ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ರೂಪೇಶ್ ಶೆಟ್ಟಿ ಗೆದ್ದ ಹಣವೆಷ್ಟು ಗೊತ್ತಾ..? – ಗೆದ್ದ ಹಣದಲ್ಲಿ 18 ಲಕ್ಷ ರೂಪಾಯಿ ಕಡಿತ ಆಗಿದ್ದೇಕೆ?

ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ರೂಪೇಶ್ ಶೆಟ್ಟಿ ಗೆದ್ದ ಹಣವೆಷ್ಟು ಗೊತ್ತಾ..? – ಗೆದ್ದ ಹಣದಲ್ಲಿ 18 ಲಕ್ಷ ರೂಪಾಯಿ ಕಡಿತ ಆಗಿದ್ದೇಕೆ?

ನ್ಯೂಸ್ ಆ್ಯರೋ : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಮುಕ್ತಾಯಗೊಂಡಿದ್ದು, ಕರಾವಳಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಓಟಿಟಿ ವಿನ್ನರ್ ಆಗಿದ್ದ ರೂಪೇಶ್, ಸೀಸನ್ 9 ಅನ್ನು ಗೆದ್ದು ಬೀಗಿದ್ದಾರೆ. ನಟ ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ.

ಡಿಸೆಂಬರ್ 30 ಮತ್ತು 31ರಂದು ಬಿಗ್ ಬಾಸ್ ಸೀಸನ್ 9’ನ ಗ್ರಾಂಡ್ ಫಿನಾಲೆ ನಡೆದಿತ್ತು. ಐದು ಮಂದಿ ಸ್ಪರ್ಧಿಗಳಲ್ಲಿ ರೂಪೇಶ್ ಶೆಟ್ಟಿ ಟಾಪರ್ ಆಗಿ ಮಿಂಚಿದ್ದು, ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಆಫ್ ಕೋಟಿ ರೂಪಾಯಿ ರೂಪೇಶ್ ಕೈ ಸೇರಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ಕಿಚ್ಚನ ಸಮ್ಮುಖದಲ್ಲಿ ಬಿಗ್ ಬಾಸ್ ಸೀಸನ್ 9 ವಿನ್ನರ್ ಆಗಿ ರೂಪೇಶ್ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೂಪೇಶ್ ಶೆಟ್ಟಿಗೆ ಭಾರಿ ಅಭಿಮಾನಿಗಳಿದ್ದು, ಕರಾವಳಿ ಮಾತ್ರವಲ್ಲದೆ ರಾಜ್ಯದಾದ್ಯಂತ ಉತ್ತಮ ಬೆಂಬಲ ಸಿಕ್ಕಿದೆ.

ವಿನ್ನರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ಜೊತೆಗೆ ದೊಡ್ಡ ಮೊತ್ತದ ಹಣವನ್ನೂ ಮನೆಗೆ ಕೊಂಡೊಯ್ದಿದ್ದಾರೆ. ಬಿಗ್ ಬಾಸ್ ಸೀಸನ್ 9 ಅನ್ನು ಗೆದ್ದ ರೂಪೇಶ್’ಗೆ 60 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ. ಕಲರ್ಸ್ ಕನ್ನಡ ಕಡೆಯಿಂದ 50 ಲಕ್ಷ ಹಾಗೂ 10 ಲಕ್ಷ ರೂಪಾಯಿ ಸ್ಪಾನ್ಸರ್ ಕಡೆಯಿಂದ ಸಿಕ್ಕಿದೆ. 60 ಲಕ್ಷ ರೂಪಾಯಿಗೆ ಶೇ.30 ಟ್ಯಾಕ್ಸ್ ಬೀಳಲಿದ್ದು, 18 ಲಕ್ಷ ರೂ. ಕಟ್ ಆಗಲಿದೆ.

ಒಟ್ಟಾರೆ ವಿನ್ನರ್ ರೂಪೇಶ್ ಶೆಟ್ಟಿ 42 ಲಕ್ಷ ರೂಪಾಯಿಯನ್ನು ಜೇಬಿಗಿಳಿಸಲಿದ್ದಾರೆ. ರೂಪೇಶ್ ಶೆಟ್ಟಿ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ವಿಶ್ ಮಾಡುತ್ತಿದ್ದಾರೆ. 

ಕಳೆದ ಸೆ. 24ರಂದು ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿತ್ತು. ಓಟಿಟಿ ಮೊದಲ ಸೀಸನ್’ನ ನಾಲ್ಕು ಟಾಪ್ ಸ್ಪರ್ಧಿಗಳು, ಹಳೆಯ ಸೀಸನ್’ಗಳ ಐವರು ಹಾಗೂ ಹೊಸದಾಗಿ 9 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9ಗೆ ಎಂಟ್ರಿಕೊಟ್ಟಿದ್ದರು. ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ಸಾನ್ಯಾ ಅಯ್ಯರ್, ರಾಕೇಶ್ ಅಡಿಗ, ಅರುಣ್ ಸಾಗರ್, ದೀಪಿಕಾ ದಾಸ್, ದಿವ್ಯ ಉರುಡುಗ, ಪ್ರಶಾಂತ್ ಸಂಬರ್ಗಿ, ಅನುಪಮಾ, ಅಮೂಲ್ಯ ಗೌಡ, ನೇಹಾ ಗೌಡ, ಮಯೂರಿ, ಕಾವ್ಯಶ್ರೀ, ವಿನೋದ್ ಗೊಬ್ರಗಾಲ, ಐಶ್ವರ್ಯ ಪಿಸ್ಸೇ, ದರ್ಶ್ ಚಂದ್ರಪ್ಪ, ರೂಪೇಶ್ ರಾಜಣ್ಣ, ನವಾಜ್ ದೊಡ್ಮನೆಯೊಳಗೆ ಕಾಲಿಟ್ಟಿದ್ದರು.

ಅಂತಿಮವಾಗಿ ದಿವ್ಯಾ ಉರುಡುಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಫಿನಾಲೆಗೆ ಎಂಟ್ರಿಕೊಟ್ಟಿದ್ದರು. ಟಾಪ್ 5ನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಮನೆಯಿಂದ ಹೊರಬಂದರು. ರೂಪೇಶ್ ರಾಜಣ್ಣ 4ನೇ ಸ್ಥಾನ ಪಡೆದಿದ್ದು, ದೀಪಿಕಾ ದಾಸ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಗ್ರಾಂಡ್ ಫಿನಾಲೆ ವೇದಿಕೆಗೆ ಕಾಲಿಟ್ಟ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಕೈ ಹಿಡಿದ ಕಿಚ್ಚ ಸುದೀಪ್ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೆಸರು ಅನೌನ್ಸ್ ಮಾಡಿದರು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *