ಚೀನಾದಲ್ಲಿ ದಿನವೊಂದಕ್ಕೆ 9 ಸಾವಿರ ಮಂದಿಯನ್ನು ಬಲಿ ಪಡೆಯುತ್ತಿದೆ ಕೊರೊನಾ – ವೈರಾಣು ಬಲೆಯಲ್ಲಿ ಸಿಲುಕಿ ನರಳುತ್ತಿದೆ ಚೀನಾ

ಚೀನಾದಲ್ಲಿ ದಿನವೊಂದಕ್ಕೆ 9 ಸಾವಿರ ಮಂದಿಯನ್ನು ಬಲಿ ಪಡೆಯುತ್ತಿದೆ ಕೊರೊನಾ – ವೈರಾಣು ಬಲೆಯಲ್ಲಿ ಸಿಲುಕಿ ನರಳುತ್ತಿದೆ ಚೀನಾ

ನ್ಯೂಸ್ ಆ್ಯರೋ : ಕೊರೊನಾ ವೈರಸ್ ಸೋಂಕಿನ ಮೊದಲು ಮೂರು ಅಲೆಗಳಿಂದ ಬಚಾವಾಗಿದ್ದ ಚೀನಾ ಇದೀಗ ವೈರಾಣು ಬಲೆಯಲ್ಲಿ ಸಿಲುಕಿದ್ದು, ಹೊರಬರುವ ಮಾರ್ಗ ಕಾಣದೆ ಪರಿತಪಿಸುತ್ತಿದೆ. ಚೀನಾದಲ್ಲಿ ಪ್ರತಿದಿನ ಸರಾಸರಿ 9,000 ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಪ್ರತಿದಿನ ವರದಿಯಾಗುತ್ತಿರುವ ಸರಾಸರಿ ಸೋಂಕು ಪ್ರಕರಣಗಳು 10 ಲಕ್ಷ ದಾಟಿದೆ.

ಜಗತ್ತಿನಲ್ಲಿ ಈವರೆಗೆ ವರದಿಯಾಗಿದ್ದ ಸೋಂಕು ಪ್ರಸರಣದ ದಾಖಲೆಗಳನ್ನು ಇದು ಮುರಿದಿದ್ದು, ಚೀನಾ ಮೇಲೆ ಹಲವು ಕಾರಣಗಳಿಂದ ಅವಲಂಬಿತವಾಗಿರುವ ದೇಶಗಳಲ್ಲಿ ಆರ್ಥಿಕತೆ ಕುಸಿದು ಬೀಳುವ ಆತಂಕ ಎದುರಾಗಿದೆ.

ಚೀನಾದ ಜನಸಂಖ್ಯೆ ಸುಮಾರು 140 ಕೋಟಿ. ಸೋಂಕು ಹರಡುವಿಕೆ ಇದೇ ಪ್ರಮಾಣದಲ್ಲಿ ಮುಂದುವರಿದರೆ ಜನವರಿ ತಿಂಗಳ ಮಧ್ಯಭಾಗದ ಹೊತ್ತಿಗೆ ದಿನಕ್ಕೆ ಸರಾಸರಿ 37 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ ಎಂದು ಲಂಡನ್ ಮೂಲದ ಏರ್​ಫಿನಿಟಿ ಲಿಮಿಟೆಡ್​ನ ಸಮೀಕ್ಷೆಯು ತಿಳಿಸಿದೆ.

ಮಾರ್ಚ್​​ ವೇಳೆಗೆ ದೈನಂದಿನ ಸೋಂಕು ಪ್ರಮಾಣ 42 ಲಕ್ಷಕ್ಕೆ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಈ ಅಂಕಿಅಂಶಗಳು ಚೀನಾ ಸರ್ಕಾರ ಒದಗಿಸುತ್ತಿರುವ ರಾಷ್ಟ್ರೀಯ ಸರಾಸರಿಗಿಂತಲೂ ಹಲವು ಪಟ್ಟು ಹೆಚ್ಚಾಗಿದೆ. ಕೊವಿಡ್​ ವಿಚಾರದಲ್ಲಿ ಈವರೆಗೆ ಅನುಸರಿಸುತ್ತಿದ್ದ ಶೂನ್ಯ ಸಹಿಷ್ಣುತೆ ನೀತಿಯಿಂದ ಹೊರಬರುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದ ನಂತರ ಚೀನಾದಲ್ಲಿ ಏಕಾಏಕಿ ಸೋಂಕು ಪ್ರಕರಣಗಳು ಹೆಚ್ಚಾಗಿವೆ.

