ ಬಡ್ಡಿಯನ್ನು ಪಾವತಿಸಿ ಸಾಲದ ಅವಧಿ ಮುಗಿಯುವಾಗ ಉಳಿದ ಹಣವನ್ನು ಪಾವತಿಸಬಹುದು ಅಥವಾ ಪ್ರತಿ ತಿಂಗಳು ಕೇವಲ ಬಡ್ಡಿಯನ್ನು ಮಾತ್ರ ಪಾವತಿಸಿ ಸಂಪೂರ್ಣ ಅಸಲು ಮೊತ್ತವನ್ನು ಸಾಲದ ಅವಧಿ ಮುಗಿದಾಗ ಪಾವತಿಸಬಹುದು.

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಕೂಡ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ನೀವು ಇಡುವ ಚಿನ್ನಕ್ಕೆ ಹೆಚ್ಚಿನ ಮೊತ್ತದ ಸಾಲವನ್ನು ಕೂಡ ಪಡೆದುಕೊಳ್ಳಬಹುದು. ನಿಮ್ಮ ಚಿನ್ನಕ್ಕೆ ಎಷ್ಟು ಸಾಲ ಸಿಗುತ್ತದೆ ಎಂಬುದನ್ನು ಬ್ಯಾಂಕ್ ನಿರ್ಧರಿಸುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *