
ದೇಶದ ಕರೆಂಟ್ ಡಿಫಿಸಿಟ್ 39.4 ಶತಕೋಟಿ ಡಾಲರ್ ಗೆ ಏರಿಕೆ – ಜಿಡಿಪಿ ದರದಲ್ಲಿ ಶೇಕಡಾ 4.4 ಜಿಗಿತ
- ಹಣಕಾಸು
- January 2, 2023
- No Comment
- 82
ನ್ಯೂಸ್ ಆ್ಯರೋ : ಭಾರತೀಯ ಮಾರುಕಟ್ಟೆ ಹಾಗೂ ವಿದೇಶಿ ಮಾರುಕಟ್ಟೆಯ ಆಮದು ಮತ್ತು ರಫ್ತಿನ ನಡುವೆ ಉಂಟಾಗಿರುವ ಭಾರಿ ಅಂತರದ ಪರಿಣಾಮ ಕರೆಂಟ್ ಅಕೌಂಟ್ ಡಿಫಿಸಿಟ್ ಕೂಡ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿಯ 4.4%ಕ್ಕೆ ಏರಿಕೆಯಾಗಿದೆ.
ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಕರೆಂಟ್ ಅಕೌಂಟ್ ಡಿಫಿಸಿಟ್ 39.4 ಶತಕೋಟಿ ಡಾಲರ್ ಅಂದರೆ 2.98 ಲಕ್ಷ ಕೋಟಿ ರೂಪಾಯಿ ವೃದ್ಧಿಸಿದೆ ಎಂದು ಆರ್‌ಬಿಐ ಬಿಡುಗಡೆಗೊಳಿಸಿದ ವರದಿ ಹೇಳಿದೆ.
ಈ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕರೆಂಟ್ ಅಕೌಂಟ್ ಡಿಫಿಸಿಟ್ 18.9 ಶತಕೋಟಿ ಡಾಲರ್ ಇತ್ತು. ( 1.49 ಲಕ್ಷ ಕೋಟಿ ರೂ.) ಹೀಗಿದ್ದರೂ, 2022ರ ಜುಲೈ ಬಳಿಕ ವಿದೇಶಿ ನೇರ ಬಂಡವಾಳ ಹೂಡಿಕೆಯ ಒಳಹರಿವಿನಲ್ಲಿ ಏರಿಕೆ ಉಂಟಾಗಿರುವುದರಿಂದ ಸಿಎಡಿ ಕೊರತೆಯನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಆರ್‌ಬಿಐ ವರದಿಯಲ್ಲಿ ಹೇಳಲಾಗಿದೆ.
ಕರೆಂಟ್ ಅಕೌಂಟ್ ಡಿಫಿಸಿಟ್ ಅಂದರೇನು?
ದೇಶ ಆಮದು ಮಾಡಿಕೊಳ್ಳುವ ಎಲ್ಲ ಬಗೆಯ ಸರಕು, ಸೇವೆ ಮತ್ತು ಹಣಕಾಸು ವ್ಯವಹಾರಗಳ ಆದಾಯಗಳು ದೇಶದ ರಫ್ತು ಮೌಲ್ಯಕ್ಕಿಂತ ಹೆಚ್ಚಾದಾಗ ಉಂಟಾಗುವ ವ್ಯತ್ಯಾಸವನ್ನು ಕರೆಂಟ್ ಅಕೌಂಟ್ ಡಿಫಿಸಿಟ್ ಎಂದು ಕರೆಯಲಾಗುತ್ತದೆ.