ಇಷ್ಟಾದರೂ ಚೀನಾ ಸಾವು ಪ್ರಕರಣಗಳ ಸಂಖ್ಯೆಯೂ ಸಾಕಷ್ಟು ಕಡಿಮೆಯಿದೆ ಎಂದು ಹೇಳಿಕೊಂಡಿದೆ. ಆದರೆ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು ಮತ್ತು ಚಿತಾಗಾರ ಮತ್ತು ಸ್ಮಶಾನಗಳಲ್ಲಿ ಸಂಸ್ಕಾರಕ್ಕಾಗಿ ಕಾಯುತ್ತಿರುವ ಹೆಣಗಳು ಬೇರೊಂದು ಸಂದೇಶ ನೀಡುತ್ತಿವೆ. ಚಿತಾಗಾರಗಳಲ್ಲಿ ಕೆಲಸ ಮಾಡುವವರು ಅಂತ್ಯಗಾಣದ ಹೆಣಗಳ ಸಾಲಿನಿಂದ ಹೈರಾಣಾಗಿದ್ದಾರೆ. ಕೊರೊನಾ ಸೋಂಕು ಮತ್ತು ಕೊರೊನಾ ಸೋಂಕಿನಿಂದ ಸಾವು ಎನ್ನುವುದರ ವ್ಯಾಖ್ಯಾನವನ್ನೂ ಚೀನಾ ಬದಲಿಸಿಕೊಂಡಿದೆ. ಹೀಗಾಗಿ ಅಲ್ಲಿನ ಪ್ರಾದೇಶಿಕ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಅಂಕಿಅಂಶಗಳ ಬಗ್ಗೆ ವಿಶ್ವದ ಇತರ ದೇಶಗಳು ಸಂದೇಹ ವ್ಯಕ್ತಪಡಿಸುತ್ತಿವೆ. ತೀವ್ರವೇಗದಲ್ಲಿ ಸೋಂಕು ಹರಡುವ ಒಮಿಕ್ರಾನ್ ರೂಪಾಂತರಿ ಚೀನಾದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ.

ಇನ್ನೂ ಚೀನಾದಲ್ಲಿ ಇದಕ್ಕೂ ಮೊದಲು ಜೀರೋ ಕೋವಿಡ್ ಪಾಲಿಸಿ ಇತ್ತು. ಯಾವುದೇ ಒಂದು ಕಟ್ಟಡದಲ್ಲಿ, ಒಬ್ಬರಿಗೆ ಸೋಂಕು ತಗುಲಿದರೂ ಇಡೀ ಕಟ್ಟಡ ಸೀಲ್‌ಡೌನ್ ಮಾಡುತ್ತಿದ್ದರು. ಇದರಿಂದಾಗಿ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ, ಕ್ವಿನ್‌ಜಾಂಗ್ ನಗರದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, 16 ಜನ ಮೃತಪಟ್ಟರು. ಇದಾದ ಬಳಿ, ದೇಶದ ಹಲವೆಡೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದವು.

ಜೀರೋ ಕೋವಿಡ್ ನೀತಿ ರದ್ದುಗೊಳಿಸಬೇಕು ಎಂಬ ಆಕ್ರೋಶ ವ್ಯಕ್ತವಾಯಿತು. ಇದರಿಂದಾಗಿ ಸರ್ಕಾರ ನೀತಿಯನ್ನು ರದ್ದುಗೊಳಿಸಿತು. ಹಾಗಾಗಿ, ಕೊರೊನಾ ಹಾವಳಿ ಜಾಸ್ತಿಯಾಗಿದ್ದು, ಜೀರೋ ಕೋವಿಡ್ ನೀತಿಯು ರದ್ದಾದ ಕಾರಣ ಈಗ ಕಾರಂಟೈನ್ ಲಾಕ್‌ಡೌನ್ ಎಲ್ಲ ನಿಯಮಗಳನ್ನು ರದ್ದುಗೊಳಿಸಲಾಗಿದೆ. ಈಗ ಕೊರೊನಾ ದೃಢಪಟ್ಟರೂ ಯಾರು ಕೂಡ ಅವರನ್ನು ಕಾರಂಟೈನ್‌ನಲ್ಲಿರಿಸುವುದಿಲ್ಲ. ಹಾಗಾಗಿ, ಮನೆಯಿಂದ ಹೊರಗೆ ಕಾಲಿಟ್ಟರೂ ಸೋಂಕು ತಗುಲುತ್ತಿದೆ. ಇದು ಜನರ ಮೇಲೆ ಭಾರಿ ಪರಿಣಾಮ ಬೀರುತ್ತಿದ್ದು, ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *